Advertisement

ಭಾರತ ಸಂವಿಧಾನ ವಿಶ್ವಕ್ಕೆ ಮಾದರಿ: ಶರಣಬಸವ

12:21 PM Jan 27, 2022 | Team Udayavani |

ಗುರುಮಠಕಲ್‌: ವಿಶ್ವದಲ್ಲೇ ಭಾರತದ ಸಂವಿಧಾನ ಅತಿ ದೊಡ್ಡ ಸಂವಿಧಾನವಾಗಿದ್ದು, ವಿವಿಧತೆಯಲ್ಲಿ ಏಕತೆ ಸಾಧಿಸಲು ಇದು ಸಹಕಾರಿಯಾಗಿರುವುದರಿಂದ ದೇಶದ ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಬದ್ಧವಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಹಶೀಲ್ದಾರ್‌ ಶರಣಬಸವ ಹೇಳಿದರು.

Advertisement

ಪಟ್ಟಣದ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಸಂವಿಧಾನ ರಚನೆ ಅಷ್ಟು ಸಲಭವಾಗಿರಲಿಲ್ಲ. ಬ್ರಿಟಿಷರು ಸಂವಿಧಾನದ ರಚನೆ ಇವರಿಂದ ಅಸಾಧ್ಯ ಎಂದು ನಗಾಡಿದ್ದಂತಹ ನಿದರ್ಶನವುಂಟು. ಆದರೆ ವಿಶ್ವವೇ ತಿರುಗಿ ನೋಡುವಂತಹ ಆದರ್ಶ ಸಂವಿಧಾನವನ್ನು ಡಾ| ಬಿ.ಆರ್‌. ಅಂಬೇಡ್ಕರ್‌ ರಚಿಸಿದರು ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಲಿಂಗಾನಂದ ಗೋಗಿ ಮಾತನಾಡಿ, ಡಾ| ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವು ನ್ಯಾಯ, ನೀತಿ ಮತ್ತು ಧರ್ಮಕ್ಕೆ ಹೆಸರು ಪಡೆದಿದೆ. ವಿದ್ಯಾರ್ಥಿಗಳೇ ಮುಂದೆ ದೇಶವನ್ನು ಕಟ್ಟುವಂತಹ ನಾಯಕರಾಗಿದ್ದು, ದೇಶದ ಉಳಿವು ಹಾಗೂ ಅಭಿವೃದ್ಧಿಗಾಗಿ ಉತ್ತಮ ಶಿಕ್ಷಣದ ಅವಶ್ಯಕತೆಯಿದೆ. ಆದ್ದರಿಂದ ಎಲ್ಲರೂ ಉತ್ತಮ ಹಾಗೂ ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷ ಭೀಮಮ್ಮ ಮುಕಡಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪಿ.ಐ. ಖಾಜಾಹುಸೇನ್‌, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಕುಮಾರ ನಿರೇಟಿ, ಸಿಡಿಪಿಒ ಅಕಾರಿ ಭೀಮರಾಯ, ಶಿಕ್ಷಣ ಸಂಯೋಜಕ ಶಿವರಾಜ ಸಾಕಾ, ಸಿಆರ್‌ಪಿ ನಾರಾಯಣರೆಡ್ಡಿ, ಅಂಜನೇಯುಲು, ನರಸರೆಡ್ಡಿ ಗಡೆಸೂರ, ಭೀಮರೆಡ್ಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next