Advertisement

ಸಿಲಿಂಡರ್‌ ಕೈಗಾರಿಕೆಗಿಲ್ಲ

06:38 PM May 02, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕುತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿಆಸ್ಪತ್ರೆಗಳಲ್ಲಿ ಆಮ್ಲಜನಕ ಬಳಕೆ ಹೆಚ್ಚುತ್ತಿದೆ.ಅದಕ್ಕನುಗುಣವಾಗಿ ಯಾವುದೇವ್ಯತ್ಯಯವಾಗದಂತೆ ಅನಿಲ ಸಿಲಿಂಡರ್‌ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ಜಿಲ್ಲೆಯ ಆಮ್ಲಜನಕಉತ್ಪಾದಕರು ಹಾಗೂ ಪೂರೈಕೆದಾರರುಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಆರೋಗ್ಯ ತುರ್ತುಪರಿಸ್ಥಿತಿಯಾಗಿದೆ.ಯಾವುದೇ ಕಾರಣಕ್ಕೂಕೈಗಾರಿಕಾ ಉದ್ದೇಶಕ್ಕೆ ಆಮ್ಲಜನಕ ಸಿಲಿಂಡರ್‌ಪೂರೈಸದೆ ಕೇವಲ ವೈದ್ಯಕೀಯ ಉದ್ದೇಶದಬಳಕೆಗೆ ಸರಬರಾಜು ಮಾಡಬೇಕು ಎಂದುನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರುಹೆಚ್ಚುತ್ತಿರುವುದರಿಂದ ಕೊರೊನಾ ಕೇರ್‌ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯೂಆಮ್ಲಜನಕ ಪೂರೈಕೆಯುಕ್ತ ಚಿಕಿತ್ಸೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಹಾಗಾಗಿ ಕೊರತೆಅಥವಾ ವ್ಯತ್ಯಯವಾಗದಂತೆ ಆಮ್ಲಜನಕಸಿಲಿಂಡರ್‌ಗಳ ಪೂರೈಸುವಂತೆ ಸರಬರಾಜುದಾರರಿಗೆ ಸೂಚಿಸಿದರು.

ಹಾಸನದಲ್ಲಿ ಉತ್ಪಾದನೆಯಾಗುವಆಮ್ಲಜನಕವನ್ನು ಜಿಲ್ಲೆಯ ಬಳಕೆಗೆ ಮೊದಲುಪೂರೈಸಿದ ನಂತರವಷ್ಟೇ ಇತರ ಜಿಲ್ಲೆಗಳಿಗೆಕೇವಲ ವೈದ್ಯಕೀಯ ಬಳಕೆಗೆ ಒದಗಿಸಬೇಕು.ಇದನ್ನು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಹಾಗೂ ಕೈಗಾರಿಕಾ ಇಲಾಖೆ ಜಂಟಿನಿರ್ದೇಶಕರು ನಿಯಂತ್ರಿಸಬೇಕು ಎಂದುಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕೊರೊನಾ ಕೇರ್‌ ಕೇಂದ್ರ ಹಾಗೂತಾಲೂಕು ಆಸ್ಪತ್ರೆಗಳ ಬಳಕೆಗೆ 150 ಸಿಲಿಂಡರ್‌ಅಗತ್ಯವಿದ್ದು ಅದನ್ನು ಪಡೆದುಕೊಳ್ಳಲಾ ಗುವುದು ಎಂದು ಉತ್ಪಾದಕರು ಹಾಗೂ ಪೂರೈಕೆದಾರ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಟ್ಟಜಿಲ್ಲಾಧಿಕಾರಿಯವರು ಕೈಗಾರಿಕಾ ಉದ್ದೇಶಕ್ಕೆನೀಡಲಾಗಿರುವ ಸಿಲಿಂಡರ್‌ ವಶಕ್ಕೆ ತೆಗೆದುಕೊಳ್ಳಲು ಆದೇಶ ಹೊರಡಿಸಲಾಗುವುದು.ಅವುಗಳನ್ನು ವೈದ್ಯಕೀಯ ಉದ್ದೇಶಕ್ಕೆಬಳಸಬಹುದಾಗಿದೆ ಎಂದರು.

Advertisement

ಆಮ್ಲಜನಕ ಸಿಲಿಂಡರ್‌ಗಳನ್ನು ಯಾವುದೇವೈಯಕ್ತಿಕ ಬಳಕೆಗೆ ನೀಡುವಂತಿಲ್ಲ. ಹಾಗೆನೀಡದಲ್ಲಿ ಅಥವಾ ಸಂಗ್ರಸಿಕೊಂಡಲ್ಲಿಪ್ರಕರಣ ದಾಖಲಿಸಲಾಗುವುದು ಎಂದುಜಿಲ್ಲಾಧಿಕಾರಿ ಆರ್‌.ಗಿರೀಶ್‌ ಎಚ್ಚರಿಸಿದರು.ಸಭೆಯಲ್ಲಿ ಹಾಜರಿದ್ದ ಅನಿಲ ಪೂರೈಕೆಸಂಸ್ಥೆ ಪ್ರತಿನಿಧಿಗಳು ಜಿಲ್ಲಾಡಳಿತದೊಂದಿಗೆಸಂಪೂರ್ಣ ಸಹಕಾರ ನೀಡುವುದಾಗಿ ಎಂದುಭರವಸೆ ನೀಡಿದರು.ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ,ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌,ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್‌,ಸಹಾಯಕ ಔಷಧಿ ನಿಯಂತ್ರಕ ಡಾ.ಗಿರೀಶ್‌ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next