Advertisement

ಬಂಟ ಸಮಾಜದ ಪರಿವರ್ತನೆಗೆ ಮನಃಸ್ಥಿತಿ ಬದಲಾಗಬೇಕು: ಆಶಾಜ್ಯೋತಿ ರೈ

11:30 AM Jan 30, 2018 | Team Udayavani |

ಪಡುಬಿದ್ರಿ: ಬಂಟ ಸಮಾಜದಲ್ಲಿ ಇಂದು ಕಾಡುತ್ತಿರುವ ವಿಚ್ಛೇದನ ಮತ್ತು ಅಂತರ್ಜಾತೀಯ ವಿವಾಹ ಸಮಸ್ಯೆಗಳು ಕೇವಲ ಸ್ತ್ರೀ ಕೇಂದ್ರಿತ ಸಮಸ್ಯೆಗಳಲ್ಲ. ಸಮಾಜದ ಆಮೂಲಾಗ್ರ ಪರಿವರ್ತನೆಗೆ ನಮ್ಮ ತುಡಿತಗಳು ಬದಲಾಗಬೇಕು, ನಮ್ಮ ಮನಃಸ್ಥಿತಿ ಬದಲಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಎಲ್ಲರೊಂದಿಗೆ ನಮ್ಮ ನಾರಿಯರು ರೂವಾರಿಗಳಾಗಬೇಕಿದೆ ಎಂದು ಮಂಗಳೂರಿನ ಬಂಟರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ ಹೇಳಿದರು.

Advertisement

ಅವರು ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗವು ಜ. 28ರಂದು ಆಯೋಜಿಸಿದ್ದ ನಾರಿ ರೂವಾರಿ 2018 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರನ್ನು “ಬಂಟ ರೂವಾರಿ’ ಎಂಬ ಬಿರುದಿನೊಂದಿಗೆ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್‌ ಶೆಟ್ಟಿ, ಬಂಟರು
ತಮ್ಮೊಳಗಿನ ಸಣ್ಣಪುಟ್ಟ ಭೇದಭಾವಗಳನ್ನು ತೆ ೂರೆದು ಒಗ್ಗಟ್ಟಾಗಬೇಕಿದೆ. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ
ಗಳನ್ನು ಕಂಡುಕೊಂಡು ಸಮಾಜವನ್ನು ಬಲಪಡಿಸೋಣ. ಇದರಲ್ಲಿ ನಾರಿಯರ ಪಾತ್ರವೂ ಬಲು ಮುಖ್ಯ ಎಂದರು. 

ಐಆರ್‌ಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನಾಗಪುರದಲ್ಲಿ ಆದಾಯಕರ ವಿಭಾಗದ ಸಹಾಯಕ ಕಮಿಶನರ್‌ ಆಗಿರುವ ನಿವ್ಯಾ ಪಿ. ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ ಅವರನ್ನು ಪಡುಬಿದ್ರಿ ಬಂಟರ ಮಹಿಳಾ ವಿಭಾಗದ ಪರವಾಗಿ ಸಮ್ಮಾನಿಸಲಾಯಿತು. 

ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಪುಣೆಯ ಹೊಟೇಲ್‌ ಉದ್ಯಮಿ ಚಂದ್ರಹಾಸ ಶೆಟ್ಟಿ ಎರ್ಮಾಳು, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ನಿವ್ಯಾ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿ, ಪಿ. ರವೀಂದ್ರನಾಥ ಜಿ. ಹೆಗ್ಡೆ, ನವೀನ್‌ಚಂದ್ರ ಜೆ. ಶೆಟ್ಟಿ ಮಾತನಾಡಿದರು. 

Advertisement

ವೇದಿಕೆಯಲ್ಲಿ ಬಂಟ್ಸ್‌ ವೆಲ್‌ಫೇರ್‌ ಟ್ರಸ್ಟ್‌ನ ಅಧ್ಯಕ್ಷ ವೈ. ಶಶಿಧರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಕಾರ್ಯದರ್ಶಿ ಡಾ| ಮನೋಜ್‌ ಕುಮಾರ್‌ ಶೆಟ್ಟಿ, ಕೋಶಾಧಿಕಾರಿ ಶರತ್‌ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಂಗಲಾ ಎಸ್‌.ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಹಕರಿಸಿದ ಮುಂಬಯಿಯ ಉದ್ಯಮಿ ಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಪಡುಬಿದ್ರಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್‌. ಶೆಟ್ಟಿ ವಹಿಸಿದ್ದರು.

ಶಾಲಿನಿ ಎಸ್‌. ಶೆಟ್ಟಿ ಸ್ವಾಗತಿಸಿದರು. ಅರ್ಪಿತಾ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಂಟರ ಮಹಿಳಾ ವಿಭಾಗದ
ಕೋಶಾಧಿಕಾರಿ ರಶ್ಮಿ ಎಚ್‌. ಶೆಟ್ಟಿ ವಂದಿಸಿದರು. ನಾರಿ ರೂವಾರಿ ಸ್ಪರ್ಧೆಯಲ್ಲಿ ಸುರತ್ಕಲ್‌ ಬಂಟರ ಸಂಘ ಪ್ರಥಮ ಬಹುಮಾನ 50,000 ರೂ.,ಟ್ರೋಫಿ, ಕಾಪು ಬಂಟ್ಸ್‌ ಸಂಘ ದ್ವಿತೀಯ ಬಹುಮಾನ 25,000 ರೂ., ಟ್ರೋಫಿ ಮತ್ತು ಕಾರ್ಕಳ ತಾ| ಬಂಟರ ಮಹಿಳಾ ಸಂಘವು 10,000 ರೂ. ನಗದು ಮತ್ತು ಟ್ರೋಫಿ ಯೊಂದಿಗೆ ತೃತೀಯ ಬಹುಮಾನ ಗಳಿಸಿದವು. ಶಿಸ್ತುಬದ್ಧ ತಂಡವಾಗಿ ಉಳ್ಳಾಲ ಬಂಟ್ಸ್‌ ಸಂಘ ತಂಡವು ಪ್ರಶಂಸೆಯನ್ನು ಪಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next