Advertisement

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೇಶ ಗಣನೀಯ ಸಾಧನೆ: ಇಸ್ರೊ ಮಾಜಿ ಅಧ್ಯಕ್ಷ ಕಿರಣಕುಮಾರ

02:37 PM Jul 18, 2022 | Team Udayavani |

ಹುಬ್ಬಳ್ಳಿ: ಸ್ವಾತಂತ್ರ್ಯ ನಂತರ ಭಾರತವು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರಲ್ಲೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇಡೀ ವಿಶ್ವವೇ ಭಾರತದತ್ತ ಮುಖ ಮಾಡುವಂತಹ ಸಾಧನೆ ಮಾಡಿದೆ. ಇದೆಲ್ಲವನ್ನೂ ದೇಶದ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ ಎನ್ನುವುದು ಹೆಮ್ಮೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಕಿರಣಕುಮಾರ ಹೇಳಿದರು.

Advertisement

ರವಿವಾರ ವಿಶ್ವೇಶ್ವರ ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನಮ್ಮದೆ ರಾಕೆಟ್‌ ಪಿಎಸ್‌ಎಲ್‌ ಮೂಲಕ ಪ್ರಪಂಚದ 104 ಉಪಗ್ರಹಗಳ ಒಂದು ಸಮೂಹವನ್ನು ಒಂದೇ ಒಂದು ಉಡಾವಣೆಯಲ್ಲಿ ಮಾಡಿದ್ದು, ಇಡೀ ವಿಶ್ವ ಭಾರತದತ್ತ ನೋಡುವಂತಾಯಿತು. ಚಂದ್ರನಲ್ಲಿ ನೀರಿನ ಅಂಶವಿದೆ ಎಂದು ತೋರಿಸಿದ್ದು ನಮ್ಮ ದೇಶದ ಉಪಗ್ರಹ ಚಂದ್ರಯಾನ. ಮಂಗಳ ಗ್ರಹಕ್ಕೆ ಹತ್ತು ತಿಂಗಳ ಕಾಲ ಪ್ರಯಾಣ ಮಾಡಿ ಸುಮಾರು 60 ಕೋಟಿ ಕಿಮೀ ಸಂಚರಿಸಿ ನಿರ್ದಿಷ್ಟವಾದ ಸ್ಥಳದಲ್ಲಿದೆ. ಇತ್ತೀಚಿನ ಜೇಮ್ಸ್‌ವೆಬ್‌ ಟೆಲಿಸ್ಕೋಪ್‌ ಮೂಲಕ ಬ್ರಹ್ಮಾಂಡದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಮೊದಲು ನಮ್ಮಲ್ಲಿ ಅಸ್ಟ್ರೋಸ್ಯಾಟ್‌ ಟೆಲಿಸ್ಕೋಪ್‌ ಇಡೀ ಅಲ್ಟ್ರಾವೈಲೆಟ್‌ನ ಅತ್ಯಂತ ಸೂಕ್ಷ್ಮ ಕಿರಣಗಳನ್ನು ತಿಳಿಯಲು ಸಾಧ್ಯವಾಗಿತ್ತು. ಇಂತಹ ಹಲವು ಸಾಧನೆಗಳು ಯುವ ವಿಜ್ಞಾನಿಗಳಿಗೆ ಮಾದರಿ ಮತ್ತು ಪ್ರೇರಣೆಯಾಗಲಿವೆ. ವಿದ್ಯಾರ್ಥಿಗಳು ಜ್ಞಾನಾರ್ಜನೆ, ಹೊಸ ಆವಿಷ್ಕಾರದ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.

ಬಾಹ್ಯಾಕಾಶ ತಂತ್ರಜ್ಞಾನದಿಂದ ಮುನ್ಸೂಚನೆ, ಸಮುದ್ರದ ಬಣ್ಣದ ಮೂಲಕ ಮೀನಿನ ಆಹಾರ ಸರಪಳಿ ಗುರುತಿಸಿ ಮೀನುಗಾರ ಯಾವ ಸ್ಥಳದಲ್ಲಿ ಹೋದರೆ ಮೀನು ಸಿಗಲಿದೆ ಎಂಬುವುದನ್ನು ತೋರಿಸು ತ್ತದೆ. ಅವರ ಮಾತೃಭಾಷೆಯಲ್ಲಿ ಮುಂದಿನ ವಿಪತ್ತು, ಗಡಿ ಹೀಗೆ ಸಮಗ್ರ ಮಾಹಿತಿ ನೀಡುತ್ತದೆ. ಅದರಂತೆ ರೈತರಿಗೆ ಮಳೆ ಮುನ್ಸೂಚನೆ, ಹೀಗೆ ಹತ್ತಾರು ಕ್ಷೇತ್ರದಲ್ಲಿ ಬಾಹ್ಯಕಾಶ ತಂತ್ರಜ್ಞಾನ ಕೆಲಸ ಮಾಡುತ್ತಿದೆ. ವಿಜ್ಞಾನದ ಬೆಳವಣಿಗೆಯಿಂದ ಸಾಕಷ್ಟು ಸೌಲಭ್ಯಗಳನ್ನು ಹೊಂದಿದ್ದೇವೆ. ಆದರೂ ಇದರಿಂದ ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಮಿತ ಬಳಕೆ ಇದಕ್ಕೆ ಪರಿಹಾರವಾಗಿದೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳ ಸಂಶೋಧನೆ ಮರೆಯುವಂತಿಲ್ಲ ಎಂದರು.

ಭಂಡಿವಾಡ ಹಾಗೂ ಅಣ್ಣಿಗೇರಿ ಗಿರೀಶ ಆಶ್ರಮದ ಡಾ| ಎ.ಸಿ. ವಾಲಿ ಮಹಾರಾಜ, ಉದ್ಯಮಿಗಳಾದ ವಿಜಯಕುಮಾರ ಶೆಟ್ಟರ, ವೀರೇಂದ್ರ ಕೌಲಗಿ, ಸಮಾಜದ ಮುಖಂಡರಾದ ಶರಣಪ್ಪ ಕೊಟಗಿ, ಶಿವಣ್ಣ ಅಂಗಡಿ, ಸೋಮಶೇಖರ ಉಮರಾಣಿ, ವೀರಣ್ಣ ಮಳಗಿ, ಕಿರಣ ಹುಬ್ಬಳ್ಳಿ, ಸಂಕಲ್ಪ ಶೆಟ್ಟರ, ಮೃತ್ಯುಂಜಯ ಮರೋಳ, ಚನ್ನು ಹೊಸಮನಿ, ಸಹನಾ ಉಪ್ಪಿನ, ಆನಂದ ಉಪ್ಪಿನ, ಚನ್ನಬಸ್ಸಪ್ಪ ಧಾರವಾಡ ಶೆಟ್ಟರ, ವಿರುಪಾಕ್ಷಿ ಬಿಸರಳ್ಳಿ, ನಿವೃತ್ತ ಪೊಲೀಸ್‌ ಅಧಿಕಾರಿ ವಿಜಯಕುಮಾರ ಬಿಸನಳ್ಳಿ, ಪಾಲಿಕೆ ಸದಸ್ಯರಾದ ಸೀಮಾ ಮೊಗಲಿಶೆಟ್ಟರ, ಮೀನಾಕ್ಷಿ ವಂಟಮೂರಿ, ಶಿವಗಂಗಾ ಮಾನಶೆಟ್ಟರ ಇನ್ನಿತರರಿದ್ದರು.

Advertisement

ಪ್ರತಿಯೊಬ್ಬರಲ್ಲೂ ಅಸಾಧರಣ ಪ್ರತಿಭೆಯಿದೆ. ಪರಿಶ್ರಮದಿಂದ ತಂಡವಾಗಿ ಕೆಲಸ ಮಾಡಬೇಕು. ಇಡೀ ಮಾನವ ಕುಲಕ್ಕೆ ಒಳಿತು ಮಾಡುವ ಕೆಲಸ ಆಗಬೇಕು. ಪ್ರತಿಭಾ ಪುರಸ್ಕಾರ ಮುಂದಿನ ಶಿಕ್ಷಣಕ್ಕೆ ಪ್ರೇರಣೆ ನೀಡಲಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಭದ್ರ ಬುನಾದಿಯಿದ್ದಂತೆ. –ವಿದ್ಯಾವತಿ ಕೊಟ್ಟೂರಶೆಟ್ಟರ, ಅಡಿಷನಲ್‌ ಅಡ್ವೋಕೇಟ್‌ ಜನರಲ್‌

ಸ್ಟಾರ್ಟ್‌ಅಪ್‌ ಗಳಲ್ಲಿ ಬಹುತೇಕ ವೈಫಲ್ಯತೆಗಳೇ ಹೆಚ್ಚಿವೆ. ವೈಫಲ್ಯತೆಗಳಿಗೆ ಕಾರಣ ಹುಡುಕಿ ಅವುಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವೀರಶೈವರು ತಮ್ಮ ಹಲವು ಉದ್ಯೋಗಗಳಿಂದ ವಿಮುಖರಾಗಿದ್ದಾರೆ. ಮೂಲ ಕಸುಬುಗಳ ಮೂಲಕ ಉತ್ತಮ ಜೀವನ ಕಂಡುಕೊಳ್ಳಬೇಕು. ಸಣ್ಣ ಕೆಲಸಗಳನ್ನು ಕೂಡ ಶ್ರದ್ಧೆ ಹಾಗೂ ಪ್ರಾಮಾಣಿಕವಾಗಿ ಮಾಡಬೇಕು. –ಆನಂದ ಸಂಕೇಶ್ವರ, ವಿಆರ್‌ಎಲ್‌ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next