Advertisement

ಸುಳ್ಯ ನಗರದ ಚರಂಡಿ ಸ್ಥಿತಿ ಶೋಚನೀಯ : ಮಳೆ ನೀರು ಸಮರ್ಪಕ ಹರಿವಿಗೆ ಅಡ್ಡಿ

01:51 PM May 28, 2023 | Team Udayavani |

ಸುಳ್ಯ: ಸುಳ್ಯ ನ.ಪಂ. ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಚರಂಡಿ ಗಳ ಸ್ಥಿತಿ ಶೋಚನೀಯವಾಗಿದೆ ಮಳೆಗಾಲ ಹತ್ತಿರ ಆಗುತ್ತಿರುವುದರಿಂದ ದುರಸ್ತಿಗೆ ಇದು ಸಕಾಲವಾಗಿದೆ.

Advertisement

ಸುಳ್ಯ ನಗರದಲ್ಲಿ ಚರಂಡಿ ವ್ಯವಸ್ಥೆ ಇದ್ದರೂ, ಇದೀಗ ತ್ಯಾಜ್ಯ, ಕಸ ಮಿಶ್ರಿತ ಮಣ್ಣು, ಪೊದೆಗಳಿಂದ ತುಂಬಿದೆ. ಕೆಲವೆಡೆ ಚರಂಡಿಗೆ ಅಳವಡಿಸಿದ ಪೈಪ್‌ಗ್ಳಲ್ಲಿ ತ್ಯಾಜ್ಯ ಸಿಲುಕಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗುತ್ತಿದೆ. ಹಲವೆಡೆ ಚರಂಡಿಗಳಲ್ಲಿ ಪೂರ್ತಿ ಮಣ್ಣು ತುಂಬಿವೆ. ನಗರದ ಒಳಭಾಗದ ಕೆಲವು ರಸ್ತೆ ಬದಿಯಲ್ಲಿ ಚರಂಡಿ ಗಳೇ ಇಲ್ಲ, ಇಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಸಮಸ್ಯೆ ಸೃಷ್ಟಿಸುತ್ತಿವೆ.

ಸ್ಥಳೀಯಾಡಳಿತದ ನಿರ್ಲಕ್ಷ್ಯ ಹಾಗೂ ಕೆಲವು ಜನರ ಅನಾಗರಿಕ ವರ್ತನೆಯೂ ಚರಂಡಿಗಳು ದುಸ್ತರಗೊಳ್ಳಲು ಕಾರಣ ಎಂಬ ಮಾತು ಸಾರ್ವಜನಿಕ ವಲ ಯದ್ದು. ಕೆಲವು ಕಡೆಗಳಲ್ಲಿ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುತ್ತಾರೆ ಎಂಬ ದೂರು ವ್ಯಕ್ತವಾಗುತ್ತಿದೆ. ಇದರಿಂದಾಗಿ ಚರಂಡಿ ಗಳಲ್ಲಿ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗುತ್ತಿದೆ.

ಕೆಲವೆಡೆ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆ ಅಂಗಳ, ರಸ್ತೆಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿದೆ. ಸ್ಥಳೀಯಾಡಳಿತ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮುರಿದ ಬಿದ್ದಿವೆ ಸ್ಲ್ಯಾಬ್ ಗಳು
ನಗರದ ಕೆಲವೆಡೆ ಚರಂಡಿಗೆ ಹಾಸಿದ ಸ್ಲ್ಯಾಬ್ ಗಳು ಮುರಿದು ಚರಂಡಿಯಲ್ಲಿ ಸಿಲುಕಿಕೊಂಡಿದ್ದರೂ, ಇದರ ದುರಸ್ತಿಯೂ ನಡೆದಿಲ್ಲ. ಇನ್ನೂ ಹಲವೆಡೆ ಸ್ಲ್ಯಾಬ್ ಗಳು ಮುರಿಯುವ ಭೀತಿಯಲ್ಲಿದ್ದು ಇದು ಸಾರ್ವಜನಿಕರಿಗೆ ಅಪಾಯಕಾರಿ ಯಾಗಿ ಪರಿಣಮಿಸುತ್ತಿದೆ. ಚರಂಡಿಯಲ್ಲಿ ಸಿಲುಕಿರುವ ಸ್ಲ್ಯಾಬ್ ಗಳಿಂದ ಸರಾಗವಾಗಿ ನೀರು ಹರಿಯಲು ಅಡ್ಡಿಯಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

Advertisement

ಚರಂಡಿಯಲ್ಲೇ ಕೊಳಚೆ ನೀರು
ನಗರದ ಚರಂಡಿಯಲ್ಲಿ ಕೊಳಚೆ ನೀರು ಕೂಡ ಹರಿಯುತ್ತಿರುವುದು ಕಂಡು ಬಂದಿದೆ. ಇದರಿಂದ ಆ ಭಾಗದಲ್ಲಿ ದುರ್ವಾಸನೆ, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ. ಕೆಲವೆಡೆ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ಕಂಡುಬರುತ್ತದೆ. ಸುಳ್ಯದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ.

ದುರಸ್ತಿಗೆ ಸಕಾಲ
ಸುಳ್ಯದಲ್ಲಿ ಈಗಾಗಲೇ ಮಳೆ ಆರಂಭ ಗೊಂಡಿದ್ದು, ಕೆಲವೇ ದಿನದಲ್ಲಿ ಮಳೆಗಾಲ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಚರಂಡಿಗಳನ್ನು ದುರಸ್ತಿಪಡಿಸಬಹುದಾ ಗಿದೆ. ಇದರಿಂದ ಕೃತಕ ನೆರೆ, ಕೊಳಚೆ ನೀರು ರಸ್ತೆಯಲ್ಲಿ ಹರಿಯುವುದನ್ನು ತಪ್ಪಿಸ ಬಹುದಾಗಿದೆ. ಸುಳ್ಯದ ಮುಖ್ಯರಸ್ತೆ, ಗಾಂಧಿನಗರ, ವಿವೇಕಾನಂದ ವೃತ್ತ, ಜಯನಗರ, ಸೇರಿದಂತೆ ನ.ಪಂ. ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ಚರಂಡಿಗಳ ದುರಸ್ತಿ ಕಾರ್ಯ ನಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next