Advertisement

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದಿಂದ ಸ್ಥಾನಮಾನವಿಲ್ಲ

09:11 PM Oct 30, 2019 | Team Udayavani |

ಪಿರಿಯಾಪಟ್ಟಣ: ಮರಳಿ ಬಿಜೆಪಿಗೆ ಸೇರ್ಪಡೆಗೊಳ್ಳವ ವಿಚಾರವಾಗಿ ಜಿಲ್ಲೆಯ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಸಭೆ ಸೇರಿ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು. ಪಟ್ಟಣದ ಕನಕ ಸಮುದಾಯ ಭವನದಲ್ಲಿ ಬುಧವಾರ ಕರೆಯಲಾಗಿದ್ದ ಬೆಂಬಲಿಗರ ಹಾಗೂ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.

Advertisement

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಮುಖಂಡರು ಪಕ್ಷಕ್ಕೆ ಮರಳು ಬರುವಂತೆ ಆಹ್ವಾನಿಸಿದ್ದಾರೆ. ಅದೇ ರೀತಿ ಅಭಿಮಾನಿಗಳು ಸಹ ಬಿಜೆಪಿಗಾಗಿ ನೀವು ದುಡಿದಿದ್ದೀರಿ, ನೀವು ದುಡಿದ ಪಕ್ಷಕ್ಕೆ ಮರಳಿ ಬರುವಂತೆ ಒತ್ತಾಯ ಹೇರುತ್ತಿದ್ದಾರೆ. ಬಿಜೆಪಿ ಸೇರುವುದೇ ಒಳಿತು ಎನ್ನುವ ಮಾತುಗಳನ್ನಾಡಿದ್ದಾರೆ. ಬಿಜೆಪಿ ವರಿಷ್ಠರು ನೀಡಿರುವ ಆಹ್ವಾನದ ಕುರಿತು ಶೀಘ್ರ ಚರ್ಚಿಸಿ, ಸೂಕ್ತ ನಿರ್ಣಯ ಪ್ರಕಟಿಸಲಿದ್ದೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಟಿಕೆಟ್‌ ಕೊಡಿಸಿದರೂ ಮೈತ್ರಿ ಸರ್ಕಾರದ ಮೈತ್ರಿ ನಿಯಮ ಪಾಲನೆಯಾಗಲಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ಮೂಲ, ವಲಸೆ ಪ್ರತ್ಯೇಕ ಬಣಗಳಿದ್ದು, 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡಸಿದ ಸಿದ್ದರಾಮಯ್ಯ ಅವರನ್ನೇ ವಲಸಿಗರೆಂಬ ವಿವಾದಕ್ಕೆ ಸಿಲುಕಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನಾನು ಸೋತ ನನಗೂ ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ಹಾಗೂ ಬೆಳೆಯುವ ಅವಕಾಶವಿಲ್ಲ,

ಚುನಾವಣೆಯ ನಂತರ ಕ್ಷೇತ್ರದಾದ್ಯಂತ ಮತದಾರರಿಗೆ ಕೃತಜ್ಞತೆ ಸಭೆ ನಡೆಸದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜಕೀಯ ನಿಂತ ನೀರಲ್ಲ. ಹಾಗಾಗಿ ಅಭಿಮಾನಿಗಳು ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆಯುತ್ತಿದ್ದು ಸೂಕ್ತ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ಪಿ.ಟಿ.ಲಕ್ಷ್ಮೀನಾರಾಯಣ, ರೈತ ಮೋರ್ಚಾ ಅಧ್ಯಕ್ಷ ಎಚ್‌.ಸಿ.ವೀರಭದ್ರ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಂದರ, ರವಿ, ರಾಜೇ ಅರಸ್‌, ಪ್ರಭಾಕರ ಆರಾಧ್ಯ, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ರಾಜೇಗೌಡ, ಹುಣಸೂರು ಕುರುಬರ ಸಂಘದ ಅಧ್ಯಕ್ಷ ಮುಖಂಡರಾದ ನಾರಾಯಣ ರಾವ್‌, ಬೆಮ್ಮತ್ತಿ ಕೃಷ್ಣ, ಚಂದ್ರು, ಹಿಟೆ° ಹೆಬ್ಟಾಗಿಲು ಜಯಶಂಕರ್‌, ರಾಜೇಗೌಡ, ಹುಣಸೇಕುಪ್ಪೆ ಕೃಷ್ಣೇಗೌಡ, ಮಹದೇವ್‌, ಗಣೇಶ್‌, ಗುರಪ್ಪಶೆಟ್ಟಿ, ಸಣ್ಣ ಸೋಮೇಗೌಡ ಇತರರಿದ್ದರು.

Advertisement

ಮೂರು ಸೋಲಿನಿಂದ ಕುಗ್ಗಿದ್ದೇನೆ: ಲೋಕಸಭಾ ಚುನಾವಣೆಯ ಮೂರು ಸೋಲುಗಳು ನನ್ನನ್ನು ಮಾನಸಿಕವಾಗಿ ಘಾಸಿಗೊಳಿಸಿವೆ. ಕಳೆದ ಲೋಕಸಭಾ ಚುನಾವಣೆಗೂ ಮುಂಚೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶ್ವಾಸನೆ ನಂಬಿ ಕಾಂಗ್ರೆಸ್‌ ಸೇರಿದೆ. ಪಕ್ಷ ಸೇರ್ಪಡೆಗೆ ಕೆಪಿಸಿಸಿ ಕಚೇರಿಗೆ ಹೋಗಿದ್ದೆ. ನಂತರ ಇಂದುವರೆಗೂ ಆ ಕಚೇರಿಗೆ ಕಾಲಿಟ್ಟಿಲ್ಲ. ಸಭೆಗಳಿಗೆ ಆಹ್ವಾನಿಸಲೂ ಇಲ್ಲ ಎಂದು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಬೇಸರ ವ್ಯಕ್ತಪಡಿಸಿದರು.

ಸಿ.ಎಚ್‌.ವಿಜಯಶಂಕರ್‌ ಬಿಜೆಪಿಯಲ್ಲಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಇನ್ನು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದವರು. ಅವರು ಮರಳಿ ಪಕ್ಷಕ್ಕೆ ಬರುವುದಾದರೆ ನಮ್ಮೆಲ್ಲರ ಸ್ವಾಗತವಿದೆ. ಪಿರಿಯಾಪಟ್ಟಣದ ನಾಯಕತ್ವದ ಕೊರತೆ ದೂರವಾಗಲಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಶಾಸಕರನ್ನು ಕಾಣುವ ಅವಕಾಶವಿದೆ.
-ಪಿ.ಜೆ.ರವಿ, ಬಿಜೆಪಿ ತಾಲೂಕು ಅಧ್ಯಕ್ಷ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗಿಷ್ಟವಾದ ಪಕ್ಷಕ್ಕೆ ಹೋಗಲು ಅವಕಾಶವಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಸೂಕ್ತವಾದ ಸ್ಥಾನಮಾನ ನೀಡಿಲ್ಲ ಎಂದು ವಿಜಯಶಂಕರ್‌ ಬಿಜೆಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಒಬ್ಬ ಜನಪ್ರತಿನಿಧಿ ಒಂದು ಸಮುದಾಯದ ಪ್ರತಿನಿಧಿಯಾಗಿ ಕೆಲಸ ಕಾರ್ಯ ಮಾಡಲು ಸಾಧ್ಯವಿಲ್ಲ. ಸಮಾಜದ ಎಲ್ಲ ಸಮುದಾಯದ ಸಹಮತ ಬೇಕು.
-ಅಪ್ಪಾಜಿಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next