Advertisement
ಐಪಿಸಿ, ಸಿಆರ್‌ಪಿ ಕಾಯ್ದೆಯ ಮೂಲಕವೂ ಸಮಾಜಘಾತುಕ ವ್ಯಕ್ತಿಗಳ ನಿಯಂತ್ರಣ ಆಗದಿದ್ದಾಗ ಗೂಂಡಾ ಕಾಯ್ದೆಯ ಬಳಸಿ ನಿಯಂತ್ರಣಕ್ಕೆ ತರಬಹುದು. ಆದರೆ, ಈ ಕಾಯ್ದೆ ಬಳಸುವಾಗ ಸಾಕಷ್ಟು ಜಾಗ್ರತೆ ವಹಿಸುವುದು ಅತ್ಯಗತ್ಯ ಎಂದರು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಮಾಜಘಾತುಕರ ನಿಯಂತ್ರಣದ ಜೊತೆಗೆ ಸಾರ್ವಜನಿಕರ ರಕ್ಷಣೆಗಾಗಿ ಗೂಂಡಾ ಕಾಯ್ದೆ ಅನ್ವಯ ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಅವಕಾಶ ಇದೆ.
Related Articles
Advertisement
ಅದೇ ರೀತಿ ಪ್ರತಿಯೊಬ್ಬರೂ ಅಧ್ಯಯನಶೀಲರಾಗಬೇಕು ಎಂದು ತಿಳಿಸಿದರು. ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ| ಎಂ.ಎ. ಸಲೀಂ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ, ಶಾಂತಿಯುತ ವಾತಾವರಣ ಕಾಪಾಡುವಲ್ಲಿ ಪೊಲೀಸರ ಕರ್ತವ್ಯ ಅತ್ಯಂತ ಮಹತ್ವದ್ದಾಗಿದೆ.
ಸಮಾಜದಲ್ಲಿನ ದುಷ್ಟಶಕ್ತಿ, ದುಷ್ಕರ್ಮಿ, ಸಮಾಜಘಾತುಕ ಶಕ್ತಿಗಳ ವಿರುದ್ದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಇರುವ ಪ್ರಬಲ, ಶಕ್ತಿಯುತ ಗೂಂಡಾ ಕಾಯ್ದೆಯನ್ನು ಸರಿಯಾಗಿ ಬಳಕೆ ಮಾಡಬೇಕು. ಸಮಾಜಘಾತುಕ ಶಕ್ತಿಗಳನ್ನ ಗೂಂಡಾ ಕಾಯ್ದೆಯಡಿ ಬಂಧಿಸುವ ಮೂಲಕ ಇತರರಿಗೆ ಕಠಿಣ ಸಂದೇಶ ರವಾನಿಸುವಂತಾಗಬೇಕು ಎಂದು ತಿಳಿಸಿದರು. 1947ಕ್ಕೂ ಮುನ್ನ ಬ್ರಿಟಿಷರು ಅನೇಕ ರಾಷ್ಟ್ರೀಯ ನಾಯಕರ ವಿರುದ್ಧ ಗೂಂಡಾ ಕಾಯ್ದೆ ಬಳಸುತ್ತಿದ್ದರು.
1947ರ ನಂತರ ಈ ಕಾಯ್ದೆಯ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ತಿದ್ದುಪಡಿ ತರಲಾಗುತ್ತಿದೆ. ಈ ಕಾಯ್ದೆಯ ಅನ್ವಯ ಸಮಾಜಘಾತುಕ ಶಕ್ತಿಗಳನ್ನ ಬಂಧಿಸಿ, 1 ವರ್ಷದವರೆಗೆ ಬಂಧನದಲ್ಲಿಡಬಹುದು. ಈ ಕಾಯ್ದೆ ಅನುಷ್ಠಾನಗೊಳಿಸುವಾಗ ಸಾಕಷ್ಟು ಕ್ರಮ, ಮಾನದಂಡ ಅನುಸರಿಸಬೇಕಿದೆ ಎಂದರು.
ಪೂರ್ವ ವಲಯದಲ್ಲಿ 2015 ರಲ್ಲಿ ಗೂಂಡಾ ಕಾಯ್ದೆ ಅನ್ವಯ 16 ಪ್ರಕರಣ ಮಾತ್ರ ದಾಖಲಾಗಿವೆ. 2016 ರಲ್ಲಿ 8, ಈ ವರ್ಷ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ದಾವಣಗೆರೆ, ಚಿತ್ರದುರ್ಗ ಇತರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿಲ್ಲ. ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಇತರೆ ಸಂಘಟಿತ ಅಪರಾಧಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಯನ್ನ ಸರಿಯಾಗಿ ಬಳಸಬೇಕು ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಸ್ವಾಗತಿಸಿದರು. ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್ ನಿರೂಪಿಸಿದರು. ಗ್ರಾಮಾಂತರ ಉಪಾಧೀಕ್ಷಕ ಬಿ.ಎಸ್. ನೇಮಗೌಡ ವಂದಿಸಿದರು. ಪೂರ್ವ ವಲಯದ ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಯ 60ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು.