Advertisement
ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ಪಂಚಾಯತಿ ಹಳೆಯ ಕಟ್ಟಡ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕಸ ವಿಚಾರವಾಗಿ ತೆಗೆದುಕೊಂಡ ನಿಲುವುಗಳೇನು ಎಂಬ ಗ್ರಾಮಸ್ಥರ ಪ್ರಶ್ನೆಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಈ ವಿಚಾರವನ್ನು ಸಭೆಗೆ ತಿಳಿಸಿದರು.
Related Articles
Advertisement
ಗ್ರಾಮಸ್ಥ ಜಗದೀಶ್ ಅವರು ಮಾತನಾಡಿ ಸಂಘ ಸಂಸ್ಥೆಗಳನ್ನು ಚೇಂಬರ್ ಆಫ್ ಕಾಮರ್ಸ್‌ಗಳ ಸಲಹೆ ಸೂಚನೆಗಳನ್ನು ಪಡೆದುಕೊಂಡು ಕಸ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ತಾ.ಪಂ. ಮಾಜಿ ಅಧ್ಯಕ್ಷ ರಾಣಿ ನಾರಾಯಣ್ ಅವರು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಮತ್ತು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿರುವ ಅಂಗಡಿ ಮಳಿಗೆಗೆ ಮೆಟ್ಟಿಲು ಅಳವಡಿಸಲು ಮುಂದಾಗಬೇಕು ಎಂದು ಹೇಳಿದರು.
ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶರತ್ ಕಾಂತ್ ಮಾತನಾಡಿ ರುದ್ರಭೂಮಿ ಮುಂದೆ ಕಸ ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಗಾಂಜಾ ವ್ಯಸನಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಗಳಿಲ್ಲ. ಹಾವು ಕಚ್ಚಿದರೆ ಔಷಧಿಗಳು ಇಲ್ಲ. ಈ ಬಗ್ಗೆ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಯುವಕರು ವಾಹನಗಳಿಗೆ ಪರವಾನಾಗೆ ಹೊಂದಿಲ್ಲದಿದ್ದರೂ ಕರ್ಕಶ ಶಬ್ದಗಳ ಸೈಲೆಂಸರ್ ಬಳಸಿಕೊಂಡು ಶಬ್ದ ಮಾಲಿನ್ಯ ಮಾಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ, ವಯಸ್ಕರಿಗೆ ಕಿರಿ ಕಿರಿಯಾಗುತ್ತಿದೆ ಎಂದು ಪರಶುರಾಮ್ ಸಭೆಗೆ ಮಾಹಿತಿ ನೀಡಿದರು.
ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಜಿಮ್ಮ ಸುಬ್ಬಯ್ಯ ಅವರು ಏಕಮುಖ ಸಂಚಾರದಿಂದ ಆಟೋ ಚಾಲಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಪ್ರಯಾಣಿಕರಿಗೆ ಸಮಸ್ಯೆಯಿಂದ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಪಂಚಾಯಿತಿ ನೂಡೆಲ್ ಅಧಿಕಾರಿ ಮಹೆದೇವ ಮತ್ತು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
124 ಅಂಗಡಿಗಳ ವ್ಯಾಪಾರಿಗಳು ಅತಂತ್ರಟೆಂಡರ್ ಪ್ರಕ್ರಿಯೆಯ ನಿರ್ಧಾರದಿಂದ ಪಂಚಾಯಿತಿಗೆ ಸಂಬಂಧಪಟ್ಟ 124 ಅಂಗಡಿಗಳ ವ್ಯಾಪಾರಸ್ಥರು ಅತಂತ್ರ ಸ್ಥಿತಿಗೆ ಒಳಪಡುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕೆಂದು ವರ್ತಕರು ಸಭೆಯಲ್ಲಿ ತಮ್ಮ ಮನವಿಯನ್ನು ಇಟ್ಟರು. ಗ್ರಾ.ಪಂ. ಸದಸ್ಯ ಕೆ.ಪಿ. ಬೋಪಣ್ಣ ಟೆಂಡರ್ ಕ್ರಿಯೆ ನಡೆಸುವ ಬಗ್ಗೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗುವುದು. ವ್ಯಾಪಾರಸ್ಥರಿಗೆ ಯಾವುದೇ ಹೊಡೆತ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಪಂಚಾಯಿತಿ ಆಧಾಯ ಕ್ರೋಡಿಕರಣಕ್ಕೆ ಮಳಿಗೆಯ ಬಾಡಿಗೆಯನ್ನು ಹೆಚ್ಚಿಸುವ ಚಿಂತನೆ ಇದೆ. ಯಾರು ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೋ ಅವರಿಗೆ ನೀಡುವಂತೆ ಮತ್ತು ಒಬ್ಬರಿಗೆ ಒಂದೇ ಮಳಿಗೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು. ಮಳಿಗೆ ಪಡೆದುಕೊಂಡ ಮಾಲೀಕರು ತಮ್ಮ ಮಳಿಗೆಯನ್ನು ಬೇರೆಯವರಿಗೆ ಬಾಡಿಗೆ ನೀಡಿ ಹೆಚ್ಚು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಪಂಚಾಯಿತಿಗೆ ಕೇವಲ 1000ದಿಂದ 1500 ಮಾತ್ರ ಬಾಡಿಗೆ ನೀಡುತ್ತಿದ್ದಾರೆ. ಇದರಿಂದ ಪಂಚಾಯಿತಿಯ ಆರ್ಥಿಕ ಪರಿಸ್ಥಿತಿ ಎದುರಾಗಿದೆ ಎಂದರು.