Advertisement

ಕಾಂಗ್ರೆಸ್‌ ಪಕ್ಷದ ನೀತಿ ದೇಶಕ್ಕೆ ಅನಿವಾರ್ಯ

08:10 PM Nov 22, 2021 | Team Udayavani |

ಹಿರೇಕೆರೂರ: ಸರ್ವರನ್ನೂ ಸಮನಾಗಿ ಕಾಣುವ ಕಾಂಗ್ರೆಸ್‌ ಪಕ್ಷದ ನೀತಿ ದೇಶಕ್ಕೆ ಅನಿವಾರ್ಯವಾಗಿದೆ ಎಂದು ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಹೇಳಿದರು. ಪಟ್ಟಣದದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಾಲಯ ಉದ್ಘಾಟನೆ ಹಾಗೂ ನೂತನವಾಗಿ ನೇಮಕವಾದ ಪಕ್ಷದ ಪದಾ ಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕಾಂಗ್ರೆಸ್‌ ಜನರಿಗಾಗಿ ಇರುವ ಪಕ್ಷವಾಗಿದೆ. ರೈತರು ಬಡವರ ಏಳ್ಗೆಗೆಗೆ ಕಾಂಗ್ರೆಸ್‌ ಪಕ್ಷ ಬದ್ಧವಾಗಿದ್ದು, ಸರ್ವರಿಗೂ ಸಮಬಾಳು ಸಮಪಾಲು ನೀಡುವುದೇ ಕಾಂಗ್ರೆಸ್‌ ಧ್ಯೇಯವಾಗಿದೆ. ಕಾಂಗ್ರೆಸ್‌ ಪಕ್ಷದ ನೀತಿಯ ಮುಂದೆ ಬಿಜೆಪಿಯ ಅನೀತಿ ಬಹಳ ದಿನ ನಡೆಯುವುದಿಲ್ಲ. ದೇಶ ಮತ್ತು ರಾಜ್ಯದ ರೈತರು ನೆಮ್ಮದಿಯಿಂದ ಇರಲು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಿದೆ. ಬಿಜೆಪಿ ಅಲೆ ಕ್ಷಣಿಕ. ಆದ್ದರಿಂದ ಕಾರ್ಯಕರ್ತರು ಧೃತಿಗೆಡದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಕೆರ ನೀಡಿದರು.

ಪಕ್ಷದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ 50 ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ರಮೇಶ ಮಡಿವಾಳರ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ, ಮುಖಂಡರಾದ ಮಂಜುನಾಥ ತಂಬಾಕದ, ದಿಗ್ವಿಜಯ ಹತ್ತಿ, ಪ್ರಕಾಶ ಬನ್ನಿಕೋಡ, ಬಿ.ಎನ್‌. ಬಣಕಾರ, ಎ.ಕೆ. ಪಾಟೀಲ, ದುರುಗಪ್ಪ ನೀರಲಗಿ, ವಿನಯ ಪಾಟೀಲ, ವಸಂತ ದ್ಯಾವಕ್ಕಳವರ, ಜಿ.ವಿ. ಕುಲಕರ್ಣಿ, ಸಲೀಂ ಮುಲ್ಲಾ, ಶೇಕಣ್ಣ ಉಕ್ಕುಂದ, ಸುರೇಶ ಮಡಿವಾಳರ, ಜ್ಯೋತಿ ಜಾಧವ, ಮಂಜು ಶಿವನಕ್ಕನವರ, ಆನಂದ ನಾಯ್ಕರ್‌, ಸೋಮಣ್ಣ ಪೂಜಾರ, ಶಶಿಕಲಾ ಆರೀಕಟ್ಟಿ, ಮಾಲತೇಶ ಬಿಲ್ಲಳ್ಳಿ, ನಾಗರಾಜ ಪ್ಯಾಟಿ, ಮಾಲತೇಶ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next