Advertisement
ಕೋಲಾರದಲ್ಲಿ ಶನಿವಾರ ನಡೆದ ಪರಿವರ್ತನ ರ್ಯಾಲಿಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ ಮೋದಿ ಸರಕಾರದ ಮೇಲೆ ಹರಿಹಾಯ್ದರು.
* ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿಕರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಾಗುವುದು. * ಗಬ್ಬರ್ ಸಿಂಗ್ ತೆರಿಗೆ (ಜಿಎಸ್ ಟಿ) ರದ್ದುಪಡಿಸಿ ಸುಗಮವಾದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
Related Articles
Advertisement
* ಯಾವುದೇ ಪರವಾನಿಗೆ ಇಲ್ಲದೆ ಯುವಕರು ಉದ್ಯಮಗಳನ್ನು ಆರಂಭಿಸಲು ಅವಕಾಶ ಕಲ್ಪಿಸಲಾಗುವುದು.
* ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಯುವಕರಿಗಾಗಿ ತುಂಬಲಾಗುವುದು.
* ಪಂಚಾಯಿತಿ ಮಟ್ಟದಲ್ಲಿ ಹತ್ತು ಲಕ್ಷ ಮಂದಿಗೆ ನೌಕರಿ ಸೃಷ್ಟಿಸಲಾಗುವುದು.
* ಉದ್ಯಮಿಗಳಿಗೆ ನೇರವಾಗಿ ಸಾಲ ಸೌಲಭ್ಯ ಕಲ್ಪಿಸಲಾಗುವುದು.
* ಮಹಿಳೆಯರಿಗೆ ಲೋಕಸಭೆ ವಿಧಾನಸಭೆಯಲ್ಲಿ ಶೇಕಡ 33 ಮೀಸಲಾತಿ ಕಲ್ಪಿಸಲಾಗುವುದು.
* ಕೇಂದ್ರ ಸರ್ಕಾರದ ನೌಕರಿಯಲ್ಲಿ ಇಷ್ಟೇ ಪ್ರಮಾಣದ ಮೀಸಲಾತಿಯನ್ನು ಮಹಿಳೆಯರಿಗಾಗಿ ನೀಡಲಾಗುವುದು.
*ದೇಶದಲ್ಲಿ ಹೊಸ ಆರ್ಥಿಕ ವ್ಯವಸ್ಥೆಯನ್ನು ಪುನರಾರಂಭಿಸುತ್ತೇವೆ.
* ದೇಶದಲ್ಲಿ ಈಗ ಎರಡು ವಿಚಾರಧಾರೆಗಳ ನಡುವೆ ಸಂಘರ್ಷ ನಡೆಯುತ್ತಿದೆ.
* ಕಾಂಗ್ರೆಸ್ ಪ್ರೀತಿಯಿಂದ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿ ಜಾತಿ ಧರ್ಮಗಳ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ.
* ಮೋದಿ ಅವರಂತೆ ನಾನು ಸುಳ್ಳು ಭರವಸೆ ಕೊಡುವುದಿಲ್ಲ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಒಂದು ವರ್ಷದೊಳಗೆ ಈಡೇರಿಸುತ್ತೇನೆ.
* ದೇಶದ ಕಾವಲುಗಾರ ಎನ್ನುವ ಮೋದಿ ಕಳ್ಳರ ಕೂಟದ ನಾಯಕರಾಗಿದ್ದಾರೆ. ಅಚ್ಚೆ ದಿನ ಬರುತ್ತದೆ ಎಂದಿದ್ದ ಮೋದಿ ಕಾವಲುಗಾರ ಕಳ್ಳರಾಗಿದ್ದಾರೆ.
ವೇದಿಕೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಒಗ್ಗೂಡಿಸುವಲ್ಲಿ ಪರಿವರ್ತನಾ ರ್ಯಾಲಿ ಯಶಸ್ವಿಯಾಗಿತ್ತು. ಕಾರ್ಯಕ್ರಮ ಆರಂಭವಾಗುವ ಮುನ್ನ ರಾಹುಲ್ ರಾಹುಲ್ ಎಂದು ಘೋಷಣೆಗಳನ್ನು ಕೂಗಿದ ಸಭಿಕರು ಭಾಷಣದ ಕೊನೆಯಲ್ಲಿ ಚೌಕಿದಾರ್ ಚೋರ್ ಹೈ ಎಂದು ಘೋಷಣೆಗಳನ್ನು ಮೊಳಗಿಸಿದರು.