Advertisement

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

12:34 AM Sep 17, 2024 | Team Udayavani |

ಹೊಸದಿಲ್ಲಿ: ವಿದೇಶಾಂಗ ವ್ಯವಹಾರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಶಿಕ್ಷಣ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವು ಕಾಂಗ್ರೆಸ್‌ಗೆ ದೊರೆತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಒಟ್ಟು ಲೋಕ ಸಭೆಯಲ್ಲಿ 3 ಮತ್ತು ರಾಜ್ಯಸಭೆಯಲ್ಲಿ 1 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ನೀಡಲಾಗಿದೆ. ಈ ಸಂಬಂಧ ಸರಕಾರ‌ ಮತ್ತು ವಿಪಕ್ಷಗಳ ನಡುವೆ ನಡೆದ ಮಾತುಕತೆ ವೇಳೆ ನಿರ್ಧರಿಸಲಾಗಿದೆ. ವಿಶೇಷ ಎಂದರೆ, 5 ವರ್ಷಗಳ ಬಳಿಕ ಮಹತ್ವದ ವಿದೇಶಾಂಗ ವ್ಯವಹಾರ ಸಮಿತಿಗೆ ಕಾಂಗ್ರೆಸ್‌ ನೇತೃತ್ವ ದೊರೆತಿದೆ. ಲೋಕಸಭೆಯಲ್ಲಿ ಪಂಚಾಯತ್‌ ರಾಜ್‌ ಸಮಿತಿಗೂ ಕಾಂಗ್ರೆಸ್‌ನ ಸದಸ್ಯರು ಅಧ್ಯಕ್ಷರಾಗಲಿದ್ದಾರೆ. ಈ ಸಮಿತಿಗಳು ಬಜೆಟ್‌ ಹಂಚಿಕೆ ಮತ್ತು ಸಂಬಂಧಿಸಿದ ಮಸೂದೆಗಳನ್ನು ಪರೀಕ್ಷಿಸುವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.