Advertisement

ಚಾಂಪಿಯನ್‌ ಬೆಳಗಾವಿಗೆ ಮೊದಲ ಜಯ

10:41 AM Aug 26, 2018 | Team Udayavani |

ಮೈಸೂರು: ನಾಯಕ ಸ್ಟುವರ್ಟ್‌ ಬಿನ್ನಿ ಅವರ ಆಲ್‌ರೌಂಡ್‌ ಪ್ರದರ್ಶನದಿಂದ ಹಾಲಿ ಚಾಂಪಿಯನ್‌ ಬೆಳಗಾವಿ ಪ್ಯಾಂಥರ್ಸ್‌ 7ನೇ ಆವೃತ್ತಿಯ ಕೆಪಿಎಲ್‌ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ ಶನಿವಾರ ಮೊದಲ್ಗೊಂಡ ಮೈಸೂರು ಚರಣದ ಮೊದಲ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ಬೆಳಗಾವಿ 22 ರನ್‌ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಬೆಳಗಾವಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 157 ರನ್‌ ಕಲೆಹಾಕಿತು. ಇದನ್ನು ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್‌ 18.3 ಓವರ್‌ಗಳಲ್ಲಿ 135 ರನ್‌ಗೆ ಆಲೌಟ್‌ ಆಯಿತು.

ಮೊದಲು ಬ್ಯಾಟಿಂಗ್‌ ಮಾಡಿದ ಬೆಳಗಾವಿ ಪ್ಯಾಂಥರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ದಿûಾಂಶು ನೇಗಿ (0) ಔಟಾದರು. ಇದರಿಂದ ಬೆಳಗಾವಿ ಆರಂಭಿಕ ಆಘಾತ ಅನುಭವಿಸಿತು. ಪಂದ್ಯದ 4ನೇ ಓವರ್‌ನಲ್ಲಿ ತಂಡದ ಮೊತ್ತ 23 ರನ್‌ ಆಗಿದ್ದಾಗ ರಕ್ಷಿತ್‌ (12) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಸ್ಟಾಲಿನ್‌ ಹೂವರ್‌(38) ಹಾಗೂ ಅವಿನಾಶ್‌ (25) 3ನೇ ವಿಕೆಟ್‌ಗೆ 42 ರನ್‌ಗಳ ಜತೆಯಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ಇವರಿಬ್ಬರ ವಿಕೆಟ್‌ ಪತನದ ಅನಂತರ ಕಣಕ್ಕಿಳಿದ ನಾಯಕ ಸ್ಟುವರ್ಟ್‌ ಬಿನ್ನಿ (31) ಭರ್ಜರಿ ಬ್ಯಾಟಿಂಗ್‌ ಮೂಲಕ ತಂಡದ ರನ್‌ ಗಳಿಕೆ ವೇಗವನ್ನು ಹೆಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next