Advertisement

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣ

10:07 AM Nov 01, 2019 | sudhir |

ಉಡುಪಿ: ಕೃಷಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಸೆ. 1ರಿಂದ ಹಮ್ಮಿಕೊಂಡಿರುವ ಬೆಳೆ ಸಮೀಕ್ಷೆ ಕಾರ್ಯ ಜಿಲ್ಲೆಯಾದ್ಯಂತ ಶೇ.98 ಪೂರ್ಣಗೊಂಡಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ನಡೆಯುವ ಈ ಸಮೀಕ್ಷೆ ಉಭಯ ಇಲಾಖೆಗಳ ಸಹಯೋಗದಲ್ಲಿ ಯಶಸ್ವಿ ಯಾಗಿ ನಡೆಯುತ್ತಿದೆ.

Advertisement

ರಾಜ್ಯ ಸರಕಾರಗಳು ಬರ, ಅತಿವೃಷ್ಟಿ ಸಂದರ್ಭದಲ್ಲಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವುದು ವಾಡಿಕೆ. ಆಗ ವಾಸ್ತವಕ್ಕೂ ಹಾಗೂ ಅಂಕಿ ಅಂಶಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿರುವುದರಿಂದ ಆಡಳಿತಾತ್ಮಕ ತೊಂದರೆ ಉಂಟಾಗಿ ಪರಿಹಾರ ಬಿಡುಗಡೆ ತಡವಾಗುವುದು ಸೇರಿದಂತೆ ಅನೇಕ ಸಮಸ್ಯೆ ಎದುರಾಗುತ್ತಿವೆ. ಆದ್ದರಿಂದ ನಿಖರ ಮಾಹಿತಿ ಕಲೆ ಹಾಕಲು ಇಲಾಖೆ ಕಳೆದ ಎರಡು ವರ್ಷಗಳಿಂದ ಈ ಆ್ಯಪ್‌ ಮೂಲಕ ಮಾಹಿತಿ ದಾಖಲಿಸುತ್ತಿದೆ.

ಖಚಿತ ಮಾಹಿತಿ
ಯಾವ ಸರ್ವೆ ಸಂಖ್ಯೆಯ ಜಮೀನಿನಲ್ಲಿ ರೈತ ಯಾವ ಬೆಳೆ ಬೆಳೆಯುತ್ತಿ¨ªಾರೆ ಎಂಬ ಖಚಿತ ಮಾಹಿತಿ ಈ ಸಮೀಕ್ಷೆಯಲ್ಲಿ ದಾಖಲಾಗಲಿದೆ. ಈ ಮಾಹಿತಿ ಸರಕಾರಕ್ಕೆ ಸುಳ್ಳು ಮಾಹಿತಿ ಕೊಡುವುದನ್ನು ತಡೆಯುವ ಜತೆಗೆ ಬಿತ್ತನೆ ಗುರಿ ಸಾಧನೆ, ಬೆಳೆ ಹಾನಿ, ಬೆಳೆ ವಿಮೆ, ಬರ ಮುಂತಾದ ವಿಚಾರಗಳಲ್ಲಿ ಸರಕಾರದ ಅನುದಾನ ಬಳಸಿಕೊಳ್ಳಲು ಈ ಸಮೀಕ್ಷೆ ನೆರವಿಗೆ ಬರಲಿದೆ. ಪರಿಹಾರ ಬಿಡುಗಡೆತಯ ಅನಂತರ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಲು ಈ ಸಮೀಕ್ಷೆ ಅನುಕೂಲವಾಗಲಿದೆ.

ಆ್ಯಪ್‌ ಮೂಲಕ ಅಪ್‌ಲೋಡ್‌
ಜಿಲ್ಲೆಯ 267 ಗ್ರಾಮಗಳಲ್ಲಿ 9,22,181ಪ್ಲಾಟ್‌ಗಳ ಬೆಳೆ ಸಮೀಕ್ಷೆ ಮಾಡಲು 982 ಮಂದಿ ಖಾಸಗಿ ಸಮೀಕ್ಷೆದಾರರು ನೋಂದಾಯಿಸಿದ್ದಾರೆ. ಈಗಾಗಲೇ 9,04,605 ಪ್ಲಾಟ್‌ಗಳ ಸಮೀಕ್ಷೆ ನಡೆದಿದೆ. ಕೃಷಿ ಮತ್ತು ತೋಟಗಾರಿಕೆ ಎರಡೂ ವಿಧದ ಬೆಳೆಗಳ ದತ್ತಾಂಶವನ್ನು ಮೊಬೈಲ್‌ ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಲಾಗಿದೆ. ಈ ಸಮೀಕ್ಷೆಯನ್ನು ಆಧರಿಸಿಯೇ ಸರಕಾರದಿಂದ ಬೆಳೆಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಲೆ ವಿಮೆ ಮೊದಲಾದ ಅಂಶಗಳು ನಿರ್ಧಾರವಾಗಲಿದೆ.

Advertisement

ಶೇ.98 ಪೂರ್ಣ
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಸಮೀಕ್ಷೆದಾರರ ನೆರವಿ ನಿಂದ ಈಗಾಗಲೇ ಶೇ.98ರಷ್ಟು ಪ್ಲಾಟ್‌ಗಳ ಸಮೀಕ್ಷೆ ಪೂರ್ಣಗೊಂಡಿದೆ. ಪ್ರತಿಯೊಂದು ಆರ್‌ಟಿಸಿಗೂ ಪ್ರತ್ಯೇಕವಾಗಿ ಫೋಟೊ ಸಹಿತ ಮಾಹಿತಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಈಗಾಗಲೇ 150ಕ್ಕೂ ಅಧಿಕ ಗ್ರಾಮಗಳಲ್ಲಿ ಶೇ.100 ಸಮೀಕ್ಷೆ ಮುಗಿದಿದೆ.
-ಡಾ| ಎಚ್‌.ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next