Advertisement

ಧರ್ಮ-ಕರ್ಮದ ರಥ ಗುರಿಮುಟ್ಟುವ ಪ್ರಯತ್ನ

12:30 AM Feb 15, 2019 | |

ಚಿತ್ರರಂಗಕ್ಕೆ ಬರುವ ಹೊಸಬರು ತಮ್ಮ ಸಿನಿಮಾದ ಕಥೆ, ಕಾನ್ಸೆಪ್ಟ್, ಮೇಕಿಂಗ್‌ ಎಲ್ಲವೂ ಭಿನ್ನವಾಗಿರಬೇಕು ಎಂದು ಯೋಚಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ ಕೂಡಾ. ಹಾಗಂತ ಆ ಪ್ರಯತ್ನಗಳೆಲ್ಲವೂ ಫ‌ಲಿಸುತ್ತಾ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. ಈಗ ಹೊಸಬರ ತಂಡವೊಂದು ಕಣ್ತುಂಬ ಕನಸು ಕಟ್ಟಿಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ. ಅದು “ವಿಜಯರಥ’ ಮೂಲಕ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. “ಪ್ರೀತಿ ಕಿತಾಬು’ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವಿರುವ ಅಜಯ್‌ ಸೂರ್ಯ ಈ ಚಿತ್ರದ ನಿರ್ದೇಶಕರು. ಧರ್ಮ ಮತ್ತು ಕರ್ಮ ಎಂಬ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅಜಯ್‌, “ಮನುಷ್ಯರು ಎರಡು ಸಿದ್ಧಾಂತದಲ್ಲಿ ಬದುಕುತ್ತಿರುತ್ತಾರೆ.  ಅದು ಧರ್ಮ ಮತ್ತು ಕರ್ಮ. ಮನುಷ್ಯ ಗುರಿ ಮುಟ್ಟುವ ಪ್ರಯತ್ನದಲ್ಲಿ ಎಡವುತ್ತಾನೆ. ಅದು ಕರ್ಮ. ಇನ್ನೊಬ್ಬ  ಗುರಿ ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ತನ್ನ ಜೊತೆ ಗುರಿ° ಮುಟ್ಟಿಸಲು  ಪ್ರಯತ್ನ ಮಾಡುವ  ಕಥಾನಾಯಕನ ಸುತ್ತ ಈ ಸಿನಿಮಾ ಸಾಗುತ್ತದೆ. ಆತನಿಗೆ ಮೂರನೇ ರೂಪ ಕಾಣಿಸುತ್ತದೆ. ಯಾರಿಗೂ ಕಾಣದ ಆ ಶಕ್ತಿ ಏನು ಎಂಬುದೇ ಸಿನಿಮಾದ ಸಸ್ಪೆನ್ಸ್‌’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ. ಚಿತ್ರದಲ್ಲಿ ಒಂದಷ್ಟು ಉಪಕಥೆಗಳಿದ್ದು, ಇಲ್ಲಿ ಪೌರಾಣಿಕ ಹಾಗೂ ಜಾನಪದ ಸನ್ನಿವೇಶಗಳು ಬರಲಿವೆಯಂತೆ. 

Advertisement

ವಸಂತ್‌ ಕಲ್ಯಾಣ್‌ ಈ ಚಿತ್ರದ ನಾಯಕ. ಈ ಹಿಂದೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವಸಂತ್‌ ಇಲ್ಲಿ ಹಳ್ಳಿ ಹುಡುಗನಾಗಿ ನಟಿಸಿದ್ದಾರೆ. ನಾಯಕನಿಗೆ ಒಂದು ಹಂತದಲ್ಲಿ ಸಮಸ್ಯೆ ಎದುರಾದಾಗ ಅವನ ಬದುಕು ಏನಾಗುತ್ತದೆ ಎನ್ನುವ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ಅರ್ಪಿತಾ ಗೌಡ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಎಸಿಪಿಯಾಗಿ ರಾಜೇಶ್‌ನಟರಂಗ, ನಾಯಕಿಯ ತಂದೆಯಾಗಿ ಹನುಮಂತೆ ಗೌಡ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಪ್ರೇಮ್‌ಕುಮಾರ್‌ ಸಂಗೀತವ, ಚಂದ್ರು ಸಾಹಿತ್ಯವಿದೆ. ಚಿತ್ರವನ್ನು ರಮೇಶ್‌.ಆರ್‌.ಮಧುಗಿರಿ ನಿರ್ಮಾಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next