Advertisement

ಮಹದಾಯಿ ಧರಣಿ ಹಿಂದೆ ಕಾಂಗ್ರೆಸ್‌ ಕುಮ್ಮಕ್ಕು

11:25 AM Dec 26, 2017 | Team Udayavani |

ಬೆಂಗಳೂರು: ಮಹದಾಯಿ ಯೋಜನೆಗಾಗಿ ಬಿಜೆಪಿ ಕಚೇರಿ ಎದುರು ನಡೆಸುತ್ತಿರುವ ಧರಣಿ ಹಿಂದೆ ಕಾಂಗ್ರೆಸ್‌ ಕುಮ್ಮಕ್ಕಿದೆ ಎಂದು ಕೇಂದ್ರ ಸಾಂಖೀಕ ಮತ್ತು ಯೋಜನೆಗಳ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಪರೋಕ್ಷವಾಗಿ ಆರೋಪಿಸಿದರು. 

Advertisement

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾರೋ ನಾಲ್ಕಾರು ಜನರನ್ನು ಅವರು (ಕಾಂಗ್ರೆಸ್‌) ಕಳಿಸಿ, ಧರಣಿ ಮಾಡಿಸಿದ ತಕ್ಷಣ ನಾವೇನೂ ಹಿಂದೆ ಸರಿಯುವುದಿಲ್ಲ. ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ನದಿ ನೀರನ್ನು ಹರಿಸುವುದು ನಮ್ಮ ಗುರಿ. ಈ ಪ್ರಯತ್ನ ನಿರಂತರವಾಗಿ ಇರಲಿದೆ’ ಎಂದರು.

ಧರಣಿ ಹಿಂದೆ ಕಾಂಗ್ರೆಸ್‌ ಕೈವಾಡವಿದೆಯೇ ಎಂಬ ಪ್ರಶ್ನೆಗೆ. “ಮುಖ್ಯಮಂತ್ರಿ ಸೇರಿ ಕಾಂಗ್ರೆಸ್‌ ಮುಖಂಡರು ಕಳೆದ ಎರಡು-ಮೂರು ದಿನಗಳಿಂದ ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ನಾನು ಇನ್ನೇನು ಹೇಳಲು ಸಾಧ್ಯ” ಎಂದು ಮರು ಪ್ರಶ್ನಿಸಿದರು.

“ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಗೋವಾದವರೂ ಒಪ್ಪಿಕೊಂಡಿದ್ದಾರಂತೆ. ಇಂಥ ವೇಳೆ ಧರಣಿ ಬೇಡ’ ಎಂದು ಮನವೊಲಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ, ಪ್ರಚೋದಿಸುತ್ತಿರುವುದು ಎಷ್ಟು ಸರಿ ಎಂದು ಹೇಳಿದರು.

ಪರಿಹಾರಕ್ಕೆ ಕಲ್ಲುಹಾಕಿದ ಸಿಎಂ: ವಿರೋಧದ ನಡುವೆಯೂ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ನೀರು ಕೊಡಲು ಒಪ್ಪಿದ್ದಾರೆ. ಇದನ್ನು ಮುಖ್ಯಮಂತ್ರಿ ಶ್ಲಾ ಸಬೇಕಿತ್ತು. ಬದಲಿಗೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ಕಾರ್ಯಕರ್ತರನ್ನು ಹೋರಾಟಕ್ಕೆ ಪ್ರಚೋದಿಸುವುದು, ಆ ಮೂಲಕ ಪರಿಹಾರಕ್ಕೆ ಕಲ್ಲು ಹಾಕುವುದು ರಾಜ್ಯದ ಮುಖ್ಯಮಂತ್ರಿಯ ಕೆಲಸವಲ್ಲ ಎಂದು ತರಾಟೆಗೆ ತೆಗೆದುಕೊಂಡರು. 

Advertisement

ಪೆಪ್ಸಿ ಪ್ಲ್ರಾಂಟ್‌ಗೆ ಮಹದಾಯಿ ನೀರು: ಆತ್ಮಾರಾಮ ನಾಡಕರ್ಣಿ
ಪಣಜಿ:
“ನಾವು ಕರ್ನಾಟಕಕ್ಕೆ ಕುಡಿಯುವ ಹಾಗೂ ನೀರಾವರಿಗಾಗಿ ನೀರು ನೀಡಲು ವಿರೋಧಿಸುತ್ತಿಲ್ಲ. ಆದರೆ, ಕರ್ನಾಟಕ ನೀರಾವರಿ ಮಂಡಳಿ ಪೆಪ್ಸಿ ಕಂಪನಿಗೆ ನಿತ್ಯ 3 ಲಕ್ಷ ಲೀಟರ್‌ ನೀರು ನೀಡುವ ಒಪ್ಪಂದ ಮಾಡಿಕೊಂಡಿದ್ದು ಅದಕ್ಕೆ ಈ ನೀರನ್ನು ಬಳಸಿಕೊಳ್ಳಲು ಹಾತೊರೆಯುತ್ತಿದೆ’ ಎಂದು ಮಹದಾಯಿ ನದಿ ನೀರು ಪ್ರಕರಣದಲ್ಲಿ ಗೋವಾ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಆತ್ಮಾರಾಮ ನಾಡಕರ್ಣಿ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಾವು ಕರ್ನಾಟಕಕ್ಕೆ ಕುಡಿಯುವ ನೀರು ನೀಡಲು ವಿರೋ ಧಿಸುತ್ತಿಲ್ಲ. ಕೇವಲ ಕುಡಿಯಲು ಅಥವಾ ಇರಿಗೇಶನ್‌ಗಾಗಿ ಎಷ್ಟು ನೀರುಬೇಕು? 1, 2, 5 ಟಿಎಂಸಿಯಷ್ಟು ಕೊಡಲು ನಾವು ಸಿದ್ಧರಿದ್ದೇವೆ. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ ಪೆಪ್ಸಿ ಪ್ಲ್ರಾಂಟ್‌ ಹಾಗೂ ಕರ್ನಾಟಕ ವಾಟರ್‌ ಬೋರ್ಡ್‌ ಕರಾರು ಮಾಡಿಕೊಂಡಿವೆ. ಉತ್ತರ ಕರ್ನಾಟಕದಲ್ಲಿ ಹತ್ತಾರು ದೊಡ್ಡ ದೊಡ್ಡ ಕಾರ್ಖಾನೆಗಳಿವೆ.

ಕರ್ನಾಟಕದ 11 ಜಿಲ್ಲೆಗಳಲ್ಲಿ ಯಥೇತ್ಛ ಪ್ರಮಾಣದಲ್ಲಿ ನೀರಿದೆ. ಆ ಭಾಗದಲ್ಲಿ ಏಕೆ ಕಾರ್ಖಾನೆಗಳನ್ನು ಸ್ಥಾಪಿಸಿಲ್ಲ? ಹುಬ್ಬಳ್ಳಿ- ಧಾರವಾಡದಲ್ಲಿರುವ ಪೆಪ್ಸಿ ಪ್ಲ್ರಾಂಟ್‌ಗೆ 3 ಲಕ್ಷ ಲೀ.ನೀರಿನ ಅಗತ್ಯವಿದೆ. ಕರ್ನಾಟಕದ ಇನ್ನುಳಿದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಿದೆ.

ಆದರೆ ಆ ಭಾಗದ ನೀರನ್ನು ಬಳಕೆ ಮಾಡಿಕೊಳ್ಳದೆ ಗೋವಾಕ್ಕೆ ಹರಿದು ಬರುವ ಮಹಾದಾಯಿ ನದಿ ನೀರನ್ನು ಪಡೆದುಕೊಳ್ಳಲು ಏಕೆ ಮುಂದಾಗಿದೆ? ಮಹದಾಯಿ ನೀರನ್ನು ಅಣೆಕಟ್ಟು ಕಟ್ಟಿ ತಡೆ ಹಿಡಿದರೆ ಗೋವಾದಲ್ಲಿ ನೀರು ಬತ್ತಿ ಹೋಗಲಿದೆ. ಪರಿಸರಕ್ಕೂ ಹಾನಿಯುಂಟಾಗಲಿದೆ ಎಂದು ನಾಡಕರ್ಣಿ ಪ್ರಶ್ನಿಸಿದ್ದಾರೆ.

ಒಂದು ವೇಳೆ ನಾನು ಸಿದ್ದರಾಮಯ್ಯ ಅವರ ಸ್ಥಾನದಲ್ಲಿದ್ದು, ಯಡಿಯೂರಪ್ಪ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದರೆ, ಸ್ವತಃ ಅವರ ಮನೆಗೆ ತೆರಳಿ ಮಹದಾಯಿ ವಿಚಾರವಾಗಿ ಮುಂದಿನ ಪರಿಹಾರ ಮಾರ್ಗಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೆ. ಆದರೆ, ಸಿದ್ದರಾಮಯ್ಯ ಅವರಂತೆ ಎರಡು ಬಾರಿ ಶಾಲು ಕೊಡವಿ, ಕಾಮಾಲೆ ಕಣ್ಣಿನಿಂದ ನೋಡುತ್ತಿರಲಿಲ್ಲ
-ಸದಾನಂದಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next