Advertisement

ದೇಶದ ಏಕತೆಗೆ ಸಂವಿಧಾನ ಕಾರಣ

03:13 PM Dec 10, 2018 | |

ದೇವನಹಳ್ಳಿ: ಜಗತ್ತಿನಲ್ಲಿಯೇ ಹಲವಾರು ಕ್ಷೇತ್ರಗಳಲ್ಲಿ ಭಾರತ ದೇಶ ಮುಂಚೂಣಿಯಲ್ಲಿದ್ದು, ಸಾಧನೆ ಮಾಡಲು ಹಾಗೂ ಜಾತಿ, ಧರ್ಮಗಳನ್ನು ಒಗ್ಗೂಡಿಸಿ ಏಕತೆ ಕಾಪಾಡಲು ಸಂವಿಧಾನ ಕಾರಣವಾಗಿದೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ತಿಳಿಸಿದರು.

Advertisement

 ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾ ಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾಸಭೆಯಲ್ಲಿ “ಭಾರತೀಯ ಸಂವಿಧಾನದ ಮಹತ್ವ ಮತ್ತು ಜನರ ಹೊಣೆಗಾರಿಕೆ’ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. 

 ನ್ಮಮ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಸೂಕ್ತ ಪರ್ಯಾಯವನ್ನು ಹುಡುಕುವುದಾಗಲಿ ಅಥವಾ ಸಂವಿಧಾನ ವನ್ನು ಬದಲಿಸುವ ಪ್ರಯತ್ನ ಮಾಡಿದರೆ ದೇಶದ ಏಕತೆಗೆ ಧಕ್ಕೆ ಉಂಟಾಗಿ, ಅಜರಾಜಕತೆ ತಾಂಡವವಾಡುತ್ತದೆ. ಕೋಮುವಾದ, ಮೂಲಭೂತ ವಾದ, ಭಯೋತ್ಪಾದನೆ ಹೆಚ್ಚಾಗಿ ಬೇರೆಯವರ ಗುಲಾಮರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದೇಶಕ್ಕೆ ಸಂಧಾನವೇ ಧರ್ಮಗ್ರಂಥ: ಇಂಗ್ಲೆಂಡಿ ನಲ್ಲಿ ಇಂದಿಗೂ ಸಹ ಸರಿಯಾದ ಸಂವಿಧಾನ ಮತ್ತು ಗಣರಾಜ್ಯವಿಲ್ಲ. ಪ್ರತಿ ಜನರಿಗೂ ಸಮಾನ ಹಕ್ಕನ್ನು ನಮ್ಮ ಸಂಧಾನ ನೀಡಿದೆ. ದೇಶದಲ್ಲಿ 4,635 ಜಾತಿಗಳಿವೆ. ಅದರಲ್ಲಿ ಒಕ್ಕಲಿಗ 67 ಜಾತಿಗಳಿವೆ. ಸಂವಿಧಾನದ ಆಶಯಗಳು ಈಡೇರಬೇಕು. ದೇಶದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಕಂದಾ ಚಾರ, ಅನಕ್ಷರತೆ, ಮೂಢನಂಬಿಕೆ ಹೋಗಲಾಡಿಸಬೇಕು. ದೇಶದಲ್ಲಿರುವ ಪ್ರತಿಯೊಂದು ಧರ್ಮಕ್ಕೂ ಒಂದೊಂದು ಧರ್ಮ ಗ್ರಂಥ ಗಳಿವೆ. ಆದರೆ, ಎಲ್ಲಾ ಭಾರತೀಯರನ್ನು ಒಗ್ಗೂಡಿಸಿರುವ ಧರ್ಮಗ್ರಂಥ ಸಂಧಾನವೇ ಆಗಿದೆ ಎಂದರು.

ಸಂವಿಧಾನ ಅರಿಯಿರಿ: ಪ್ರತಿಯೊಬ್ಬರೂ ಸಂವಿಧಾನವನ್ನು ಅರಿತು ಅದರ ಆಶಯಗಳನ್ನು ಮೈಗೂಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು. ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದರ ಅನುಷ್ಠಾನ ಕಾರರು ಕೆಟ್ಟವರಾಗಿದ್ದರೆ ವ್ಯವಸ್ಥೆ ಕೆಟ್ಟು ಹೋಗುತ್ತದೆ ಎಂದು ಸಂವಿಧಾನ ಕತೃ ಅಂಬೇಡ್ಕರ್‌ ಅಂದೇ ಎಚ್ಚರಿಸಿದ್ದರು. ಆದ್ದರಿಂದ, ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ, ಅರ್ಥ ಮಾಡಿಕೊಂಡರೆ ಸಮಾಜ ಮತ್ತಷ್ಟು ಅಭಿವೃದ್ಧಿ ಪತದತ್ತ ಸಾಗುತ್ತದೆ ಎಂದರು.

Advertisement

 ದೇಶದ ಎಲ್ಲಾ ವರ್ಗದ ಜನರಿಗೆ ಅನುಕೂಲ ಕಲ್ಪಿಸುವುದು ಸಂವಿಧಾನವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳು ಸಂವಿಧಾನದ ಅಡಿ ಇವೆ. ಇವುಗಳನ್ನು ತಿಳಿದುಕೊಳ್ಳಬೇಕು. ಇವತ್ತಿಗೂ ನಿರುದ್ಯೋಗ ಸಮಸ್ಯೆ ಜನರನ್ನು ಕಾಡುತ್ತಿದೆ. ಆರ್ಥಿಕವಾಗಿ ತುಳಿತಕ್ಕೆ ಒಳಗಾಗಿದ್ದೇವೆ. ಆರ್ಥಿಕ ಅಸಮಾನತೆ ಜನರನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯದ ನ್ಯಾಯಾಂಗದಲ್ಲಿ ಶೇ.40 ಉದ್ಯೋಗ ಖಾಲಿ ಇವೆ. ಶೇ.6 ಮಾತ್ರ ಭರ್ತಿಯಾಗಿವೆ. ಎಸ್ಸಿ, ಎಸ್ಟಿ ಹೆಸರಿನಲ್ಲಿ ಕೆಲವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಅವರ ಸೌಲಭ್ಯಗಳನ್ನು ದುರುಪ ಯೋಗ  ಡಿಕೊಳ್ಳುತ್ತಿದ್ದಾರೆ.
ಅಂತಹವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.

ಕಾನೂನುಗಳ ತಾಯಿ ಸಂವಿಧಾನ: ಎಲ್ಲಾ ಕಾನೂನುಗಳ ತಾಯಿ ಸಂವಿಧಾನವೇ ಆಗಿದೆ. ಸಂವಿಧಾನದಿಂದ ಭೂ ಸುಧಾರಣೆ, ಕೃಷಿ ಶಿಕ್ಷಣ ಆರೋಗ್ಯ ಸುಧಾರಣೆಯಾಗಿದೆ. ಮಾಹಿತಿ ತಂತ್ರ ಜ್ಞಾನ ಹೆಚ್ಚು ಬೆಳೆಯಲು ಸಾಧ್ಯವಾಗಿದೆ. ಜಾತಿ ಎಂಬ ವಿಷ ಬೀಜವನ್ನು ಕಿತ್ತು ಹಾಕಬೇಕು. ಆಗ ಸಂವಿಧಾನದಡಿ ಏನಾದರೂ ಸ್ವಲ್ಪ ಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

 ಬೌದ್ಧ ಧರ್ಮ ಹಾಗೂ ಶೋಷಿತ ಸಮಾಜಗಳ ವಿಮುಕ್ತಿ ವಿಷಯದ ಬಗ್ಗೆ ಕವಿ ಡಾ.ಮುಡ್ನಕೂಡು ಚಿನ್ನಸ್ವಾಮಿ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನವನ್ನು ಬದಲಾಯಿಸಲು ಹಠ ತೊಟ್ಟಿರುವ ಕೋಮುವಾದಿಗಳು ಕೇಸರಿ ಖಡ್ಗವನ್ನು ಝಳಪಿಸುತ್ತಿದ್ದಾರೆ. ಭಾರತದ ಭವಿಷ್ಯ ಎಂದಿಗಿಂತಲೂ ಅತ್ಯಂತ ಅಪಾಯದಲ್ಲಿದೆ ಎಂಬುವುದನ್ನು ಸಾಬೀತುಪಡಿಸುವ ಅನೇಕ ಘಟನೆಗಳು ನಿತ್ಯ ಜರುಗತ್ತಲೇ ಇವೆ. ದಸಂಸ ಪ್ರಜಾಸತ್ತಾತ್ಮಕ ಚಳವಳಿಯಾಗಿದ್ದು, ಸಂವಿಧಾನದಡಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಮೂರು ವರ್ಷಕ್ಕೂಮ್ಮೆ ರಾಜ್ಯ ಸರ್ವ ಸದಸ್ಯರ ಸಭೆಯನ್ನು ಆಯೋಜಿಸುತ್ತಿದೆ. ಪ್ರತಿ ಸದಸ್ಯರಲ್ಲಿ ಸಂವಿಧಾನದ ಅರಿವು ಹಾಗೂ ಅಂಬೇಡ್ಕರ್‌ ವಿಚಾರಧಾರೆಗಳನ್ನು ತಿಳಿಸಲಾಗುತ್ತಿದೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಡಿಎಸ್‌ಎಸ್‌ ಸಂಘಟನಾ ಸಂಚಾಲಕ ಗೌತಮ್‌ ಪಾಟೀಲ್‌, ಎನ್‌. ನಾಗರಾಜ್‌, ಸುಂದರ್‌ ಮಾಸ್ಟರ್‌, ನಾಗಣ್ಣ ಬಡಿಗೇರ, ರಮೇಶ್‌ ಡಾಕುಳಗಿ, ಈರೇಶ್‌, ಬೆಂಗಳೂರು ವಿಭಾಗೀಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌, ಜಿಲ್ಲಾ ಪ್ರಧಾನ ಸಂಚಾಲಕ ಬಿಸ್ನಳ್ಳಿ ಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಆವತಿ ತಿಮ್ಮರಾಯಪ್ಪ, ಜೋಗಹಳ್ಳಿ ನಾರಾಯಣ ಸ್ವಾಮಿ, ರಾಜು ಸಣ್ಣಕ್ಕಿ, ಶ್ರೀನಿವಾಸ್‌, ಜಿಲ್ಲಾ ಸಮಿತಿ ಸದಸ್ಯ ಎಚ್‌.ಕೆ.ವೆಂಕಟೇಶಪ್ಪ, ತಾಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ, ಸಂಘಟನಾ ಸಂಚಾಲಕ ಪಿ.ಮುನಿರಾಜು, ರಮೇಶ್‌, ರವಿಕುಮಾರ

Advertisement

Udayavani is now on Telegram. Click here to join our channel and stay updated with the latest news.

Next