ಚಿಕ್ಕಮಗಳೂರು : ಕಾಂಗ್ರೆಸ್ ಮುಸಲ್ಮಾನರ ಪರವಾಗಿದ್ದಕ್ಕೆ ದೇಶ ವಿಭಜನೆಯಾಗಿದ್ದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ಆಜಾನ್ ಪರ ಕಾಂಗ್ರೆಸ್ ಇದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಟಾಂಗ್ ನೀಡಿ, ದೇಶದ ನ್ಯಾಯಾಲಯದ ತೀರ್ಪಿ ಗಿಂತ ನನ್ನದು ಮತ ಬ್ಯಾಂಕ್ ರಾಜಕಾರಣ ಎನ್ನುವಂತಿದೆ. ಇದು ಮತೀಯವಾದದ ಓಲೈಕೆ ಅಲ್ಲದೆ ಮತ್ತೇನು ಅಲ್ಲ. ಕೋರ್ಟ್ ಮೈಕ್ ಸೌಂಡು ಎಷ್ಟಿರಬೇಕು ಎನ್ನುವುದನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.ನಾವು ಮುಸ್ಲಿಮರ ಪರವಾಗಿ ಇದ್ದೇವೆ, ಹಿಂದೂಗಳ ಪರ ಅಲ್ಲ ಎಂಬ ನಿಲುವು ಕಾಂಗ್ರೆಸ್ ನದ್ದು ಎಂದರು.
ಕಾಂಗ್ರೆಸ್ ಯಾವತ್ತು ಹಿಂದೂಗಳ ಪರವಾಗಿಲ್ಲ. ಕಾಂಗ್ರೆಸ್ ದೇಶದ ಪರವಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ. ಅಂಬೇಡ್ಕರ್ ರವರ ಹೆಸರು ಹೇಳುವ ನೈತಿಕತೆಯೂ ಕೂಡ ಕಾಂಗ್ರೆಸ್ಸಿಗಿಲ್ಲ. ಅಂಬೇಡ್ಕರ್ ಸಂವಿಧಾನ ಮತೀಯವಾದದ ತಾರತಮ್ಯ ಮಾಡುವುದನ್ನು ಸಮರ್ಥಿಸಿಲ್ಲ ವಿರೋಧಿಸಿದೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಮಹಾನುಭಾವರು ನ್ಯಾಯಾಲಯ, ಸಂವಿಧಾನದ ವಿರುದ್ಧವಾಗಿ ಇವರು ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ದೇಶದ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಮುಂದೆಯೂ ಕೂಡ ಉತ್ತರ ಕೊಡುತ್ತಾರೆ. ಭಜನೆ ಮಾಡುವ ಜನ ಭಯೋತ್ಪಾದಕರಂತೆ ಕಾಣುತ್ತಾರೆ.ಅವರದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಇಟ್ಟವರು ಬ್ರದರ್ ತರ ಕಾಣುತ್ತಾರೆ. ಇದೇ ಕಾಂಗ್ರೆಸ್ ಅಧೋಗತಿಗೆ ಕಾರಣವಾಗಿದೆ ಎಂದರು.