Advertisement

ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಕೊಡುಗೆ ಅಪಾರ

02:07 PM May 16, 2022 | Team Udayavani |

ಸಿಂಧನೂರು: ಸರಕಾರವೇ ಎಲ್ಲವನ್ನು ಮಾಡಬೇಕು ಎಂದರೆ, ಕೆಲವು ಬಾರಿ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆಯ ಸುಧಾರಣೆಗೆ ಸಹಕಾರಿ ಕ್ಷೇತ್ರವೂ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

Advertisement

ನಗರದ ಕನಕದಾಸ ಕಾಲೇಜಿನಲ್ಲಿ ತುಂಗಭದ್ರಾ ಪತ್ತಿನ ಸೌಹಾರ್ದ ಸಹಕಾರಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿಇಒಗೆ ಬೀಳ್ಕೊಡುಗೆ, ನೂತನ ಸಿಇಒಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

115 ವರ್ಷಗಳ ಹಿಂದೆ ಜನ್ಮ ತಳೆದ ಸಹಕಾರಿ ಕ್ಷೇತ್ರವೂ ಇಂದು ವೇಗವಾಗಿ ಬೆಳೆಯುತ್ತಿದೆ. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆಗೆ ಆಸರೆಯಾಗಿದ್ದು, ಉದ್ಯೋಗ ಕಲ್ಪಿಸುವುದರಲ್ಲೂ ಈ ಕ್ಷೇತ್ರ ಮುಂದಿದೆ. ಕಳೆದ 20 ವರ್ಷಗಳಲ್ಲಿನ ಶರವೇಗದ ಬೆಳವಣಿಗೆಯಿಂದ ಕೋಟ್ಯಂತರ ವ್ಯವಹಾರ ನಡೆಸಲಾಗುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ದೊರೆಯುತ್ತದೆ. ಸಹಕಾರಿ ಕ್ಷೇತ್ರ ಉಳಿಯಬೇಕಾದರೆ, ಗ್ರಾಹಕರು, ಸಿಬ್ಬಂದಿ, ಆಡಳಿತ ಮಂಡಳಿ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ. 14 ವರ್ಷಗಳ ಚನ್ನಬಸಪ್ಪ ಮಸ್ಕಿ ನಮ್ಮ ಸಂಸ್ಥೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದು, ಶ್ಲಾಘನೀಯ ಎಂದರು.

ತಾಪಂ ಮಾಜಿ ಅಧ್ಯಕ್ಷ ರಮೇಶಪ್ಪ ಸಾಹುಕಾರ್‌ ಮಾತನಾಡಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರು ಸೂಪರ್‌ ಸೀಡ್‌ ಆಗಿದ್ದು, ಸೊಸೈಟಿಯನ್ನು ಪುನಶ್ಚೇತನಗೊಳಿಸಿದವರು. ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಅವರು, ಬ್ಯಾಂಕ್‌ ಸ್ಥಾಪನೆಯ ಕನಸು ಕಂಡಿದ್ದರು. ನಾನಾ ಕಾರಣಗಳಿಂದ ಈ ಸಹಕಾರಿಯನ್ನು ತೆರೆದರು ಎಂದರು.

ಸನ್ಮಾನ, ಬೀಳ್ಕೊಡುಗೆ: ಈ ವೇಳೆ ತುಂಗಭದ್ರಾ ಪತ್ತಿನ ಸೌಹಾರ್ದ ಸಹಕಾರಿಯಿಂದ ನಿರ್ಗಮಿತ ಸಿಇಒ ಚನ್ನಬಸಪ್ಪ ಮಸ್ಕಿ ಅವರನ್ನು ಸನ್ಮಾನಿಸ ಲಾಯಿತು. ಹೊಸ ಸಿಇಒ ಹನುಮಂತಪ್ಪ ಬೇರಿYಯನ್ನು ಸ್ವಾಗತಿಸಲಾಯಿತು. ಸಹಕಾರಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ್‌, ಸಹಕಾರಿ ನಿರ್ದೇಶಕರಾದ ಹನುಮಂತಪ್ಪ, ವೆಂಕಣ್ಣ ತಿಪ್ಪನಹಟ್ಟಿ, ಸಿದ್ರಾಮೇಶ ಮನ್ನಾಪುರ, ಹೊಸಗೇರಪ್ಪ ಪೂಜಾರಿ ಸೇರಿದಂತೆ ಇತರರು ಇದ್ದರು. ಹುಸೇನಪ್ಪ ಕಾರ್ಯಕ್ರಮ ನಿರ್ವಹಿಸಿದರು.ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next