Advertisement

ಸಂವಿಧಾನದಲ್ಲಿ ವಿವಿಧ ಸಂಸ್ಕೃತಿ ಆಚರಣೆಗೆ ಅವಕಾಶ

02:31 PM Nov 28, 2022 | Team Udayavani |

ರಾಮನಗರ: ಭಾರತ ಸಂವಿಧಾನ ರಚನೆಯ ಸ್ವರೂಪವೇ ಎಲ್ಲರನ್ನೂ ಒಳ್ಳಗೊಳ್ಳುವಮೌಲ್ಯವನ್ನು ಆಧರಿಸಿದೆ. ಇದು ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ. ಸಂವಿಧಾನ ಜನರಆಚಾರ, ವಿಚಾರ, ಸಂಸ್ಕೃತಿ ಆಚರಣೆಗೆಅಡ್ಡಿಪಡಿಸುವುದಿಲ್ಲ ಎಂದು ದಲಿತ ಹಿರಿಯ ಮುಖಂಡ ಚೆಲುವರಾಜು ತಿಳಿಸಿದರು.

Advertisement

ನಗರದ ಜೂನಿಯರ್‌ ಕಾಲೇಜು ರಸ್ತೆಯಅಂಬೇಡ್ಕರ್‌ ವೃತ್ತದಲ್ಲಿ ದಲಿತ ಸಂಘಟನೆಗಳ ಮಹಾಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣ ದಿನಾಚರಣೆಯಲ್ಲಿ ಮಾತನಾಡಿದಅವರು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮುದಾಯಿಕ ಬದುಕಿಗೆ ಧಕ್ಕೆಯಾಗದ ಹಾಗೆ ನಿರ್ವಹಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಎಲ್ಲರಿಗೂ ನೀಡಿದೆ.

ಕಾಲದ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಒಳಗೊಂಡಿದೆ. ದೇಶದಪ್ರಜಾಪ್ರಭುತ್ವ ನಿಂತಿರುವುದು ಸಾಂವಿಧಾನಿಕ ಚೌಕಟ್ಟಿನಲ್ಲಿ ಎಂಬುದನ್ನು ಗ್ರಹಿಸಬೇಕಿದೆ ಎಂದರು.

ವರ್ತಮಾನದಲ್ಲಿ ನಮ್ಮ ಸಂವಿಧಾನ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಬಹಳಮುಖ್ಯವಾದ ಸಮಸ್ಯೆ ಒಟ್ಟು ಪ್ರಜಾಪ್ರಭುತ್ವವನ್ನುಚುನಾವಣೆಗಳಿಗೆ, ರಾಜಕೀಯ ಪಕ್ಷಗಳ ಚಟುವಟಿಗಳಿಗೆ ಸೀಮಿತಗೊಳಿಸಿ ವಿಶ್ಲೇಷಿಸುತ್ತಿರುವುದು ಬಹಳಅಪಾಯಕಾರಿ ಬೆಳೆವಣಿಗೆ. ಸಂವಿಧಾನದ ಮೂಲಕಲಭಿಸಿರುವ ಪ್ರಜಾಪ್ರಭುತ್ವ ವ್ಯಕ್ತಿ, ಪಕ್ಷ, ಧರ್ಮ, ಜಾತಿಎಲ್ಲವನ್ನೂ ಮೀರಿದ ಮೌಲ್ಯವಾಗಿದೆ ಎಂಬ ಅರಿವು ಯುವ ತಲೆಮಾರಿಗೆ ದಾಟಿಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು ಎಂದರು.

ಧಾರ್ಮಿಕ ತಾರತಮ್ಯ: ಹಿರಿಯ ದಲಿತ ಮುಖಂಡ ಶಿವಶಂಕರ್‌ ಮಾತನಾಡಿ, ಜಗತ್ತಿನ ಯಾವ ದೇಶದಸಂವಿಧಾನ ಕತೃìಗಳು ಎದುರಿಸದ ಒಂದುಸಮಸ್ಯೆಯನ್ನು ನಮ್ಮ ದೇಶದ ಸಂವಿಧಾನರಚನಾಕಾರರು ಎದುರಿಸಿದರು. ಇಲ್ಲಿನ ಜಾತಿ,ಲಿಂಗಾಧಾರಿತ ಮತ್ತು ಧಾರ್ಮಿಕ ತಾರತಮ್ಯವನ್ನು ಕಾನೂನಿನ ಮೂಲಕ ಮೀರುವ ಸವಾಲು ಇವುಗಳನ್ನು ನಿವಾರಿಸಿ ಸಮಾನತೆ ಮತ್ತು ಸಹೋದರತ್ವ ಸ್ಥಾಪಿಸದ ಹೊರತು ನಾವು ಒಂದು ದೇಶವಾಗಿ ಯಶಸ್ವಿ

Advertisement

ಯಾಗಲು ಸಾಧ್ಯವಿಲ್ಲ ಎಂಬ ಅರಿವು ಡಾ. ಅಂಬೇಡ್ಕರ್‌ ಅವರಿಗೆ ಸ್ಪಷ್ಟವಾಗಿ ಇತ್ತು. ಆ ಕಾರಣಕ್ಕೆ ಭಾರತ ಸಂವಿಧಾನ ಮಹಿಳೆ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಎಲ್ಲಾ ಸಮುದಾಯ ಗಳನ್ನು ಒಳಗೊಳ್ಳುವ ಒಂದು ಕಾರ್ಯಸೂಚಿ ಯಾಗಿದೆ ಎಂದರು.

ಸಂವಿಧಾನ ಬದಲಾವಣೆ ಹುನ್ನಾರ: ದಲಿತ ಸಂಘಟನೆಗಳ ಮಹಾಒಕ್ಕೂಟ ಅಧ್ಯಕ್ಷ ಎಂ. ಜಗದೀಶ್‌ ಮಾತನಾಡಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ನಮ್ಮ ಸಂವಿಧಾನವೇ ಕಾರಣ.ಸ್ವಾತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವದ ತತ್ವಗಳು ಅನುಮಾನಾಸ್ಪದವಾಗಿ ಕಾಡುತ್ತಿವೆ. ಇಂದಿಗೂ ಸಂವಿಧಾನದ ಆಶಯ ಅನುಷ್ಠಾನಗೊಳಿಸದೆ, ಬದಲಾವಣೆಯ ಹುನ್ನಾರದ ಮಾತುಕೇಳುತ್ತಿದ್ದೇವೆ. ಇದು ಅಪಾಯಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಶಿವಪ್ರಕಾಶ್‌, ಜಿಲ್ಲಾ ಜಾಗೃತಿ ಉಪ ಸಮಿತಿ ಸದಸ್ಯಗುಡ್ಡೆ ವೆಂಕಟೇಶ್‌, ಕೆಪಿಸಿಸಿ ಎಸ್ಸಿ, ಎಸ್ಟಿ ವಿಭಾಗ ಸದಸ್ಯಶಿವಲಿಂಗಯ್ಯ, ಭಾರತೀಯ ಬೌದ್ಧ ಮಹಾ ಸೊಸೈಟಿಯ ಜಿಲ್ಲಾಧ್ಯಕ್ಷ ಚಿಕ್ಕವೆಂಕಟಯ್ಯ, ಯುವಮುಖಂಡ ಗೋಪಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೋತ್ತಿಪುರ ಗೋವಿಂದ, ಎಸ್ಸಿ, ಎಸ್ಟಿಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಎಚ್‌.ವೆಂಕಟೇಶ್‌, ಪೌರ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಲಿಂಗರಾಜು,ಸಫಾಯಿ ಕರ್ಮದ ಸಂಘದ ಮಾಜಿ ಅಧ್ಯಕ್ಷದೇವೆಂದ್ರ,ವನವಾಸಿ ಸಂಘದ ಅಧ್ಯಕ್ಷ ರಾಜು,ಮುಖಂಡ ರಮೇಶ್‌, ಡಿಫೋ ವೆಂಕಟೇಶ್‌, ಯುವಉದ್ಯಮಿ ಜನಾರ್ಧನ್‌, ದಲಿತ ಮುಖಂಡ ಬನ್ನಿಕುಪ್ಪೆ ರಮೇಶ್‌, ಆಟೋ ಶಿವರಾಜು, ಲಿಂಗರಾಜು ಗಾಂಧಿನಗರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next