Advertisement

ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ: ಸಚಿವ ಲಮಾಣಿ

03:23 PM Jan 19, 2018 | |

ಮಸ್ಕಿ: ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ ಭರವಸೆಗಳಲ್ಲಿ ಬಹುತೇಕ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದ್ದು, ನುಡಿದಂತೆ ನಡೆದಿದೆ ಎಂದು ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

Advertisement

ಸಮೀಪದ ಅಡವಿಬಾವಿ ತಾಂಡಾದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ನಿರ್ಮಿಸಿದ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ದಿನವೇ ಅನ್ನಭಾಗ್ಯ, ನಾಲ್ಕು ನಿಗಮಗಳಲ್ಲಿನ ಫಲಾನುಭವಿಗಳ ಸಾಲ ಮನ್ನಾದಂತಹ ಕ್ರಾಂತಿಕಾರಿ ಜನಪರವಾದ ನಿರ್ಧಾರ
ಕೈಗೊಂಡಿದೆ. ರಾಜ್ಯದ ಜನತೆಗೆ ಹಲವು ಭಾಗ್ಯಗಳ ಕೊಡುಗೆ ನೀಡಿದೆ ಎಂದರು.

ರಾಜ್ಯದಲ್ಲಿಯೇ ತಾಂಡಾವೊಂದು ಗ್ರಾಮ ಪಂಚಾಯತಿ ಹೊಂದಿದ ಹೆಗ್ಗಳಿಕೆ ಅಡವಿಬಾವಿ ತಾಂಡಾಕ್ಕಿದೆ. ಸತ್ಯ ಸೇವಾಲಾಲ್‌ರ ಜನ್ಮಸ್ಥಳವಾದ ಸೊರಕೊಂಡನೊಪ್ಪ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. 9 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. 

15 ಎಕರೆಯಲ್ಲಿ ತಾಂಡಾ ಜನರ ಮಕ್ಕಳಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿ ವಸತಿ ಶಾಲೆ ನಿರ್ಮಿಸಿ ಬಂಜಾರ ಸಮಾಜದ ಮಕ್ಕಳಿಗೆ ಶೇ.80ರಷ್ಟು ಪ್ರವೇಶಗಳನ್ನು ಕಾಯ್ದಿರಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ 7 ಸಾತ್ವಿಕ ಭವನಗಳನ್ನು ನಿರ್ಮಿಸಲಾಗಿದ್ದು, ಫೆ.14ರಂದು ಉದ್ಘಾಟಿಸಲಾಗುವುದು ಎಂದರು.

ಶಿಕ್ಷಣದ ಮಹತ್ವ ಏನು ಎಂಬುದರ ಅರಿವಿದೆ. ಆದ್ದರಿಂದ ವಸತಿ ನಿಲಯಕ್ಕೆ ಮನವಿ ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ವಸತಿ ನಿಲಯ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿ, ಬಹುತೇಕ ತಾಂಡಾಗಳಲ್ಲಿ ಸಿಸಿ ರಸ್ತೆಗಳನ್ನು ಹಾಗೂ ಸೇವಾಲಾಲ್‌ ಭವನಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

Advertisement

ಶಾಸಕ ಹಂಪನಗೌಡ ಬಾದರ್ಲಿ, ಬಂಜಾರ ಸಮಾಜ ರಾಜ್ಯ ಕಾರ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಜಿಪಂ ಸದಸ್ಯೆ ಅಮರಮ್ಮ ರಾಠೊಡ್‌, ತಾಪಂ ಕಾ.ನಿ. ಅಧಿಕಾರಿ ಪುಷ್ಮಾ ಕಮ್ಮಾರ, ಬಿಇಒ ಚಂದ್ರಶೇಖರ ಭಂಡಾರಿ, ಬಸವಂತರಾಯ ಕುರಿ, ದೊಡ್ಡಪ್ಪ ಕಡಬೂರ, ಡಾ| ಬಿ.ಎಚ್‌ .ದಿವಟರ್‌, ಯಲ್ಲೋಜಿರಾವ್‌ ಕೋರೆಕರ್‌, ಮಲ್ಲಯ್ಯ ಬಳ್ಳಾ, ಆರ್‌ .ಟಿ.ನಾಯ್ಕ, ಶರಣಪ್ಪ ಮೇಟಿ, ಶಿವಣ್ಣ ನಾಯಕ, ಶಿವಕುಮಾರ, ವೆಂಕಟೇಶ ಗುತ್ತೆದಾರ, ಬಸವರಾಜಸ್ವಾಮಿ ಹಸಮಕಲ್‌, ನಾಣಪ್ಪ ಮುಖ್ಯಗುರು ನಾಗರಾಜ್‌, ತಾಪಂ ಸಹಾಯಕ ನಿರ್ದೇಶಕ ಅಮರೇಶ ಇತರರು ಇದ್ದರು. ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ತಾಂಡಾಗಳ ಬಂಜಾರ ಸಮಾಜ ಬಾಂಧವರು ಉಪಸ್ಥಿತರಿದ್ದರು ಸನ್ಮಾನ: ಇದೇ ವೇಳೆ ಬಂಜಾರ ಸಮಾಜದ ವತಿಯಿಂದ ಸಚಿವರು, ಶಾಸಕರನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next