Advertisement

ಮತ್ತೆ ಸ್ವಚ್ಛ ನಗರಿ ನಂ.1 ಪಟ್ಟ ಉಳಿಸಿಕೊಳ್ತೆವೆ

12:48 PM May 06, 2017 | Team Udayavani |

ಮೈಸೂರು: ಸ್ವಚ್ಛ ನಗರಿ ಪ್ರಶಸ್ತಿಯ ಹ್ಯಾಟ್ರಿಕ್‌ ಕೈತಪ್ಪಿರುವುದರಿಂದ, ನಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಮತ್ತೆ ಪ್ರಥಮ ಸ್ಥಾನಕ್ಕೆ ಬರಲು ಬೇಕಾದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಮೇಯರ್‌ ಎಂ.ಜೆ.ರವಿಕುಮಾರ್‌ ತಿಳಿಸಿದರು.

Advertisement

ನಗರದಲ್ಲಿ  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 73 ನಗರಗಳ ಮಧ್ಯೆ ಸ್ಪರ್ಧೆ ನಡೆದಿದ್ದರಿಂದ ಮೊದಲ ಸ್ಥಾನಕ್ಕೆ ಬಂದಿದ್ದೆವು. ಈ ವರ್ಷ ಸಮೀಕ್ಷೆ ವೇಳೆ ನಗರದ ಜನತೆ ಸ್ಪಂದಿಸಲಿಲ್ಲ. ಇದರಲ್ಲಿ ಬಿಎಸ್‌ಎನ್‌ಎಲ್‌ ಪಾತ್ರವೂ ಇದೆ ಹಾಗೂ ರಾಜಕೀಯ ಕಾರಣಗಳಿಂದಲೂ ಪ್ರಶಸ್ತಿ ನಮ್ಮ ಕೈತಪ್ಪಿದೆ. ಈ ಬಾರಿ 434 ನಗರಗಳ ಜತೆಗೆ ಸ್ಪರ್ಧೆ ಇದ್ದರೂ ಅಂಕಗಳಿಕೆಯಲ್ಲಿ ನಾವೇ ಮುಂದಿದ್ದೇವೆ. ಆದರೂ ಕಳೆದ ವರ್ಷ 128ನೇ ಸ್ಥಾನದಲ್ಲಿದ್ದ ಇಂದೋರ್‌ಗೆ ಪ್ರಥಮ ಸ್ಥಾನ ನೀಡಲಾಗಿದೆ ಎಂದು ದೂರಿದರು.

ಸತತ ಎರಡನೇ ಬಾರಿಗೆ ಮೊದಲ ಸ್ಥಾನ ಬಂದ ನಂತರ ಪಾಲಿಕೆಯ ಹಿಂದಿನ ಆಯುಕ್ತರು  ಪ್ರಶಸ್ತಿಯ ಗುಂಗಿನಲ್ಲೇ 6 ತಿಂಗಳು ಮೈಮರೆತು ಕುಳಿತರು. ನಗರದಲ್ಲಿ 425 ವೈಯಕ್ತಿಕ ಶೌಚಾಲಯ ನಿರ್ಮಿಸಬೇಕಿತ್ತು, ಕೇಂದ್ರ ಸರ್ಕಾರ ಪ್ರತಿ ಶೌಚಾಲಯಕ್ಕೆ 4 ಸಾವಿರ ರೂ.ಗಳನ್ನು ಮಾತ್ರ ಕೊಡುತ್ತದೆ. ಇಷ್ಟು ಕಡಿಮೆ ಮೊತ್ತದಲ್ಲಿ ಶೌಚಾಲಯ ನಿರ್ಮಾಣ ಸಾಧ್ಯವೇ ಇಲ್ಲ, ಈ ಬಗ್ಗೆ ಟೆಂಡರ್‌ ಕರೆಯಲೇ ಇಲ್ಲ.

ಇನ್ನು ಸಮೀಕ್ಷೆ ವೇಳೆ ಜನರು ಸ್ಪಂದನೆ ನೀಡದಿರಲು ಬಿಎಸ್‌ಎನ್‌ಎಲ್‌ ಸರ್ವರ್‌ ಸಮಸ್ಯೆಯೂ ಕಾರಣ. ಹಿಂದೆಲ್ಲಾ ಸಮೀಕ್ಷೆ ಮುಗಿದ ಒಂದು ತಿಂಗಳಲ್ಲಿ ಫ‌ಲಿತಾಂಶ ಪ್ರಕಟಿಸಲಾಗುತ್ತಿತ್ತು, ಆದರೆ, ಈ ವರ್ಷ ಮೂರು ತಿಂಗಳು ವಿಳಂಬ ಮಾಡಿರುವುದರ ಹಿಂದೆ ಏನೋ ರಾಜಕಾರಣವಿದೆ. ಇಲ್ಲವಾದಲ್ಲಿ ಕಳೆದ ವರ್ಷ 128ನೇ ಸ್ಥಾನದಲ್ಲಿದ್ದ ಇಂದೋರ್‌ ಮೊದಲ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಜೆ.ಜಗದೀಶ್‌ ಮಾತನಾಡಿ, ಈ ವರ್ಷ ಸ್ಪರ್ಧೆ ಹೆಚ್ಚಿದ್ದರಿಂದ ಮೈಸೂರಿಗೆ ಐದನೇ ಸ್ಥಾನ ದೊರೆತಿದೆ. ಮುಂದಿನ ವರ್ಷ ಪ್ರಥಮ ಸ್ಥಾನಕ್ಕೆ ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಪ್ರಥಮ ಸ್ಥಾನಕ್ಕೆ ಬರಲು ಏನೆಲ್ಲಾ ಪ್ರಯತ್ನ ಮಾಡಬೇಕು ಎಂಬ ಬಗ್ಗೆ ಮುಂದಿನ ಸಭೆ ನಡೆಸಿ ಸಲಹೆ ಪಡೆಯಲಾಗುವುದು. ಜತೆಗೆ ವಾರ್ಡುವಾರು ಸಭೆ ನಡೆಸಿ ಸಲಹೆ ಪಡೆಯಲಾಗುವುದು ಎಂದು ಹೇಳಿದರು.

Advertisement

ಹಿಂದೆ ಎರಡು ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಬಂದಿದ್ದರೂ ನಗರದ ಸ್ವಚ್ಛತೆ ಹೇಗೆ ಕಾಪಾಡಬೇಕು ಎಂಬ ಬಗ್ಗೆ ಪಾಲಿಕೆಯಲ್ಲಿ ವಿಸ್ತತ ಯೋಜನಾ ವರದಿಯನ್ನೇ ಸಿದ್ಧಪಡಿಸಿರಲಿಲ್ಲ. ತಾವು ಆಯುಕ್ತರಾಗಿ ಬಂದ ಎರಡು ತಿಂಗಳಲ್ಲಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಅನುಮೋದನೆ ದೊರೆತರೆ ಪಾಲಿಕೆಗೆ ಸುಮಾರು 200 ಪೌರಕಾರ್ಮಿಕರು ಹೆಚ್ಚುವರಿಯಾಗಿ ಆಗ ಸ್ವಚ್ಛತೆಗೆ ಇನ್ನಷ್ಟು ಹೆಚ್ಚು ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬಹುದು ಎಂದರು.

ಜೂನ್‌ 5ರಿಂದ ಮನೆಗಳಲ್ಲೇ ಕಸ ವಿಂಗಡನೆಗೆ ಅಭಿಯಾನ ಆರಂಭಿಸಲಾಗುವುದು. ಯೋಜನಾ ನಿರ್ವಹಣೆ ಘಟಕವನ್ನೂ ಇಂದಿನಿಂದಲೇ ಆರಂಭಿಸುವುದಾಗಿ ತಿಳಿಸಿದರು. ಉಪಮೇಯರ್‌ ರತ್ನ ಲಕ್ಷ್ಮಣ್‌, ವಿರೋಧಪಕ್ಷದ ನಾಯಕ ಜಗದೀಶ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಫ್ಲೆಕ್ಸ್‌, ಭಿತ್ತಿಪತ್ರ ಅಂಟಿಸಿದರೆ ಕ್ರಿಮಿನಲ್‌ ಕೇಸ್‌
ಮೈಸೂರು ನಗರದಲ್ಲಿ ಫ್ಲೆಕ್ಸ್‌ ಪ್ರಿಂಟ್‌ ಮಾಡುವವರ ಹಾಗೂ ಭಿತ್ತಿಚಿತ್ರ ಅಂಟಿಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಅವರ ಪರವಾನಗಿಯನ್ನೇ ರದ್ದುಪಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಜೆ.ಜಗದೀಶ್‌ ಎಚ್ಚರಿಕೆ ನೀಡಿದರು. ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಆಗಾಗ್ಗೆ ದಾಳಿ ಮಾಡಿ ಪ್ಲಾಸ್ಟಿಕ್‌ಅನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದರೆ, ಇದು ಹೆಚ್ಚು ಪರಿಣಾಮಕಾರಿ ಆಗುತ್ತಿಲ್ಲ. ಹೀಗಾಗಿ ನಾಳೆಯಿಂದಲೇ(ಭಾನುವಾ

Advertisement

Udayavani is now on Telegram. Click here to join our channel and stay updated with the latest news.

Next