Advertisement

ಪ್ರಸಕ್ತ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ

11:22 PM Jun 05, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಮಾಡಬೇಕಾದ ಕಾರ್ಯಗಳು, ಸರ್ಕಾರಿ ರಜಾ ದಿನಗಳು ಹಾಗೂ ವಿವಿಧ ಜಯಂತಿಯ ಸಂಪೂರ್ಣ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

Advertisement

ಜೂನ್‌: ಆಂದೋಲನ, ಬಾಲ ಕಾರ್ಮಿಕ ವಿರೋಧಿ ದಿನಾಚರಣೆ, ಶಾಲಾಮಟ್ಟದ ಕ್ರೀಡಾಕೂಟ, ವಿಶ್ವಯೋಗ ದಿನಾಚರಣೆ, ಶಾಲಾ ಹಂತದಲ್ಲಿ ಪ್ರತಿಭಾಕಾರಂಜಿ, ಶಾಲಾ ಹಂತದ ನಾಟಕ ಹಾಗೂ ವಿಜ್ಞಾನ ವಸ್ತುಪ್ರದರ್ಶನ ನಡೆಸಲು ತಿಳಿಸಿದೆ.

ಜುಲೈ: ಹೋಬಳಿ ಮಟ್ಟದ ಕ್ರೀಡಾಕೂಟ, ಮೊದಲ ಹಂತದ ಋಣಾತ್ಮಕ ಮೌಲ್ಯಮಾಪನ, ತಾಲೂಕು ಮಟ್ಟದ ಕ್ರೀಡಾಕೂಟ, ತಾಲೂಕು ಹಂತದ ವಿಜ್ಞಾನ ನಾಟಕ ಮತ್ತು ವಸ್ತು ಪ್ರದರ್ಶನ.

ಆಗಸ್ಟ್‌: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಸ್ವಾತಂತ್ರ್ಯ ದಿನಾಚರಣೆ, ಜಿಲ್ಲಾಮಟ್ಟದ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾದಿನ.

ಸೆಪ್ಟೆಂಬರ್‌: ಶಿಕ್ಷಕರ ದಿನಾಚರಣೆ, ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಮಾಪನ.

Advertisement

ಅಕ್ಟೋಬರ್‌: ಗಾಂಧಿ ಜಯಂತಿ, ಸಮುದಾಯದತ್ತ ಶಾಲೆ, ವಿದ್ಯಾರ್ಥಿಗಳ ಸಂಕಲನಾತ್ಮಕ ಮೌಲ್ಯಮಾಪನ ನಡೆಯಲಿದೆ. ಅಕ್ಟೋಬರ್‌ 6ರಿಂದ ಆಕ್ಟೋಬರ್‌ 20ರವರೆಗೆ ಮಧ್ಯಂತರ ರಜೆ.

ನವೆಂಬರ್‌: ಕನ್ನಡ ರಾಜ್ಯೋತ್ಸವ, ರಾಜ್ಯಮಟ್ಟದ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾಕೂಟ, ಮಕ್ಕಳ ದಿನಾಚರಣೆ, ಕನಕದಾಸ ಜಯಂತಿ, ರಾಷ್ಟ್ರೀಯ ಭಾವೈಕ್ಯ ಸಪ್ತಾಹ, ಸಂವಿಧಾನ ದಿನಾಚರಣೆ.

ಡಿಸೆಂಬರ್‌: ವಿಶ್ವ ಏಡ್ಸ್‌ ದಿನಾಚರಣೆ, ವಿಶ್ವ ವಿಕಲಚೇತನರ ದಿನಾಚರಣೆ, ಮೂರನೇ ರೂಪಣಾತ್ಮಕ ಮೌಲ್ಯಮಾಪನ, ರಾಷ್ಟ್ರೀಯ ಗಣಿತ ದಿನ, ಅಣುಕು ಸಂಸತ್‌ ಸ್ಪರ್ಧೆ.

2020ರ ಜನವರಿ: ಸಾವಿತ್ರಿಭಾಯಿ ಪುಲೆ ದಿನಾಚರಣೆ, ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಮತದಾರರ ದಿನಾಚರಣೆ, ಗಣರಾಜ್ಯ ದಿನಾಚರಣೆ, ಹುತಾತ್ಮರ ದಿನಾಚರಣೆ.

ಫೆಬ್ರವರಿ: ನಾಲ್ಕನೇ ರೂಪಣಾತ್ಮಕ ಮೌಲ್ಯಮಾಪನ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

ಮಾರ್ಚ್‌: ವಿಶ್ವ ಮಹಿಳಾ ದಿನಾಚರಣೆ.

ಏಪ್ರಿಲ್‌: ಸಮಗ್ರ ಸಂಕಲನಾತ್ಮಕ ಮೌಲ್ಯಮಾಪನ, ವಿಶ್ವ ಆರೋಗ್ಯ ದಿನಾಚರಣೆ, ಎರಡನೇ ಸಮುದಾಯದತ್ತ ಶಾಲೆ, ಅಂಬೇಡ್ಕರ್‌ ಜಯಂತಿ ಹಾಗೂ ಏ.12ರಿಂದ ಮೇ 24ರವರೆಗೆ ಬೇಸಿಗೆ ರಜೆ.

ಯಾವ ದಿನಾಂಕದಂದು ಯಾವ ಕಾರ್ಯಕ್ರಮ ನಡೆಸಬೇಕು ಎಂಬಿತ್ಯಾದಿ ಎಲ್ಲ ಮಾಹಿತಿ ಇಲಾಖೆಯ ವೆಬ್‌ಸೈಟ್‌ chooleducation.kar.nic.in ನಲ್ಲಿ ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next