Advertisement
ಸರಕಾರಿ ಅಂಕಿಅಂಶಗಳ ಪ್ರಕಾರ ಉಸಿರಾಟ ತೊಂದರೆ ಗಳಿಗೆ ಮುನ್ನ ವಾಸನೆ ಮತ್ತು ರುಚಿ ನಷ್ಟದ ಲಕ್ಷಣಗಳು ವರದಿಯಾಗಿವೆ. ಹಾಗಾಗಿ ಇದು ಸೋಂಕಿನ ಲಕ್ಷಣವಾಗಿರ ಬಹುದು. ವಯಸ್ಸಾದವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಆಯಾಸ, ಅತಿಸಾರ, ರುಚಿ ನಷ್ಟ ದಂತಹ ಲಕ್ಷಣಗಳಿರುತ್ತವೆ. ಮಕ್ಕಳಲ್ಲಿ ಜ್ವರ, ಕೆಮ್ಮಿನ ಲಕ್ಷಣ ಗಳಿಲ್ಲದ ಪ್ರಕರಣಗಳೂ ಕಂಡುಬಂದಿವೆ ಎನ್ನಲಾಗಿದೆ.
ಕೆಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶನಿವಾರ ಹಿರಿಯ ಸಚಿವರು, ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಸೋಂಕು ಹೆಚ್ಚಿರುವ ರಾಜ್ಯಗಳ ಸ್ಥಿತಿಗತಿ ವರದಿ ಪಡೆದ ಅವರು, ಮುಂದೆ ತೆಗೆದುಕೊಳ್ಳಬೇಕಾಗಿರುವ ತುರ್ತು ಕ್ರಮಗಳ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದಾರೆ. ಈ ರಾಜ್ಯಗಳ ಆಸ್ಪತ್ರೆಗಳಲ್ಲಿನ ಹಾಸಿಗೆ ಸಾಮರ್ಥ್ಯವೂ ಕಡಿಮೆಯಾಗುತ್ತಿದ್ದು, ಮುಂದೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೂ.16 ಮತ್ತು 17ರಂದು ಸಿಎಂಗಳ ಸಭೆ ನಡೆಯುತ್ತಿದ್ದು, ಮುಂದೆ ರೂಪಿಸಬೇಕಾದ ಕ್ರಮಗಳ ಬಗ್ಗೆ ಯೋಜನೆ ತಯಾರಿಸುವ ಸಲುವಾಗಿ ಈ ಸಭೆ ಕರೆಯಲಾಗಿತ್ತು ಎಂದೂ ಹೇಳಲಾಗುತ್ತಿದೆ.
Related Articles
Advertisement