Advertisement
ಮಾಜಿ ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಮುಖ್ಯಮಂತ್ರಿ ಯಾಗಿದ್ದರೂ, ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ಎದುರಾಗುವ ಚುನಾವಣೆಗಳಲ್ಲಿ ಬಸವರಾಜ್ ಬೊಮ್ಮಾಯಿಗೆ ತಮ್ಮ ಸಾಮರ್ಥ್ಯ ವನ್ನು ತೋರಿಸುವ ಸವಾಲು ಮತ್ತು ಅವಕಾಶ ಎರಡೂ ಒದಗಿ ಬರಲಿದೆ.
Related Articles
Advertisement
ಜಿ.ಪಂ. ಚುನಾವಣೆ:
ಈಗಾಗಲೇ ಅವಧಿ ಮುಗಿದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯ ಲಿದೆ. ಇದು ಮಿನಿ ವಿಧಾನಸಭಾ ಚುನಾವಣೆ ಎಂದೇ ಪರಿಗಣಿತ ವಾಗುವುದರಿಂದ ಇದರ ಫಲಿ ತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಗ್ರಾಮೀಣ ಭಾಗದ ಮತದಾರರ ನಾಡಿ ಮಿಡಿತವನ್ನು ಬಿಂಬಿಸುವ ಈ ಚುನಾವಣೆಗಳು ಬೊಮ್ಮಾಯಿಗೆ ಸವಾಲಾಗಲಿದೆ.
ಬಿಬಿಎಂಪಿ, ಪಾಲಿಕೆ ಚುನಾವಣೆ:
ಜತೆಗೆ ಬಿಬಿಎಂಪಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಹಿತ ಅನೇಕ ಮಹಾನಗರ ಪಾಲಿಕೆಗಳ ಚುನಾವಣೆಗಳೂ ಎದುರಾಗಲಿವೆ. ನಗರ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ಒರೆಗೆ ಹಚ್ಚಲು ಬಿಜೆಪಿ ಗಿರುವ ದೊಡ್ಡ ಅವಕಾಶವೇ ಬಿಬಿಎಂಪಿ ಚುನಾವಣೆ. ಬಿಬಿಎಂಪಿಯನ್ನು ಗೆಲ್ಲಲು ಅಲ್ಲಿನ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬುದೂ ಮುಖ್ಯವಾಗುತ್ತದೆ.
ಸಿಎಂ ತವರು ಜಿಲ್ಲೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯೂ ವರ್ಷಾಂತ್ಯಕ್ಕೆ ನಡೆಯಲಿದೆ. ಜತೆಗೆ ಕಲಬುರಗಿ ಮಹಾನಗರ ಪಾಲಿಕೆ ಹಾಗೂ 100ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಸಿಎಂ ಸಾಮರ್ಥ್ಯವನ್ನು ಪರೀಕ್ಷಿಸಲಿವೆ.
25 ಪರಿಷತ್ ಸ್ಥಾನಗಳು :
ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ 25 ಸದಸ್ಯರ ಅವಧಿ 2022ರ ಜನವರಿಗೆ ಅಂತ್ಯವಾಗಲಿದ್ದು, ಇದಕ್ಕೂ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿವೆ. ಮೇಲ್ಮನೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಹುಮತ ಪಡೆಯಲು ಈ ಚುನಾವಣೆ ಹೆಚ್ಚು ಮಹತ್ವದ್ದಾಗಿದೆ. 2022ರ ಜುಲೈಗೆ ಸಭಾಪತಿ ಬಸವರಾಜ್ ಹೊರಟ್ಟಿ ಅವಧಿ ಪೂರ್ಣಗೊಳ್ಳುವುದರಿಂದ ಬಿಜೆಪಿ ಬಹುಮತ ಪಡೆದರೆ ತಮ್ಮದೇ ಸಭಾಪತಿಯನ್ನು ಹೊಂದಲು ಅವಕಾಶ ಸಿಗಲಿದೆ. ಹೀಗಾಗಿ ಈ ಚುನಾ ವಣೆಯಲ್ಲಿ ಹೆಚ್ಚು ಸದಸ್ಯರನ್ನು ಗೆಲ್ಲಿಸುವ ಸವಾಲು ಸಿಎಂ ಮುಂದಿದೆ.
-ಶಂಕರ ಪಾಗೋಜಿ