Advertisement

ಸಂವಿಧಾನ-ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಿ

05:19 PM Nov 20, 2017 | |

ಮೈಸೂರು: ವಿಶ್ವಕ್ಕೆ ಮಾದರಿಯಾಗಿರುವ ಭಾರತೀಯ ಸಂವಿಧಾನವನ್ನು ಬದಲಿಸುವ ಅಪಾಯಕಾರಿ ಮುನ್ಸೂಚನೆ ಕಾಣುತ್ತಿದ್ದು, ಹೀಗಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಮಾಡಲು ದೇಶದ ಪ್ರತಿಯೊಬ್ಬರೂ ಮುಂದಾಗ
ಬೇಕಿದೆ ಎಂದು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಹೇಳಿದರು.

Advertisement

ಮೈಸೂರು ವಿವಿ ವತಿಯಿಂದ ನಗರದ ಮಾನಸ ಗಂಗೋತ್ರಿ ಗ್ರಂಥಾಲಯ ವಿಭಾಗದ ಎದುರು ನಿರ್ಮಿಸಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಅನಾವರಣ ಹಾಗೂ ಡಿ.ದೇವರಾಜ ಅರಸು ಭವನ ಉದ್ಘಾಟನೆ ನೆರವೇರಿಸಿದ ಬಳಿಕ ಸೆನೆಟ್‌ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಹಲವು ವರ್ಷಗಳ ಹಿಂದೆ ಅಂದಿನ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು ಭಾರತೀಯ ಸಂವಿಧಾನ ಸರಿಯಿದೆ. ಆದರೆ ಅದನ್ನು ಜಾರಿಗೊಳಿಸುವವರು ಸರಿಯಲ್ಲ ಎಂದು ಹೇಳಿದ್ದರು. 

ಇದಕ್ಕೆ ಪೂರಕವೆಂಬಂತೆ ಪ್ರಸ್ತುತ ಧರ್ಮ ಸಂಸತ್‌ ಮೂಲಕ ದೇಶದ ಆಡಳಿತ ನಿಯಂತ್ರಿಸುವ ಹೊಸ ಆಲೋಚನೆ ಆರಂಭವಾಗಿದೆ. ಈ ಆಲೋಚನೆ ಹೊಸದೇನಲ್ಲ. ಈ ಮೊದಲು ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಸಂವಿಧಾನದ ಪರಾಮರ್ಶೆಗೆ ಮುಂದಾಗಿದ್ದರು. ಆದರೆ ಇದೀಗ ಮತ್ತೂಮ್ಮೆ ಇಂತಹ ಅಪಾಯಕಾರಿ ಸೂಚನೆ
ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಇಂದು ಅಂಬೇಡ್ಕರ್‌ರ ಜಯಂತಿಯನ್ನು ಇಡೀ ವಿಶ್ವದಲ್ಲಿ ಜಾnನದ ದಿನವನ್ನಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಸನಾತನ ಕಾಲದಿಂದಲೇ ಕೆಲವರು ವಿರೋಧ ಮಾಡುತ್ತಿದ್ದು, ಬೌದ್ಧಧರ್ಮ ಚಳವಳಿ ನಾಶ ಮಾಡಿ, ಜಾತಿ ವಿನಾಶ ಚಳವಳಿ ಹತ್ತಿಕ್ಕಿದರು. ಆದರೆ, ಬಹುಜನರು ಅಭಿವೃದ್ಧಿಯಾದರೆ ಭಾರತ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿನ ಅಸಮಾನತೆ ನೀಗಿಸಿ ಸಮ-ಸಮಾಜ ನಿರ್ಮಾಣ ಮಾಡುವ ಮೂಲಕ ಸ್ಥಿರ ಅಭಿವೃದ್ಧಿಯತ್ತ
ಸಾಗಬೇಕು ಎಂದು ಹೇಳಿದರು.

Advertisement

ವಿಶ್ವವಿದ್ಯಾಲಯಗಳಲ್ಲಿ ವೈಚಾರಿಕ ಅಲೆ ಎಬ್ಬಿಸಬೇಕಿದ್ದು, ವಿವಿಗಳು, ಕಾಲೇಜು, ವಿದ್ಯಾರ್ಥಿಗಳಲ್ಲಿ ಕೋಮುವಾದ – ಕೇಸರೀಕರಣಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಎಸ್‌ಸಿ-ಎಸ್ಟಿ ನೌಕರರ ಹಿತಕಾಯಲು ಸರ್ಕಾರ ಮಸೂದೆ ಮಂಡಿಸಿದ್ದರೂ ಇದನ್ನು ಜಾರಿಗೆ ತರದಂತೆ ಹೊಂಚು ಹಾಕಿ ಕುಳಿತಿದ್ದವರಿಗೆ ಏನಾಯಿತು ಎಂಬುದನ್ನು ಕಂಡಿದ್ದೇವೆ.

ಸಂವಿಧಾನ ರಕ್ಷಣೆ – ಪ್ರಜಾಪ್ರಭುತ್ವದ ಕುರಿತು ಮೈಸೂರಿನಲ್ಲೇ ಹೊಸವಿಚಾರ ಆರಂಭಿಸಬೇಕಿದೆ. ಬಹುತ್ವವನ್ನು ನಾಶಮಾಡಲು ಪ್ರಯತ್ನಿಸುವವರಿಗೆ ವಿಷಯಾಧಾರಿತ ಚಳವಳಿಯಿಂದ ಉತ್ತರ ಕೊಡಬೇಕಿದೆ. ಇದಕ್ಕಾಗಿ ಜಾತಿ, ಧರ್ಮ, ಪಕ್ಷ ರಹಿತವಾಗಿ ಒಗ್ಗಟ್ಟಾಗಬೇಕು ಎಂದರು. 

ಸಂಸದ ಆರ್‌.ಧ್ರುವನಾರಾಯಣ್‌, ವಿಧಾನ ಪರಿಷತ್‌ ಸದಸ್ಯ ಆರ್‌. ಧರ್ಮಸೇನಾ, ವಿವಿ ಹಂಗಾಮಿ ಕುಲಪತಿ ಪ್ರೋ.ದಯಾನಂದ ಮಾನೆ, ಕುಲಸಚಿವೆ ಡಿ.ಭಾರತಿ, ಪರೀಕ್ಷಾಂಗ ಕುಲಸಚಿವ ಡಾ. ಜೆ. ಸೋಮಶೇಖರ್‌, ಕೆಪಿಎಸ್‌ಸಿ ಸದಸ್ಯ ಡಾ. ಚಂದ್ರಕಾಂತ್‌ ಶಿವಕೇರ, ಜಿಪಂ ಸದಸ್ಯ ಶ್ರೀಕೃಷ್ಣ, ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಕಿನಕಹಳ್ಳಿ ಬಿ.ರಾಚಯ್ಯ, ಮಾಜಿ ಶಾಸಕ ಎಸ್‌.ಬಾಲರಾಜು, ಮಾಜಿ ಮೇಯರ್‌ ಪುರುಷೋತ್ತಮ್‌, ಸಿಂಡಿಕೇಟ್‌ ಸದಸ್ಯರಾದ ಜಗದೀಶ್‌, ಸಹನಾಶಿವಪ್ಪ, ಕುಮಾರ್‌ ಮತ್ತಿತರರಿದ್ದರು.

ಸಮಾನತೆಗೆ ಬುದ್ಧ, ಬಸವ, ಅಂಬೇಡ್ಕರ್‌ ಹೋರಾಟ
ಜಾತಿಯನ್ನು ನಾಶಮಾಡಿ ಎಲ್ಲರೂ ಸಮಾನರು ಎಂಬ ತತ್ವಸಾರಿದ ಬುದ್ಧ, ಬಸವ, ಅಂಬೇಡ್ಕರ್‌ ಆಶಯ ಒಂದೇ ಆಗಿತ್ತು. ಈ ಮೂವರು ಪ್ರಜಾಪ್ರಭುತ್ವವಾದಿಗಳಾಗಿದ್ದು, ಇವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತ ಗೊಳಿಸುವವರು ಕೊಳಕು ಮನಸ್ಸಿನವ ರಾಗಿದ್ದಾರೆ. ಬಲಾಡ್ಯರಿಂದ ಬಲಹೀರನ್ನು ರಕ್ಷಣೆ ಮಾಡಲು ದೃಢವಾಗಿ ನಿಂತ ಮೂವರು
ಮಹನೀಯರು, ಸಮಾಜದಲ್ಲಿ ಶೋಷಿತರು, ಮಹಿಳೆಯರಿಗೆ ಸಮಾನತೆ ಕೊಡಿಸಲು ಹೋರಾಡಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next