Advertisement

ಬೆಂಗಳೂರು: ಸಾಮಾನ್ಯವಾಗಿ ಹೆಚ್ಚು ದಟ್ಟಣೆ ಇರುವ ಪ್ರದೇಶಗಳು ಕೊರೊನಾ ಸೋಂಕಿಗೆ ಮೂಲ. ಆದರೆ, ಬೆಂಗಳೂರಿನಮಟ್ಟಿಗೆ ಇದು ತದ್ವಿರುದ್ಧವಾಗಿದೆಯೇ!?

Advertisement

ಮೂರನೇ ಅಲೆಯಲ್ಲಿ ನಗರದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳ ಪ್ರಕಾರಅಧಿಕ ಜನದಟ್ಟಣೆ ಇರುವ ನಗರದ ಹೃದಯಭಾಗಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಇದ್ದರೆ, ಹೊರವಲಯಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಇದನ್ನು ಸ್ವತಃ ಬಿಬಿಎಂಪಿ ಬಿಡುಗಡೆ ಮಾಡುವ ಬುಲೆಟಿನ್‌ ದೃಢಪಡಿಸಿದೆ.

ಸುಮಾರು ಒಂದು ತಿಂಗಳಲ್ಲಿ ದಾಖಲಾದ ಸೋಂಕಿನ ಪ್ರಕರಣಗಳ ಅಂಕಿ-ಅಂಶಗಳೂ ಇದನ್ನೇಪುಷ್ಟೀಕರಿಸುತ್ತವೆ. ಇನ್ನು ಹಿಂದಿನ ವಾರದಲ್ಲಿಹೊರವಲಯಗಳಲ್ಲಿರುವ 30ಕ್ಕೂ ಅಧಿಕ ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 500-1,000 ಪ್ರಕರಣಗಳುಪತ್ತೆಯಾಗುತ್ತಿವೆ. ಹದಿನೈದಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಸಾವಿರ ಮೇಲ್ಪಟ್ಟು ಕೊರೊನಾ ಕೇಸುಗಳುಪತ್ತೆಯಾಗುತ್ತಿವೆ. ಈ ಪಟ್ಟಿಯಲ್ಲಿ ಬೆಳ್ಳಂದೂರು,ಬೇಗೂರು, ಹೊರಮಾವು, ಎಚ್‌ಎಸ್‌ಆರ್‌ ಲೇಔಟ್‌,ದೊಡ್ಡನೆಕ್ಕುಂದಿ, ವರ್ತೂರು, ಕೋರಮಂಗಲ, ಉತ್ತರಹಳ್ಳಿಯಂತಹ ವಾರ್ಡ್‌ಗಳು ಇವೆ.

ಇದಕ್ಕೆ ತದ್ವಿರುದ್ಧವಾಗಿ ಕೋವಿಡ್‌ ಮೊದಲ ಅಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಕೋರ್‌ಏರಿಯಾದಲ್ಲಿರುವ ವಾರ್ಡ್‌ಗಳ ಸದ್ದೇ ಇಲ್ಲವಾಗಿದೆ.ಉದಾಹರಣೆಗೆ ಪಾದರಾಯನಪುರ, ಮುನೇಶ್ವರನಗರ, ಜಗಜೀವನ್‌ರಾಮ್‌ನಗರ, ರಾಯಾಪುರ,ಲಕ್ಷ್ಮೀದೇವಿನಗರ, ಚಲವಾದಿಪಾಳ್ಯ ಸೇರಿದಂತೆಹತ್ತಾರು ವಾರ್ಡ್‌ಗಳಲ್ಲಿ ಶನಿವಾರದವರೆಗಿನಅಂಕಿ-ಅಂಶಗಳ ಪ್ರಕಾರ ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಒಂದಂಕಿ ಕೂಡ ದಾಟಿಲ್ಲ. ಇನ್ನುಕೆಲವು ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 10-20 ಪ್ರಕರಣಗಳು ಕಂಡುಬರುತ್ತಿವೆ.

ವಲಸಿಗರು ಹೆಚ್ಚು; ಓಡಾಟವೂ ಅಧಿಕ: “ಈ ಬೆಳವಣಿಗೆಗೆ ಪ್ರಮುಖ ಕಾರಣ ಹೊರವಲಯಗಳಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ಆಗಾಗ ಊರಿಗೆ ಹೋಗಿಬರುವುದು, ಕೆಲಸದ ನಿಮಿತ್ತ ಸೇರಿದಂತೆ ಹಲವುಕಾರಣಗಳಿಗೆ ಹೆಚ್ಚು ಸಂಚರಿಸುತ್ತಾರೆ. ಅಲ್ಲದೆ,ವರ್ಟಿಕಲ್‌ ಡೆವಲಪ್‌ಮೆಂಟ್‌ ಇದ್ದು, ಅಪಾರ್ಟ್‌ಮೆಂಟ್‌ಗಳು ಆ ಭಾಗಗಳಲ್ಲಿ ಅಧಿಕ ಸಂಖ್ಯೆಯಲ್ಲಿವೆ.ಇದರಿಂದ ಒಂದೇ ಕಡೆಗಳಲ್ಲಿ ಹೀಗೆ ದೀರ್ಘ‌ಕಾಲಇರುತ್ತಾರೆ. ಈ ಎಲ್ಲ ಅಂಶಗಳು ಸೇರಿಕೊಂಡಿವೆ’ ಎಂದುರಾಜ್ಯ ಕೋವಿಡ್‌ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌ ಅಭಿಪ್ರಾಯಪಡುತ್ತಾರೆ.

Advertisement

ಹೃದಯಭಾಗದಲ್ಲಿ ಓಡಾಟ ಅಷ್ಟಾಗಿಇರುವುದಿಲ್ಲ. ಚಿಕ್ಕಪೇಟೆಯಂಥ ಕಿರಿದಾದ ಮತ್ತುದಟ್ಟಣೆಯುಳ್ಳ ಪ್ರದೇಶ ಕಂಡುಬಂದರೂ, ತುಂಬಾಕಡಿಮೆ ಅವಧಿ ಜನ ಮುಖಾಮುಖೀ ಆಗುತ್ತಾರೆ ಹಾಗೂ ಒಂದೆಡೆ ಇರುತ್ತಾರೆ ಎನ್ನುತ್ತಾರೆ ಅವರು.ಪಾದರಾಯನಪುರದಂತಹ ಹೃದಯಭಾಗಗಳಲ್ಲಿಮೊದಲ ಅಲೆಯಲ್ಲಿ ದೊಡ್ಡ ಸುದ್ದಿಯಾಗಿದ್ದು ನಿಜ.ಆದರೆ, ಅದು ಸೋಂಕು ಪರೀಕ್ಷೆ ಅಥವಾ ಮೊದಲ ಸೋಂಕು ಕಾಣಿಸಿಕೊಂಡಿರುವುದು ಅಥವಾಇನ್ನಾವುದೋ ಕಾರಣಕ್ಕೆ ಆಗಿದ್ದವು. ಆಗಲೂ ಅಂಕಿ-ಅಂಶಗಳನ್ನು ಗಮನಿಸಿದರೆ, ಹೆಚ್ಚು ಸೋಂಕುಪ್ರಕರಣಗಳು ದಾಖಲಾಗಿರುವುದು ಇದೇಹೊರವಲಯಗಳಲ್ಲಿ ಎಂದು ಬಿಬಿಎಂಪಿ ವಾರ್‌ ರೂಂಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಅದೇನೇ ಇರಲಿ, ಕೇಂದ್ರ ಭಾಗಗಳಲ್ಲಿ ಕಡಿಮೆಮತ್ತು ಹೊರಭಾಗಗಳಲ್ಲಿ ಹೆಚ್ಚು ಸೋಂಕು ಹಾಗೂ ಆಸಂಬಂಧದ ಹೇಳಿಕೆಗಳು ಒಂದು ವಿಶ್ಲೇಷಣೆ ಮತ್ತುಅವಲೋಕನವೇ ಹೊರತು, ಯಾವುದೇ ಅಧಿಕೃತಮಾಹಿತಿ ಅಲ್ಲ ಅಥವಾ ಸಂಶೋಧನೆಯಿಂದಲೂ ದೃಢಪಟ್ಟಿಲ್ಲ ಎಂದೂ ತಜ್ಞರು ಸ್ಪಷ್ಟಪಡಿಸಿದ್ದಾರೆ.

 

ತೀವ್ರವಾಗಿ ಹರಡುತ್ತಿರುವ ಆಯ್ದ  ವಾರ್ಡ್‌ಗಳು : ವಾರ್ಡ್‌ ಸಂಖ್ಯೆ- 1, 3, 5, 9, 7, 6, 25, 24, 26, 52, 54, 83, 82, 85, 81, 149,150, 174, 191, 192, 195,196, 197, 184, 160,198, 159, 178, 73.ಇವೆಲ್ಲವೂಕೆಂಪುಪಟ್ಟಿಯಲ್ಲಿದ್ದು,ಕಳೆದೊಂದು ವಾರದಿಂದ ಸರಾಸರಿ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ

ಕಡಿಮೆ ಸೋಂಕತ ವಾರ್ಡ್‌ಗಳು : ವಾರ್ಡ್‌ ಸಂಖ್ಯೆ- 139, 119, 142, 96, 97, 106, 98, 77, 102,124, 117, 91, 60, 61, 47, 34, 144. ಇವೆಲ್ಲವೂ ಹಸಿರು ಪಟ್ಟಿಯಲ್ಲಿದ್ದು, ಸರಾಸರಿ 0-250 ಪ್ರಕರಣಗಳು ದಾಖಲಾಗುತ್ತಿವೆ.

ಕೇಂದ್ರಭಾಗಕ್ಕೂ ವಿಸ್ತರಣೆ: ಆತಂಕ : ಇದುವರೆಗೆ ಹೊರವಲಯದಲ್ಲಿಸೋಂಕು ಪ್ರಕರಣಗಳುಪತ್ತೆಯಾಗುತ್ತಿದ್ದವು. ಆದರೆ, ಕಳೆದ2-3 ದಿನಗಳಿಂದ ಹೃದಯಭಾಗಗಳಲ್ಲೂ ತೀವ್ರವಾಗಿಹರಡುತ್ತಿರುವುದನ್ನುಕಾಣಬಹುದು. ಇದಕ್ಕಾಗಿಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು,ನಿಯಮಗಳ ಪಾಲನೆಗೆಕಟ್ಟುನಿಟ್ಟಿನ ಕ್ರಮಗಳನ್ನುಕೈಗೊಳ್ಳಲಾಗಿದೆ’ ಎಂದುಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ ಮತ್ತು ಐಟಿ)ಡಾ.ತ್ರಿಲೋಕ್‌ಚಂದ್ರ “ಉದಯವಾಣಿ’ಗೆ ತಿಳಿಸಿದ್ದಾರೆ.

ಸೋಂಕಿತರಿಗಿಂತ ಗುಣಮುಖರೇ ಹೆಚ್ಚು! :

ಬೆಂಗಳೂರು: ಕೋವಿಡ್‌ ಮೂರನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ಒಂದೇ ದಿನ ಗರಿಷ್ಠ ಸಂಖ್ಯೆಯಲ್ಲಿ ಅಂದರೆ 27 ಸಾವಿರಕ್ಕೂ ಅಧಿಕ ಜನ ಗುಣಮುಖರಾಗಿದ್ದು, ಇದು ಸೋಂಕಿತ ಪ್ರಕರಣಗಳಿಗಿಂತ ಹೆಚ್ಚಾಗಿದೆ!

ಸೋಮವಾರ 21,569 ಸೋಂಕಿತ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಬೆನ್ನಲ್ಲೇ ಇದಕ್ಕಿಂತ ಹೆಚ್ಚು 27,008ಗುಣಮುಖರಾಗಿದ್ದಾರೆ. ಸೋಂಕಿತರ ಪ್ರಮಾಣ ಶೇ.22.79ರಷ್ಟಿದ್ದರೆ, ಸೋಂಕು ಮುಕ್ತರಾಗುವವರ ಪ್ರಮಾಣ ಶೇ.84.89 ಇದೆ. ಇದು ತುಸು ಸಮಾಧಾನಕರ ಬೆಳವಣಿಗೆಯಾಗಿದ್ದು,ಐಸೋಲೇಷನ್‌ನಲ್ಲಿದ್ದ ಸೋಂಕಿತರು ವಾರದ ನಂತರಅಟೋಮೆಟಿಕ್‌ ಆಗಿ ಸೋಂಕು ಮುಕ್ತ ಎಂದು ಪರಿಗಣಿಸಿದ್ದರ ಫ‌ಲ ಎಂದು ವಿಶ್ಲೇಷಿಸಲಾಗುತ್ತಿದೆ.

ನಗರದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,26,385 ಆಗಿದ್ದು, ಈಮೂಲಕ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 14.09 ಇದೆ. ಸೋಮವಾರ 79,186ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಉಳಿದ ದಿನಗಳಿಗೆ ಹೋಲಿಸಿದರೆ,ಪರೀಕ್ಷೆಗೊಳಪಡಿಸಿದ ಮಾದರಿಗಳ ಸಂಖ್ಯೆ ತುಂಬಾ ಕಡಿಮೆ. ಇನ್ನು ಸೋಂಕಿಗೆಬಲಿಯಾದವರ ಸಂಖ್ಯೆ 9 ಆಗಿದ್ದು, ಇದರೊಂದಿಗೆ 16,508 ಜನ ಇದುವರೆಗೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಬುಲೆಟಿನ್‌ ತಿಳಿಸಿದೆ.

 

-ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next