Advertisement
ಕಳೆದ 2 ವರ್ಷಗಳ ಸರಾಸರಿ ಮಳೆಯ ಪ್ರಮಾಣವನ್ನು ಅವಲೋಕಿಸಿದರೆ ಸುರಿದ ಮಳೆಯು ಗರಿಷ್ಠ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿರುವುದು ಅಂತರ್ಜಲದ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಕೆರೆ ನದಿಗಳು ಬರಿದಾಗಿದ್ದು ಬೋರ್‌ವೆಲ್ ಸಹಿತ ಇನ್ನಿತರ ವ್ಯವಸ್ಥೆಗಳು ಕನಿಷ್ಠ ಸೌಕರ್ಯದೆಡೆಗೆ ಸಾಗುತ್ತಿರುವುದು ಆತಂಕದ ವಾತಾವರಣ ಸೃಷ್ಟಿಸಿದೆ. ಕೋಟೇಶ್ವರ, ಬೀಜಾಡಿ, ಗೋಪಾಡಿ ಸಹಿತ ಕೊಲ್ಲೂರು ಜಡ್ಕಲ್ ಮುಂತಾದ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರು ಸರಬರಾಜು ಟ್ಯಾಂಕ್ ನಿರ್ಮಾಣ ಕಾರ್ಯ ನಡೆದಿದ್ದರೂ ಅಲ್ಲಿ ಯಥೇತ್ಛ ನೀರು ಸರಬರಾಜಿಗೆ ಬಾವಿ ಕೆರೆಗಳಲ್ಲಿ ನೀರಿನ ಕೊರತೆ ಕಂಡುಬಂದಿರುವುದರಿಂದ ಗ್ರಾ.ಪಂ. ಗಳು ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.
ಮಾರ್ಚ್ ತಿಂಗಳ ಆರಂಭದ ಹಂತದಲ್ಲೇ ಅನೇಕ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದ್ದು ದುಪ್ಪಟ ಬೆಲೆಗೆ ನೀರನ್ನು ಖರೀದಿಸುವ ಅನಿವಾರ್ಯತೆ ಕಂಡುಬರುತ್ತಿದೆ. ಯಥೇತ್ಛ ನೀರು ಹೊಂದಿರುವ ಅನೇಕ ಭೂ ಮಾಲಕರು ನೀರು ಸರಬರಾಜು ವ್ಯವಸ್ಥೆಯನ್ನೇ ಒಂದು ಉದ್ಯಮವಾಗಿ ಸ್ವೀಕರಿಸಿ ಅದ ಕ್ಕೊಂದು ದರ ನಿಗದಿ ಪಡಿಸಿ ನೀರನ್ನು ಹಂಚುತ್ತಿರುವುದು ಮುಂಬರುವ ದಿನಗಳಲ್ಲಿ ನೀರಿಗಾಗಿ ಯಾತನೆ ಪಡಬೇಕಾದ ಪರಿಸ್ಥಿತಿಗೆ ಕಾರಣವಾಗಬಹುದು. ತಾಲೂಕಿಗೆ ಬಂದೀತೆ ನೀರಿನ ಬರಗಾಲ?
ಕುಡಿಯುವ ನೀರಿಗಾಗಿ ಹಾಹಾ ಕಾರ ಪಡುತ್ತಿರುವ ಈ ಸಂದರ್ಭ ಕೃಷಿಭೂಮಿ ಹೊಂದಿರುವ ಅನೇಕ ಕೃಷಿಕರು ತೆಂಗು ಕಂಗು, ಬಾಳೆ, ಇನ್ನಿತರ ತೋಟಗಾರಿಕೆಯಲ್ಲಿ ನೀರಿನ ಅಭಾವ ಕಂಡು ಬಂದಿ ರುವುದರಿಂದ ತೋಟಕ್ಕೆ ವಾರದಲ್ಲಿ 2 ಬಾರಿ ನೀರು ಬಿಡು ವುದು ಕಷ್ಟ ಸಾಧ್ಯವಾಗಿರುವು ದರಿಂದ ಮುಂದಿನ ದಿನ ಗಳಲ್ಲಿ ಕುಡಿಯುವ ನೀರಿಗಾಗಿ ಬವಣಿಸ ಬೇಕಾಗಬಹುದೆಂಬ ಆತಂಕ ಹೊಂದಿದ್ದಾರೆ. ಅನೇಕ ಕಡೆಗಳಲ್ಲಿ ತೆಂಗು ಹಾಗೂ ಅಡಿಕೆ ತೋಟಗಳಿಗೆ ಈಗಾಗಲೇ ವಾರದಲ್ಲಿ 2 ಬಾರಿ ಯಷ್ಟೇ ನೀರುಣಿಸುವ ಪ್ರಕ್ರಿಯೆ ನಡೆಸುತ್ತಿದ್ದು ಮುಂದಿನ ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ಅಂತ ರ್ಜಲದ ಕೊರತೆಯಿಂದಾಗಿ ನೀರಿ ಗಾಗಿ ವಲಸೆ ಹೋಗುವ ಭೀತಿ ಹೊಂದಿರುತ್ತಾರೆ. ಈಗಾಗಲೇ ಪಶ್ಚಿಮ ಘಟ್ಟದ ನದಿ ತೀರದಲ್ಲಿ ನೀರಿನ ಕೊರತೆ ಕಂಡುಬಂದಿದೆ.