Advertisement

ಗೌಡ್ರಿಗೆ ಕೃಷ್ಣೆ ನೀರು ಹರಿಸುವುದೇ ಸವಾಲ್‌: ಒಂಟಿ ಸಲಗದಂತೆ ಏಕಾಂಗಿ ಹೋರಾಡಬೇಕಿದೆ

03:52 PM May 21, 2023 | Team Udayavani |

ಕೊಪ್ಪಳ: ಬಹುಪಾಲು ಒಣ ಬೇಸಾಯ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯ ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಬಾಯ್ದೆರೆದ ಭೂಮಿಗೆ ಕೃಷ್ಣೆಯ ನೀರು ಹರಿಯಬೇಕಿದೆ. ಕ್ಷೇತ್ರದ ನೀರಾವರಿಗಾಗಿ ದಶಕಗಳ ಹೋರಾಟವೇ ನಡೆದಿವೆ. ಆದರೂ ಕೃಷ್ಣೆಯು ಕೃಪೆ ತೋರಿಲ್ಲ. ಮೂರನೇ ಬಾರಿಗೆ ಗೆಲುವು ಕಂಡಿರುವ ಕ್ಷೇತ್ರ ಶಾಸಕ ದೊಡ್ಡನಗೌಡ ಪಾಟೀಲರು ಕೃಷ್ಣೆಯ ನೀರು ಹರಿಸುವುದೇ ಸವಾಲ್‌ ಆಗಿದೆ.

Advertisement

ಕುಷ್ಟಗಿ ಕ್ಷೇತ್ರ ಮೊದಲೇ ಬರಪೀಡಿತ ಪ್ರದೇಶ. ಮಳೆಯ ಮೇಲೆಯೇ ಇಲ್ಲಿನ ರೈತಾಪಿ ಕುಟುಂಬಗಳು ಜೀವನ ನಡೆಸಬೇಕಾಗಿವೆ. ಮಳೆಯಾಗದಿದ್ದರೆ ದುಡಿಮೆ ಹರಸಿ ಗುಳೆ ಹೋಗುವುದು ಪ್ರತಿ ವರ್ಷವೂ ನಡೆಯುತ್ತದೆ. ಈ ಕ್ಷೇತ್ರದಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಗೊಳಿಸಿ ರೈತರ ಭೂಮಿಗೆ ನೀರು ಹರಿಸಿ ಎಂದು ಹಿಂದೆ ಬಹುದೊಡ್ಡ ಹೋರಾಟಗಳೇ ನಡೆದಿವೆ. ಹೋರಾಟಗಾರರಿಗೆ ವಯಸ್ಸಾಗಿದೆಯೇವಿನಃ ನೀರಾವರಿ ಯೋಜನೆಯು ಪೂರ್ಣ
ಕಾರ್ಯಗತವಾಗಿಲ್ಲ.

ಕೃಷ್ಣಾ ನ್ಯಾಯಾಧೀಕರಣದ-2 ತೀರ್ಪಿನ ಅನುಸಾರ ಕರ್ನಾಟಕದ ಪಾಲಿಗೆ ಹಂಚಿಕೆಯಾದ ನೀರಿನಲ್ಲಿ ಕೊಪ್ಪಳ ಏತ ನೀರಾವರಿಗೆ 12 ಟಿಎಂಸಿ ನೀರು ಹಂಚಿಕೆಯಾಗಿದೆ. ಇದು ಸೂಕ್ಷ್ಮ  ನೀರಾವರಿಯಾಗಿದೆ. ವಿಶೇಷವೆಂಬಂತೆ ಆಲಮಟ್ಟಿ ಡ್ಯಾಂನ ಮಟ್ಟವನ್ನು 519ಮೀ. ನಿಂದ 524 ಮೀ.ಗೆ ಎತ್ತರಿಸಿದಾಗ ಮಾತ್ರ ಈ ನೀರು ಕೊಪ್ಪಳ ಏತ ನೀರಾವರಿಗೆ ದೊರೆಯಲಿದೆ. ಈ ಡ್ಯಾಂ ಮಟ್ಟ ಎತ್ತರಿಸುವ ವಾಜ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಅಂತಿಮ ಅಧಿಸೂಚನೆ ಹೊರಡಿಸದಂತೆ ತಡೆಯಾಜ್ಞೆಯೂ ಇದೆ. ಈ ತಡೆಯಾಜ್ಞೆ ತೆರವು ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಯತ್ನ ಮಾಡಬೇಕಾಗಿದೆ. ಅಂದರೆ ಮಾತ್ರ ಕೊಪ್ಪಳ ಏತ ನೀರಾವರಿ ಸೇರಿ 9 ಯೋಜನೆಗಳಿಗೆ ನೀರು ಲಭ್ಯವಾಗಿದೆ. ಅಲ್ಲಿಯವರೆಗೂ ವ್ಯರ್ಥವಾಗಿ ಹರಿಯುವ ನೀರನ್ನು ಕೆರೆ ತುಂಬಿಸುವ ಯೋಜನೆಯ ಹೆಸರಲ್ಲಿ ಕರ್ನಾಟಕವು ಬಳಕೆ ಮಾಡಬೇಕಾಗಿದೆ.

ಹಿಂದೆ 2013ರಲ್ಲಿ ಜಗದೀಶ ಶೆಟ್ಟರ್‌ ಸಿಎಂ ಆಗಿದ್ದ ವೇಳೆ ಕೊಪ್ಪಳ ಏತ ನೀರಾವರಿಗೆ ಚಾಲನೆಯನ್ನ
ನೀಡಿದ್ದರು. ಆಗ ದೊಡ್ಡನಗೌಡರು ಶಾಸಕರಾಗಿದ್ದರು. ಈಗ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ
2013ರಲ್ಲಿಯೂ ದೊಡ್ಡನಗೌಡರು ಜಿಲ್ಲೆಯಲ್ಲಿ ಏಕೈಕ ಬಿಜೆಪಿ ಶಾಸಕರಾಗಿದ್ದರು. ಈಗಲೂ ಬಿಜೆಪಿಯ ಏಕೈಕ
ಶಾಸಕರಾಗಿದ್ದಾರೆ. ಹಾಗಾಗಿ ಇವರು ಏಕಾಂಗಿಯಾಗಿ ಒಂಟಿ ಸಲಗದಂತೆ ಕೃಷ್ಣೆಯ ನೀರು ಹರಿಸಲು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ. ಇದು ಅವರಿಗೆ ಬಹುದೊಡ್ಡ ಸವಾಲಿನ ವಿಷಯವಾಗಿದೆ. ಇದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಹಿಂದೆ ಕಾಂಗ್ರೆಸ್‌ ನಾಯಕರೂ ಕೃಷ್ಣೆಯ ಕಡೆಗೆ ನಮ್ಮ ನಡೆಗೆ ಎಂದು ಪಾದಯಾತ್ರೆ ಮಾಡಿ ಕೃಷ್ಣೆಯ ಜಪ ಮಾಡಿದ್ದರು. ಸರ್ಕಾರದ ಮಟ್ಟದಲ್ಲಿ ಗೌಡ್ರು ದೊಡ್ಡ ಹೋರಾಟ
ಮಾಡಬೇಕಾಗಿದೆ. ಸದನದಲ್ಲಿ ಧ್ವನಿ ಎತ್ತಬೇಕಿದೆ. ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಬೇಕಿದೆ. ಅಲ್ಲದೇ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಕೇಂದ್ರ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಾಗಿದೆ.

ಹಲವು ಕೆರೆಗೆ ನೀರು ತುಂಬಿಸುವ ಭರವಸೆ
ಹಿಂದೆ ಕಾಂಗ್ರೆಸ್‌ ಶಾಸಕರಾಗಿದ್ದ ಅಮರೆಗೌಡರು ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಅನುದಾನ
ತಂದಿದ್ದಲ್ಲದೇ, 7 ಕೆರೆಗಳಿಗೆ ನೀರು ತುಂಬಿಸಿದ್ದರು. ಆದರೆ ದೊಡ್ಡನಗೌಡರು ಈಚೆಗೆ ಚುನಾವಣೆಯಲ್ಲಿ 35
ಕೆರೆಗಳಿಗೆ ನೀರು ತುಂಬಿಸುವ ವಾಗ್ಧಾನ ಮಾಡಿದ್ದಾರೆ. ವಾಗ್ಧಾನದಂತೆ ಕೃಷ್ಣೆಯ ನೀರನ್ನೇ ಹರಿಸಿ ಜನರ ನೀರಿನ
ದಾಹ ನೀಗಿಸಬೇಕಾಗಿದೆ. ಬಯಲು ಸೀಮೆಯ ನಾಡಿನ ಕೆರೆಗಳಿಗೆ ನೀರು ಹರಿದಾಗ ಅಂತರ್ಜಲ ಮಟ್ಟ
ಹೆಚ್ಚಳವಾಗಿ ಸುತ್ತಲಿನ ರೈತರ ಬದುಕು ಹಸನಾಗಲಿದೆ. ಕ್ಷೇತ್ರದಲ್ಲಿ ರಸ್ತೆಗಳ ದುರಸ್ತಿಗೂ ದೊಡ್ಡನಗೌಡರು
ಒತ್ತು ಕೊಡಬೇಕಾಗಿದೆ. ಜಿಲ್ಲೆಯಲ್ಲಿ ಇವರೊಬ್ಬರೇ ಬಿಜೆಪಿ ಶಾಸಕರಾಗಿರುವುದರಿಂದ ಎಲ್ಲದಕ್ಕೂ ಏಕಾಂಗಿ
ಹೋರಾಟ ನಡೆಸಬೇಕಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರದಲ್ಲಿದ್ದು, ಕೇಂದ್ರ ನಾಯಕರೊಂದಿಗೂ
ಪ್ರಯತ್ನ ನಡೆಸುವ ಉತ್ಸಾಹವನ್ನು ತೋರಬೇಕಾಗಿದೆ.

Advertisement

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next