Advertisement

ಕನ್ನಡ ನಾಡಿಗೆ ಅರಸು ಸಮುದಾಯದ ಕೊಡುಗೆ ಅಪಾರ

04:04 PM Nov 01, 2021 | Team Udayavani |

ಚಿಕ್ಕಮಗಳೂರು: ಅರಸು ಸಮುದಾಯದ ಶ್ರೇಯೋಭಿವೃದ್ಧಿಗೆ ಕಂಕಣಬದ್ಧರಾಗುವುದಾಗಿ ಮೈಸೂರು ಮಹಾರಾಜ ಮನೆತನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

Advertisement

ಭಾನುವಾರ ನಗರದ ತೇಗೂರು ರಸ್ತೆಯಲ್ಲಿ 3 ಕೋಟಿ 70 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿನಿರ್ಮಿಸಿರುವ ಜಿಲ್ಲಾ ಅರಸು ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.ಅರಸು ಸಮುದಾಯ ಇಡೀ ನಾಡಿಗೆ ಅಪಾರಕೊಡುಗೆ ನೀಡಿದೆ. ಇಂತಹ ಭವ್ಯ ಇತಿಹಾಸಹೊಂದಿದ ಸಮುದಾಯದ ಅಭಿವೃದ್ಧಿಗೆ ಐಕ್ಯತೆ ಮತ್ತು ಒಗ್ಗಟ್ಟು ಪ್ರದರ್ಶಿಸಬೇ ಕಿದೆ ಎಂದು ಅಭಿಪ್ರಾಯಿಸಿದರು.

ಅರಸು ಸಂಘಕ್ಕೆ 100 ವರ್ಷ ತುಂಬುತ್ತಿರುವಮತ್ತು ಅರಸು ಮಹಾ ಸಮ್ಮೇಳನ ನಡೆಯದೆ40 ವರ್ಷ ಆದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಅರಸು ಮಹಾಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಶಾಸಕ ಸಿ.ಟಿ. ರವಿ ಮಾತನಾಡಿ, ಅರಸುಸಮುದಾಯದವರು ಧರ್ಮ ಮತ್ತು ಸಂಸ್ಕೃತಿಗೆಎಂದೂ ಬೆನ್ನು ತಿರುಗಿಸಿದವರಲ್ಲ, ಎದೆಕೊಟ್ಟುನಿಂತವರು. ಉತ್ತರ ಭಾರತದಲ್ಲಿ ನಮ್ಮ ಸಂಸ್ಕೃತಿಗೆಧಕ್ಕೆ ತರುವ ಅಪಚಾರ ನಡೆಯುತ್ತಿತ್ತೋ, ಅದುದಕ್ಷಿಣ ಭಾರತದಲ್ಲಿಯೂ ನಡೆಯತ್ತಿತ್ತು. ಅಂದು ವಿಜಯನಗರ ಸಾಮ್ರಾಜ್ಯಕ್ಕೆ ಸರ್ವಸ್ವವನ್ನುಸಮರ್ಪಿಸಿ ನಿಂತದ್ದು ಮೈಸೂರು ಸಂಸ್ಥಾನ ಎಂದರು.

ಅರಸು ಸಮುದಾಯದ ಅಭಿವೃದ್ಧಿಗೆ ಸಿಂಹಪಾಲು ಅನುದಾನವನ್ನು ತಾವು ಶಾಸಕರಾದಬಳಿಕ ನೀಡಿದ್ದೇನೆ. ಮುಂದಿನ ದಿನಗಳಲ್ಲಿಸಮುದಾಯದ ಅಭಿವೃದ್ದಿಗೆ ಇನ್ನಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು.

Advertisement

ವಿಧಾನ ಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಮಾತನಾಡಿ, ಶ್ರಮ, ಇಚ್ಛಾಶಕ್ತಿಹೊಂದಿದ್ದಾಗ ನಾವು ಕೈಗೊಳ್ಳುವ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲುಸಾಧ್ಯವಾಗುತ್ತದೆ. ಇದಕ್ಕೆ ಅರಸು ಸಮುದಾಯ ಭವನ ನಿರ್ಮಾಣವೇ ಸಾಕ್ಷಿ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಮೈಸೂರು ರಾಜ ಮನೆತನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.ಪ್ರಜಾಪ್ರತಿನಿ ಧಿ ವ್ಯವಸ್ಥೆಯನ್ನು ಅಂದಿನಮಹಾರಾಜರಾದ ನಾಲ್ವಡಿ ಕೃಷ್ಣರಾಜ್‌ ಅರಸರು ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ಆಡಳಿತಾವ ಧಿ ಸುವರ್ಣ ಯುಗವಾಗಿತ್ತು ಎಂದರು.

ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಶಿಕ್ಷಣ, ಆರೋಗ್ಯ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ,ಅಂಗವಿಕಲರ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹೀಗೆ ಹಲವಾರು ಕ್ಷೇತ್ರಗಳಲ್ಲಿಕೊಡುಗೆ ನೀಡಿದರು. ರೈತರ ಕಲ್ಯಾಣಕ್ಕಾಗಿವಾಣಿವಿಲಾಸ ಸಾಗರ ನಿರ್ಮಿಸಿದರು. ಶಿವನಸಮುದ್ರದಿಂದ ಬೆಂಗಳೂರು ನಗರಕ್ಕೆ ಮೊದಲ ಬಾರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಬೆಳಕು ನೀಡಿದರು ಎಂದು ತಿಳಿಸಿದರು.

1918ರಲ್ಲಿ ಮಿಲ್ಲರ್‌ ಆಯೋಗ ರಚಿಸಿಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕ್ಕೆ ಶೇ.70ರಷ್ಟು ಮೀಸಲಾತಿ ನೀಡಿದರು.ಕೋ- ಆಪರೇಟಿವ್‌ ಸೊಸೈಟಿ, ಅಪೆಕ್ಸ್‌ ಬ್ಯಾಂಕ್‌,ಭೂ ಬ್ಯಾಂಕ್‌ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಸನ್ಮಾನಿಸಿದರು. ಜಿಲ್ಲಾ ಅರಸು ಸಂಘದ ಜಿಲ್ಲಾಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್‌ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷತ್ರಿಯ ಸಂಘದ ರಾಜಾಧ್ಯಕ್ಷ ಎಲ್‌.ಕೆ. ರಾಜು,ರಾಜ್ಯ ಅರಸು ಸಂಘದ ಸುಗಂಧರಾಜೇ ಅರಸ್‌,ತೇಗೂರು ಗ್ರಾಪಂ ಧ್ಯಕ್ಷ ಗಜೇಂದ್ರ ರಾಜ್‌ ಅರಸ್‌,ಕರ್ತಿಕೆರೆ ಗ್ರಾಪಂ ಉಪಾಧ್ಯಕ್ಷೆ ಹೇಮಾವತಿಕೃಷ್ಣರಾಜೇ ಅರಸ್‌, ವಕೀಲ ಬೀಮರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next