Advertisement
ಸೋಮವಾರ ಬೆಳಗ್ಗೆ 10.45ಕ್ಕೆ ನಂಜನಗೂಡು ಪಟ್ಟಣದಲ್ಲಿ ಶಾದಿಮಹಲ್ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂಜನಗೂಡು ನಗರಸಭೆಯಿಂದ ನಗರೋತ್ಥಾನ-3 ರ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭ, ನಂಜನಗೂಡು ಎಪಿಎಂಸಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸುವರು.
Related Articles
Advertisement
ಮಧ್ಯಾಹ್ನ 12.30 ರಿಂದ 2.30 ಗಂಟೆಯವರೆಗೆ ನಂಜನಗೂಡು ತಾಲೂಕಿನ ಎಸ್.ಹೊಸಕೋಟೆ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಕೀರ್ಣದಲ್ಲಿ ಪದವಿ ಪೂರ್ವ ಕಾಲೇಜಿನ ಉನ್ನತೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಕಟ್ಟಡ ಉದ್ಘಾಟನೆ: ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಕಟ್ಟಡ ಉದ್ಘಾಟಿಸುವರು. ಕುಕ್ಕರಹಳ್ಳಿ ದೋಭಿಘಾಟ್‌ನ ಬಳಿ 66/11 ಕೆ.ವಿ. ಗ್ಯಾಸ್ ಇನ್ಸೂಲೇಟೆಡ್ ಸ್ಟೇಷನ್ ಉದ್ಘಾಟನೆ, ಟ್ರಾಮ ಸೆಂಟರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎಸ್‌ಎಂಟಿ 100 ಹಾಸಿಗೆಯುಳ್ಳ ಎಂಸಿಎಚ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯ ಶಂಕುಸ್ಥಾಪನೆ, ಯೋಗ ಕಾಲೇಜು ಶಂಕುಸ್ಥಾಪನೆ, ಮೈಸೂರು ನಗರದ ಕ್ಯಾತಮಾರನಹಳ್ಳಿಯಲ್ಲಿ ಸೋಲಿಗರ ಭವನ ಶಂಕುಸ್ಥಾಪನೆ, ಟಿ.ನರಸೀಪುರ ತಾಲೂಕು ಭೈರಾಪುರದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟಿಸುವರು.
ಮಧ್ಯಾಹ್ನ 3.30 ಗಂಟೆಗೆ ಅಪೋಲೋ ಆಸ್ಪತ್ರೆಯ ಕೊನೆಯ ಮುಡಾ ನಿವೇಶನ ಗಾಂಧಿ ವಿಚಾರ ಪರಿಷತ್ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30 ಗಂಟೆಗೆ ನ್ಯೂ ಸಯ್ನಾಜಿರಾವ್ ರಸ್ತೆಯಲ್ಲಿ ದಿ ಮುಸ್ಲಿಂ ಕೋ-ಆಪರೇಟಿವ್ ಬ್ಯಾಂಕ್ ಲಿ., ಮೈಸೂರು ಇದರ ಶತಮಾನೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಪೊಲೀಸ್ ಆಯುಕ್ತರ ಕಚೇರಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಂತರ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.