Advertisement

ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆದರೆ ಚೀಫ್ ಇಂಜಿನಿಯರ್‌ ಹೊಣೆ: ಸಚಿವ ಸುನೀಲ್‌ ಕುಮಾರ್‌

08:18 PM Feb 24, 2022 | Team Udayavani |

ಬೆಂಗಳೂರು: ಕೃಷಿ ಪಂಪಸೆಟ್‌ ಫೀಡರ್‌ಗಳಿಗೆ ಹಗಲು ವೇಳೆ ನಿರಂತರ ಏಳು ಗಂಟೆಗಳ ಕಾಲ ಮೂರು ಫೇಸ್‌ ಹಾಗೂ ಗೃಹ ಬಳಕೆ ವಿದ್ಯುತ್‌  ಪೂರೈಕೆ ಮಾಡುವಲ್ಲಿ ಆಗುವ ವ್ಯತ್ಯಯಗಳಿಗೆ ವಲಯ ಮುಖ್ಯ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಂಧನ  ಸಚಿವ ವಿ.ಸುನೀಲ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಬೇಸಿಗೆ ಕಾಲದಲ್ಲಿ ಮೂರು ತಿಂಗಳು ಕಾಲ  ಗೃಹ ಬಳಕೆ, ವಾಣಿಜ್ಯ ಬಳಕೆ, ಕೈಗಾರಿಕೆ ಬಳಕೆ ಹಾಗೂ ಕೃಷಿ ಪಂಪಸೆಟ್‌ ವಿದ್ಯುತ್‌ ಪೂರೈಕೆಗೆ ಸಂಬಂಧಪಟ್ಟಂತೆ ಎಲ್ಲ ಎಸ್ಕಾಂ ಹಾಗೂ ಕೆಪಿಟಿಸಿಎಲ್‌ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು ಸಮಸ್ಯೆಗಳಿಗೆ ವಲಯ ಮುಖ್ಯ ಎಂಜಿನಿಯರ್‌ಗಳನ್ನು ಹೊಣೆ ಮಾಡಲಾಗುವುದು. ಹೀಗಾಗಿ ಪರಿಸ್ಥಿತಿ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಆಗುವ ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆಯಿಂದ ಆಗುವ ವಿದ್ಯುತ್‌ ಪೂರೈಕೆ ಸಮಸ್ಯೆ ಬಗ್ಗೆ ಪ್ರತಿ ದಿನ ಬೆಳಗ್ಗೆ 11 ಗಂಟೆಯೊಳಗಾಗಿ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ವಿದ್ಯುತ್‌ ವ್ಯತ್ಯಯದಿಂದ ಆಗುವ ತೊಂದರೆಯನ್ನು ಕರ್ತವ್ಯ ಲೋಪ ಎಂದೇ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಸಾಮಾನ್ಯ ದಿನಗಳ ವಿದ್ಯುತ್‌ ಬಳಕೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ಸರಬರಾಜು ಸಂದರ್ಭದಲ್ಲಿ ವ್ಯತ್ಯಾಸ ವಾಗುತ್ತದೆ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ರಾಜ್ಯದ ಅನೇಕ ಭಾಗಗಳಿಂದ ಜನಪ್ರತಿನಿಧಿಗಳು , ರೈತಮುಖಂಡರು, ರೈತರು  ನೀರಾವರಿ ಪಂಪ್‌ಸೆಟ್‌ಗಳಿಗೆ ಸರ್ಕಾರದ ನಿಯಮಾವಳಿ ಪ್ರಕಾರ 7 ಗಂಟೆ ಮೂರು ಪೇಸ್‌ ವಿದ್ಯುತ್‌  ಪೂರೈಕೆಯಾಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು ಸಮಸ್ಯೆ ಪರಿಹಾರಕ್ಕೆ ಉತ್ತರದಾಯಿತ್ವ ನಿಗದಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಕಾಫಿ ಬೆಳೆಗಾರರಿಗೆ 12 ಗಂಟೆ ವಿದ್ಯುತ್‌ :

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರಿಗೆ ಹಾಗೂ ಇತರೆ ರೈತ ವರ್ಗಕ್ಕೆ ಅನುಕೂಲವಾಗುವಂತೆ ಪ್ರತಿ ದಿನ 12 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಪೂರೈಕೆ ಮಾಡುವುದಕ್ಕೆ ಸಭೆಯಲ್ಲಿ ಸಚಿವರು ಸ್ಪಷ್ಟ ನೀಡಿದ್ದಾರೆ.

ಕಾಫಿ ಬೆಳೆಗಾರರಿಗೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ನಿರಂತರ 12 ಗಂಟೆ ವಿದ್ಯುತ್‌ ಪೂರೈಕೆ ಅನಿವಾರ್ಯವಾಗಿದೆ ಎಂದು ರೈತರಿಂದ ಬೇಡಿಕೆ ವ್ಯಕ್ತವಾಗಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿರುವ ಸಚಿವರು ಸೂಕ್ತ ಆದೇಶ ಹೊರಡಿಸಿ 12 ಗಂಟೆ ವಿದ್ಯುತ್‌ ಪೂರೈಕೆಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಪರಿಹಾರ ಬಿಡುಗಡೆ :

ವಿದ್ಯುತ್‌ ಅವಘಡದಿಂದ ಎರಡು ಕೈ ಕಳೆದುಕೊಂಡಿದ್ದ ಕಲಬುರಗಿ ಜಿÇÉೆ ಬಸವನಬಾಗೇವಾಡಿಯ ಕೆ.ಎನ್‌.ಸದಾಶಿವ ಎಂಬುವರಿಗೆ ಕೃತಕ ಕೈ ಅಳವಡಿಸುವುದಕ್ಕೆ 2.56 ಲಕ್ಷ  ರೂ. ಪರಿಹಾರ ಧನ ಬಿಡುಗಡೆ ಮಾಡುವಂತೆ ಇದೇ ವೇಳೆ ಸಚಿವರು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next