Advertisement

ಬಿಜೆಪಿಗೆ ಜನತೆ ತಕ್ಕಪಾಠ ಕಲಿಸುವ ದಿನ ದೂರವಿಲ್ಲ

06:10 PM Aug 13, 2022 | Team Udayavani |

ಧಾರವಾಡ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಧಾರವಾಡ-71 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರದ ವಾರ್ಡ್‌ ಗಳಲ್ಲಿ ಕಾಂಗ್ರೆಸ್‌ನಿಮದ ತಿರಂಗಾ ಯಾತ್ರೆ ನಡೆಸಲಾಯಿತು.

Advertisement

ಮುರುಘಾಮಠದಲ್ಲಿ ಕೆಪಿಸಿಸಿ ಸದಸ್ಯೆ ಶಿವಲೀಲಾ ಕುಲಕರ್ಣಿ ಹಾಗೂ ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಪಿ.ವಿ.ಮೋಹನ್‌ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಪಿ.ವಿ. ಮೋಹನ್‌, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಕೊಡುಗೆ ಸ್ಮರಣೀಯ. ಅನೇಕ ಮಹನೀಯರ ತ್ಯಾಗ-ಬಲಿದಾನ ಪ್ರತೀಕವಾಗಿ ಸ್ವಾತಂತ್ರ್ಯ ಲಭಿಸಿದ್ದು, ಅದನ್ನು ಉಳಿಸಿಕೊಳ್ಳಬೇಕು. ಧ್ವಜ ಸಂಹಿತೆ ಉಲ್ಲಂಘಿಸಿ ಪಾಲಿಸ್ಟರ್‌ ಧ್ವಜ ಹಾರಿಸಲು ಆದೇಶ ನೀಡುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ.

ರಾಷ್ಟ್ರಧ್ವಜ ದೇಶದ ಸ್ವಾಭಿಮಾನದ ಸಂಕೇತ. ಇದಕ್ಕೆ ಅಪಚಾರ ಆಗದಂತೆ ಎಚ್ಚರ ವಹಿಸಬೇಕು. ಬಿಜೆಪಿ ನಾಯಕರು ಢೋಂಗಿತನದ ದೇಶಭಕ್ತಿ ಪ್ರದರ್ಶನ ಮಾಡುತ್ತಿದ್ದು, ಅಗತ್ಯ ವಸ್ತಗಳ ಬೆಲೆ ಏರಿಸುವುದರ ಜತೆಗೆ ಬಡವರ ಜೀವನದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ.

ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದರು. ಮುರುಘಾ ಮಠದಿಂದ ಆರಂಭಗೊಂಡ ಪಾದಯಾತ್ರೆ ಹೆಬ್ಬಳ್ಳಿ ಅಗಸಿ, ಕಾಮನಕಟ್ಟಿ, ನವಲೂರು ಅಗಸಿ, ಹೊಸಯಲ್ಲಾಪುರ, ಮದಾರಮಡ್ಡಿ, ಕೆಸಿಸಿ ಬ್ಯಾಂಕ್‌, ಸುಭಾಷ್‌ ರಸ್ತೆ, ರೀಗಲ್‌ ಸರ್ಕಲ್‌, ಗೊಲ್ಲರ ಒಣಿ, ಕಮಲಾಪುರ, ಮಾಳಾಪೂರ, ಶಿವಾಲಯ, ಗುಲಗಂಜಿಕೊಪ್ಪ ಗಣಪತಿ ಗುಡಿಗೆ ಮುಕ್ತಾಯಗೊಂಡಿತು. ಕೆಪಿಸಿಸಿ ಸದಸ್ಯೆ ಶಿವಲೀಲಾ ಕುಲಕರ್ಣಿ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಅರವಿಂದ ಎಗನಗೌಡರ, ಈಶ್ವರ ಶಿವಳ್ಳಿ, ಪಾಲಿಕೆ ಸದ್ಯಸರಾದ ರಾಜು ಕಮತಿ, ಸೂರವ್ವ ಪಾಟೀಲ, ದೀಪಾ ಸಂತೋಷ ನೀರಲಕಟ್ಟಿ, ಮೈನು ನಧಾಪ, ಆನಂದ ಸಿಂಗನಾಥ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next