Advertisement

ಅಪರ ಡಿಸಿ ಹುದ್ದೆಯೂ ಜವಾಬ್ದಾರಿಯದ್ದು: ಡಿಸಿ

06:46 AM Jan 18, 2019 | Team Udayavani |

ಕಲಬುರಗಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಹುದ್ದೆಯೂ ಜವಾಬ್ದಾರಿಯಿಂದ ಕೂಡಿದ್ದಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ಹುದ್ದೆಯಿಂದ ಗೃಹ ಸಚಿವರ ಆಪ್ತ ಕಾರ್ಯದರ್ಶಿಯಾಗಿ ವರ್ಗಾವಣೆಯಾದ ಭೀಮಾಶಂಕರ ತೆಗ್ಗೆಳ್ಳಿ ಅವರಿಗೆ ಗುರುವಾರ ಜಿಲ್ಲಾಡಳಿತ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ, ಬೀಳ್ಕೊಡುವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಸಮರ್ಪಕವಾಗಿ ಎಲ್ಲ ಇಲಾಖೆಗಳತ್ತ ಗಮನಹರಿಸಲು ಹಾಗೂ ಹೆಚ್ಚಿನ ಒತ್ತಡವಿಲ್ಲದೇ ಕಾರ್ಯನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಸೇವೆ ಮುಖ್ಯವಾಗಿದೆ. ಭೀಮಾಶಂಕರ ತೆಗ್ಗೆಳ್ಳಿ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳ ಕಾಲ ವಿಶೇಷ ಭೂಸ್ವಾಧಿನಾಧಿಕಾರಿ, ಪ್ರಭಾರಿ ಫುಡ್‌ ಡಿಡಿ, ಸಹಾಯಕ ಆಯುಕ್ತರು, ಅಪರ ಜಿಲ್ಲಾಧಿಕಾರಿ ಸೇರಿದಂತೆ ಇತರ ಹುದ್ದೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ತಮಗೆ ಹೆಚ್ಚಿನ ಸಹಾಯವಾಯಿತು ಎಂದರು.

ತೆಗ್ಗೆಳ್ಳಿ ಅವರು ತಮ್ಮತ್ತ ಬರುತ್ತಿದ್ದ ಸಮಸ್ಯೆಗಳನ್ನು ತಮ್ಮೊಂದಿಗೆ ಚರ್ಚಿಸಿ ಸರಳವಾಗಿ ಬಗೆಹರಿಸುತ್ತಿದ್ದರು. ಈಗ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆ ಕಾರ್ಯಭಾರವೂ ಅತ್ಯಂತ ಮಹತ್ವದಿಂದ ಕೂಡಿದೆ. ದಿನದಿಂದ ದಿನಕ್ಕೆ ಎದುರಾಗುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವಾಗಿದೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರಿ ಎನ್ನುವ ಸ್ಪಷ್ಟ ಭರವಸೆ ತಮಗಿದೆ ಎಂದು ಹೇಳಿದರು.

ಸಹಾಯಕ ಆಯುಕ್ತ ಎಂ. ರಾಚಪ್ಪ ಮಾತನಾಡಿ, ಭೀಮಾಶಂಕರ ತೆಗ್ಗೆಳ್ಳಿ ವಿಶೇಷ ಭೂಸ್ವಾಧಿ ನಾಧಿಕಾರಿ ಹುದ್ದೆಯೊಂದಿಗೆ ಜಿಲ್ಲೆಯಲ್ಲಿ ಸೇವೆ ಆರಂಭಿಸಿ ತಮ್ಮ ದಕ್ಷತೆ, ಸೇವೆಯಿಂದ ವಿಶೇಷ ಛಾಪು ಮೂಡಿಸಿದರು. ತೆಗ್ಗೆಳಿ ಸಾಹೇಬರು ಜಿಲ್ಲೆಯ ಘತ್ತರಗಾ, ರಟಕಲ್‌ (ರೇವಗ್ಗಿ) ದೇವಸ್ಥಾನಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಕೆಲಸಕ್ಕೆ ಮಾನ್ಯ ನ್ಯಾಯಾಧೀಶರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೈ.ಕ ಭಾಗದಲ್ಲಿ ಜಿಲ್ಲಾಧಿಕಾರಿಯಾಗಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

Advertisement

ಶಿರಸ್ತೇದಾರ ಅನಂತ ಕುಲಕರ್ಣಿ ಮಾತನಾಡಿದರು. ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸ್ವಾಗತಿಸಿ, ನಿರೂಪಿಸಿದರು. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next