ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಆಕ್ರೋಶ ಗೊಂಡ ಉದ್ಯೋಗಿಗಳು ಕಂಪನಿಯ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಪುಟ್ಟೇನಹಳ್ಳಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪುಟ್ಟೇನಹಳ್ಳಿಯ ರಿಯಲ್ ಎಸ್ಟೇಟ್ ಕಂಪನಿಯೊಂ ದರಲ್ಲಿ ಈ ಘಟನೆ ನಡೆದಿದ್ದು, ಕಂಪನಿಯ ಮಾಜಿ ಉದ್ಯೋಗಿಗಳಾದ ರಾಹುಲ್ ಪೂಜಾರಿ ಮತ್ತು ಲ್ಯಾವ್ಸನ್ ಪೀಟರ್ ಜಾನ್ ಎಂಬವರ ವಿರುದ್ಧ ಪುಟ್ಟೇನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ 11 ಲಕ್ಷ ರೂ. ಮೌಲ್ಯದ ಪೀಠೊಪಕರಣಗಳಿಗೆ ಹಾನಿಯಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಉಮಾಶಂಕರ್ ಮತ್ತು ರೂಪಾ ಎಂಬವರ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಆರೋಪಿ ಗಳು ಸೇಲ್ಸ್ ಮ್ಯಾನೇಜರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಆದರೆ, ಬ್ಯೂಸಿನೆಸ್ ಟಾರ್ಗೆಟ್ ಸಾಧಿಸದ ಕಾರಣಕ್ಕೆ ಈ ಇಬ್ಬರನ್ನು ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಆರೋಪಿಗಳು ಕಂಪನಿಯ ರೂಪಾ ಎಂಬವರಿಗೆ ಕರೆ ಮಾಡಿ ಸಂಬಳ ಕೊಡುವಂತೆ ಕೇಳಿದ್ದರು. ಆದರೆ, ರೂಪಾ ಮತ್ತು ಉಮಾಶಂಕರ್ ಸಂಬಳ ಕೊಡಲು ನಿರಾಕರಿಸಿದ್ದರು. ಅದರಿಂದ ಮತ್ತಷ್ಟು ಆಕ್ರೋಗೊಂಡಿದ್ದ ಆರೋಪಿಗಳು ಸೆ.27ರಂದು ಬೆಳಗ್ಗೆ ಕಚೇರಿಗೆ ಬಂದು ಹೌಸ್ ಕೀಪಿಂಗ್ ಕೆಲಸದವರನ್ನು ಹೊರಗೆ ಕಳುಹಿಸಿ, ಪೆಟ್ರೋಲ… ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಕಂಪನಿಯ ಗೋಡೆ, ಕಂಪ್ಯೂಟರ್ ಟೇಬ ಲ್‌ಗಳು ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.