Advertisement

ಅವ್ಯವಸ್ಥೆ ಆಗರ ತೇರದಾಳ ಸರ್ಕಾರಿ ಆಸ್ಪತ್ರೆ

11:59 AM Nov 24, 2019 | Suhan S |

ತೇರದಾಳ: ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದ್ದು, ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ವೈದ್ಯರು, ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದು, ಅಧಿ ಕಾರಿಗಳ ನಿರ್ಲಕ್ಷ್ಯದಿಂದ ರೋಗಿಗಳು ಪರದಾಡುವಂತಾಗಿದೆ.

Advertisement

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಸಾಲಟ್ಟಿ, ಗೋಲಭಾವಿ, ಯರಗಟ್ಟಿ, ಹನಗಂಡಿ, ಹಳಿಂಗಳಿ, ತಮದಡ್ಡಿ ಕಾಲತಿಪ್ಪಿ ಸೇರಿದಂತೆ ಒಟ್ಟು 7 ಹಳ್ಳಿಗಳಿದ್ದು,70 ಸಾವಿರ ಜನಸಂಖ್ಯೆ ಹೊಂದಿದೆ. ಆಸ್ಪತ್ರೆಗೆ ಬರುವ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರ ಸಂಖ್ಯೆ ಹೆಚ್ಚಿದ್ದು, ಉಪಚರಿಸಲು ವೈದ್ಯಾ ಧಿಕಾರಿಗಳಿಲ್ಲದಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.

ನಗರ ವ್ಯಾಪ್ತಿಯಲ್ಲಿ ಮೂರು ಆರೋಗ್ಯ ಉಪಕೇಂದ್ರಗಳಿದ್ದರೆ, ಗ್ರಾಮೀಣ ಪ್ರದೇಶಗಳಾದ ಗೋಲಭಾವಿ, ಹನಗಂಡಿ ಹಾಗೂ ಹಳಿಂಗಳಿಯಲ್ಲಿ ಮೂರು ಉಪಕೇಂದ್ರಗಳಿದ್ದು, ಸಿಬ್ಬಂದಿ ಕೊರತೆಯಿದೆ. ಹೀಗೆ ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರಬೇಕಾದ ಮುಖ್ಯ ವೈದ್ಯಾ ಧಿಕಾರಿ, ಔಷಧ ವಿಭಾಗದ ಸಿಬ್ಬಂದಿ, ಸ್ಟಾಫ್‌ ನರ್ಸ್‌, ಪುರುಷ ಸಿಬ್ಬಂದಿ, ಗ್ರೂಪ್‌ ಡಿ. ಹುದ್ದೆಗಳಲ್ಲಿ ಬಹಳಷ್ಟು ಖಾಲಿಯಿದೆ. ಆ್ಯಂಬುಲೆನ್ಸ್‌ ಇದ್ದರೂ ಚಾಲಕರಿಲ್ಲ. ಹಲವಾರು ಬಾರಿ ಲಿಖೀತ ಹಾಗೂ ಮೌಖೀಕವಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಿಬ್ಬಂದಿ ಸಮಸ್ಯೆಯಷ್ಟೇ ಅಲ್ಲದೆ ಸ್ವತ್ಛತೆ ಸಮಸ್ಯೆ ಆಗರವಾಗಿದೆ. ಆಸ್ಪತ್ರೆ ಆವರಣ ಗಲೀಜಿನಿಂದ ಕೂಡಿದೆ. ಆವರಣದ ತುಂಬ ಹಳೆಯ ಕಟ್ಟಡಗಳಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಆಸ್ಪತ್ರೆಗೆ ತಲುಪಲು ಉತ್ತಮ ರಸ್ತೆಯಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾರ್ಯವ್ಯಾಪ್ತಿ ಹೆಚ್ಚಾಗಿರುವುದರಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಬಡವರಿಗೆ ಉಪಯೋಗಬೇಕಾದ ಆಸ್ಪತ್ರೆ ಮೂಲಸೌಕರ್ಯಗಳ ಕೊರತೆ ಮತ್ತು ವೈದ್ಯರು ಇಲ್ಲದೆ ಬಿಕೋ ಎನ್ನುತ್ತಿದೆ. ಬಸವರಾಜ ಬಾಳಿಕಾಯಿ, ರಾಜು ನಧಾಪ, ಪುರಸಭೆ ಮಾಜಿ ಅಧ್ಯಕ್ಷರು.

 

Advertisement

-ಬಿ.ಟಿ. ಪತ್ತಾರ

Advertisement

Udayavani is now on Telegram. Click here to join our channel and stay updated with the latest news.

Next