Advertisement
ಜೊತೆಗೆ ಮಂಗಳವಾರ ಸಂಜೆಯಿಂದ ರಾತ್ರಿವರೆಗೂ ಕೆಲವೆಡೆ ಧಾರಾಕಾರ ಮಳೆ ಮುಂದುವರಿದು ನಗರದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಸಮಸ್ಯೆ ತಂದೊಡ್ಡಿದೆ. ಸೋಮವಾರ ರಾತ್ರಿ ಕೆಲವೇ ಗಂಟೆ ಸುರಿದ ಮಳೆಗೆ ನಗರದ 42 ಬಡಾವಣೆಗಳು ಜಲಾವೃತವಾಗಿವೆ. ಭಾರಿ ಮಳೆಯಿಂದ ಕಾಲುವೆ ಉಕ್ಕಿ ಹರಿದು ಬಡಾವಣೆಗಳಿಗೆ ನೀರು ನುಗ್ಗಿಗಿ. ಹಲವೆಡೆ ಕಾರು, ಬೈಕ್‌ಗಳು ಕೊಚ್ಚಿ ಹೋಗಿವೆ. ರಾಜ ಕಾಲುವೆಗೆ ಹೊಂದಿಕೊಂಡಂತೆ ನಿರ್ಮಿಸಿಕೊಂಡಿದ್ದ ಸಣ್ಣ ಪುಟ್ಟ ಮನೆಗಳಲ್ಲಿದ್ದ ಆಹಾರಧಾನ್ಯ, ಅಗತ್ಯ ವಸ್ತುಗಳೆಲ್ಲಾ ನೀರು ಪಾಲಾಗಿವೆ.
Related Articles
ಸೋಮವಾರ ಮಧ್ಯರಾತ್ರಿ ಆರಂಭವಾದ ಮಳೆ ಮುಂಜಾನೆ ಹೊತ್ತಿಗೆ ವಿರಾಮ ನೀಡಿತ್ತು. ಆದರೆ ಅಗತ್ಯವಸ್ತುಗಳೆಲ್ಲಾ ನೀರು ಪಾಲಾಗಿದ್ದರಿಂದ ಕಂಗಾಲಾಗಿದ್ದ ಜನ ಮನೆಯಲ್ಲಿದ್ದ ನೀರನ್ನೆಲ್ಲಾ ಹೊರಕ್ಕೆ ಹಾಕಿ ಸ್ವತ್ಛಗೊಳಿಸುವ ವೇಳೆಗೆ ಮಂಗಳವಾರ ಸಂಜೆ ಕಳೆದಿತ್ತು. ಆದರೆ ಆ ಹೊತ್ತಿಗಾಗಲೇ ಮತ್ತೆ ಮಳೆ ಶುರುವಾಗಿದ್ದು ಜನರ ಆತಂಕ ಹೆಚ್ಚಿಸಿತು. ರಾಜ ಕಾಲುವೆ ಅಕ್ಕಪಕ್ಕದ ಜನರಂತೂ ಅಗತ್ಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗದೆ ಸಂಕಟಪಟ್ಟರು.
Advertisement
ಮುಳುಗಿದ ವಾಹನಗಳುರಸ್ತೆ, ಕಟ್ಟಡದ ನೆಲಮಹಡಿಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲಾ ನೀರಿನಲ್ಲಿ ಮುಳುಗಿ ಕೆಟ್ಟುನಿಂತವು. ಕೋರಮಂಗಲ ಬಿಎಂಟಿಸಿ ಟಿಟಿಎಂಸಿಯ ತಳಮಹಡಿಯ ವಾಹನ ನಿಲುಗಡೆ ತಾಣದಲ್ಲಿ ಏಳು ಅಡಿ ನೀರು ನಿಂತಿದ್ದರಿಂದ ಆರು ಕಾರು, 25 ದ್ವಿಚಕ್ರ ವಾಹನಗಳು ಸಂಪೂರ್ಣ ಮುಳುಗಿದ್ದವು. ಈ ಬಗ್ಗೆ ದೂರು ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನ 12 ಗಂಟೆಗೆ ನೀರು ಪಂಪ್ ಮಾಡಿ ಹೊರಕ್ಕೆ ಹಾಕುವ ಕೆಲಸ ಆರಂಭಿಸಿದ್ದರು. ಟಿಟಿಎಂಸಿಯ ತಳಮಹಡಿಯಲ್ಲಿ ಏಳು ಅಡಿ ನೀರು ನಿಂತಿದ್ದು, ಮಧ್ಯಾಹ್ನ 12 ಗಂಟೆಗೆ ಆರಂಭವಾದ ನೀರು ತೆರವು ಕಾರ್ಯ ರಾತ್ರಿ 10 ಗಂಟೆವರೆಗೂ ಮುಂದುವರಿದಿದೆ. ಇನ್ನೂ ಮೂರು ಅಡಿ ನೀರು ಬಾಕಿಯಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಒಟ್ಟು ಮೂರು ವಾಹನ ಹಾಗೂ ಸಿಬ್ಬಂದಿ ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನಾಗರಾಜ್ ತಿಳಿಸಿದರು. ಎಲ್ಲೆಲ್ಲಿ ಅನಾಹುತ
ಹಲಸೂರು, ಜೋಗುಪಾಳ್ಯ, ಯಡಿಯೂರು, ಜೆ.ಸಿ.ರಸ್ತೆ, ಶಾಮಣ್ಣಗೌಡ ಬಡಾವಣೆ, ಜೆ.ಪಿ.ನಗರ ಬಳಿಯ ಡಾಲರ್ ಕಾಲೋನಿ, ಕೋರಮಂಗಲ 4ನೇ ಬ್ಲಾಕ್, 8ನೇ ಬ್ಲಾಕ್, ಅನುಗ್ರಹ ಬಡಾವಣೆ, ವೈಶ್ಯ ಬ್ಯಾಂಕ್ ಕಾಲೋನಿ, ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್‌ನ 5, 6, 7ನೇ ಸೆಕ್ಟರ್, ಮಡಿವಾಳ 2ನೇ ಮುಖ್ಯರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಶಾಂತಿನಗರ ಕೆಎಸ್‌ಆರ್‌ಟಿಸಿ ವಸತಿಗೃಹ, ಕೋಡಿ ಚಿಕ್ಕನಹಳ್ಳಿ, ಕೋನೇನ ಅಗ್ರಹಾರ, ದೊಮ್ಮಸಂದ್ರ, ನೀಲಸಂದ್ರ, ಆಸ್ಟಿನ್‌ಟೌನ್, ಇಂದಿರಾನಗರ, ಮಧುರಾನಗರ, ಮಹದೇಶ್ವರನಗರ ಸೇರಿದಂತೆ ಹಲವೆಡೆ ಕೆಲ ಮನೆಗಳು, ಬಡಾವಣೆಗಳು ನಡುಗಡ್ಡೆಗಳಾಂತಾಗಿ ಜನ ಪರದಾಡಿದರು. ಸಂಪಂಗಿರಾಮನಗರ ಪೊಲೀಸ್ ಠಾಣೆ ಸಹ ಜಲಾವೃತಗೊಂಡು ಸಿಬ್ಬಂದಿ ತೊಂದರೆಗೆ ಸಿಲುಕಿದರು. ಜನರ ಆಕ್ರೋಶ
ಮಳೆ ಸುರಿದು ಅನಾಹುತ ಸಂಭವಿಸಿ ಹಲವು ಗಂಟೆ ಕಳೆದರೂ ಪಾಲಿಕೆಯಿಂದ ಪರಿಹಾರ ಕಾರ್ಯ ಕೈಗೊಳ್ಳದ ಕಾರಣ ಸಂತ್ರಸ್ತರು ತೀವ್ರ ಆಕ್ರೋಶಗೊಂಡಿದ್ದರು. ಕೋರಮಂಗಲದ ಎಸ್‌ಟಿ ಬೆಡ್ ಲೇಔಟ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದ ಮಳೆ ನೀರು ಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಸಿದ್ದೇಗೌಡ ಅವರನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ವಿಚಲಿತರಾದ ಎಂಜಿನಿಯರ್‌ಗಳು ತಕ್ಷಣವೇ ಅಲ್ಲಿಂದ ಕಾಲ್ಕಿತ್ತರು. ಮುಸ್ಲಿಮರಿಂದ ದೇವಾಲಯ ಸ್ವತ್ಛತೆ
ವಿಲ್ಸನ್ ಗಾರ್ಡನ್ ಬಳಿಯ ಜೆ.ಕೆ.ಪುರದಲ್ಲಿ ಮಳೆಯಿಂದಾಗಿ ಗಣೇಶ ದೇವಸ್ಥಾನ ಜಲಾವೃತವಾಗಿತ್ತು. ಅರ್ಚಕರು ಹಾಗೂ ಸ್ಥಳೀಯರು ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದರು. ಇದನ್ನು ಕಂಡ ಮುಸ್ಲಿಂ ಸಮುದಾಯದ ಯುವಕರು ದೇವಸ್ಥಾನದ ಆವರಣದಲ್ಲಿದ್ದ ನೀರನ್ನು ಹೊರ ಹಾಕುವ ಕಾರ್ಯಕ್ಕೆ ನೆರವಾಗುವ ಮೂಲಕ ಸೌಹಾರ್ದತೆ ಮೆರೆದರು. ನಗರದ ಹಲವೆಡೆ ಏಕಕಾಲಕ್ಕೆ ಭಾರಿ ಅನಾಹುತ ಉಂಟಾಗಿದ್ದರಿಂದ ಪರಿಹಾರ ಕಾರ್ಯಕ್ಕೂ ಹಿನ್ನಡೆಯಾಗಿತ್ತು. ಪಾಲಿಕೆಯ 8 ವಲಯಗಳ ಒಟ್ಟು 16 ಪ್ರಹರಿ ತಂಡಗಳು ಕಾರ್ಯಾಚರಣೆಗಿಳಿದಿದ್ದರೂ ದೂರುಗಳ ಸಂಖ್ಯೆ ಹೆಚ್ಚಾಗಿದ್ದರಿಂದ ನಿರ್ವಹಣೆ ಕಷ್ಟವಾಯಿತು. ತಡರಾತ್ರಿವರೆಗೂ ದೂರು ಆಲಿಸಿದ ಮೇಯರ್
ಭಾರೀ ಮಳೆಹಿನ್ನೆಲೆಯಲ್ಲಿ ನೀರು ನುಗ್ಗಿದ ಪ್ರದೇಶಗಳಾದ ಶಾಂತಿನಗರ ಬಸ್‌ಡಿಪೋ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದ್ದ ಮೇಯರ್ ಪದ್ಮಾವತಿ ನಂತರ ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿ ಮಂಗಳವಾರ ಸಂಜೆಯಿಂದ ತಡರಾತ್ರಿವರೆಗೆ ನಿಯಂತ್ರಣ ಕೋಣೆಯಲ್ಲಿ ಕುಳಿತು ಜನರಿಂದ ದೂರುಗಳನ್ನು ಸ್ವೀಕರಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಎಲ್ಲೆಲ್ಲಿ?
ಸೋಮವಾರ ರಾತ್ರಿ ಸುರಿದ ಮಳೆಗೆ ದಕ್ಷಿಣ ಭಾಗದಲ್ಲಿ ಸಮಸ್ಯೆಯಾಗಿದ್ದರೆ ಮಂಗಳವಾರ ಸುರಿದ ಮಳೆಗೆ ಉತ್ತರ ಹಾಗೂ ಪಶ್ಚಿಮ ಭಾಗದ ಪ್ರದೇಶದ ಜನರು ತೊಂದರೆಗೊಳಗಾದರು. ಲಗ್ಗೆರೆ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್, ಬಸವನಗುಡಿ ಪ್ರದೇಶಗಳಲ್ಲಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡವು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಆರ್.ಟಿ ನಗರ, ಹೆಬ್ಟಾಳ, ಸಹಕಾರ ನಗರ, ಕೊಡಿಗೇನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಮಂಗಳವಾರ ತಡರಾತ್ರಿಯವರೆಗೂ ನಗರದ ಹಲವು ಭಾಗಗಳಲ್ಲಿ ತುಂತುರು ಮಳೆ ಮುಂದುವರಿದಿತ್ತು. ಮರ ಉರುಳಿ ನಾಲ್ಕು ಮಕ್ಕಳಿಗೆ ಗಾಯ
ಬೆಂಗಳೂರು: ಭಾರೀ ಮಳೆಗೆ ಮರವೊಂದು ಬಿದ್ದು ಸರ್ಕಾರಿ ಶಾಲೆಯ ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಬೆರಟೇನ ಅಗ್ರಹಾರದ ತಿಮ್ಮರೆಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರೊತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಬೆಳಗ್ಗೆ 8.15ರ ಸುಮಾರಿಗೆ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸುವಾಗ ಏಕಾಏಕಿ ಮರವೊಂದು ಮಕ್ಕಳ ಮೇಲೆ ಬಿದಿದೆ. ಈ ವೇಳೆ ಶಾಲೆಯ ನಾಲ್ಕು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. 4ನೇ ತರಗತಿಯ ಶಶಾಂಕ್ (ತಲೆಗೆ ಗಾಯ), 6ನೇ ತರಗತಿ ವಿದ್ಯಾರ್ಥಿ ಲಕ್ಷಿàಕಾಂತ್ (ಬಲಗಾಲಿಗೆ ಗಾಯ), ಇಮ್ರಾನ್ (ತಲೆಗೆ ಗಾಯ) ಹಾಗೂ ರಾಕೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಜಾರ್ಜ್‌ಗೆ ಜನರ ತರಾಟೆ
ಭಾರೀ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳ ವಸ್ತು ಸ್ಥಿತಿ ಅರಿಯಲು ಬಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಪದ್ಮಾವತಿ ಅವರನ್ನು ಶಾಂತಿನಗರದಲ್ಲಿ ಜನರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಜಾರ್ಜ್ ಅವರನ್ನು ಸುತ್ತುವರಿದ ಸ್ಥಳೀಯರ ಜೊತೆ ಸೇರಿಕೊಂಡ ಮಹಿಳೆಯೊಬ್ಬರು ಪ್ರತಿ ಬಾರಿ ಮಳೆಬಂದಾಗಲೂ ಮನೆಗಳಿಗೆ ನೀರು ನುಗ್ಗುತ್ತೆ, ಆದರೂ ಸಮಸ್ಯೆ ಇತ್ಯರ್ಥಪಡಿಸುವುದಿಲ್ಲ. ಕಾರ್ಪೋರೇಟರ್ ಈ ಕಡೆ ತಲೆ ಹಾಕಲ್ಲ ಎಂದು ಪ್ರಶ್ನೆಗಳನ್ನು ಕೇಳಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಈ ವಿಚಾರವಾಗಿ ಸಚಿವರು ಸಮರ್ಥನೆಗೆ ಮುಂದಾದರೂ, ಸ್ಥಳೀಯರು ವಾಗ್ವಾದ ಮುಂದುವರಿಸಿದ್ದರು. ಪರಿಶೀಲನೆ ಬಳಿಕ ಮಾತಾನಾಡಿದ ಸಚಿವ ಜಾರ್ಜ್, ಕಳೆದ ರಾತ್ರಿ ಮೋಡಗಳು ಸ್ಫೋಟಗೊಂಡ ಪರಿಣಾಮ ಭಾರೀ ಮಳೆಯಾಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ಮಾತ್ರ ನೀರು ನುಗ್ಗಿದೆ. ನಗರದಲ್ಲಿ ಕೆಲ ಬ್ರಿಡ್ಜ್ಗಳು ತಗ್ಗಿನಿಂದ ಕೂಡಿರುವುದು ನೀರಿನ ಹರಿವು ಹೆಚ್ಚಾಗಲು ಕಾರಣ. ಇಂತಹ ಬ್ರಿಡ್ಜ್ಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲು ಆದೇಶಿಸಿದ್ದೇನೆ. ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ 400 ಮೀಟರ್‌ನಷ್ಟು ಪೂರ್ಣಗೊಂಡಿದ್ದು ಇನ್ನೂ 400 ಮೀಟರ್ ಬಾಕಿ ಉಳಿದಿದೆ ಎಂದರು.