Advertisement

ರೈತಪರ ಸಂಘಟನೆಗಳಿಂದ ವಿಜಯೋತ್ಸವ

10:40 AM Nov 20, 2021 | Team Udayavani |

ಆಳಂದ: ದೇಶದಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ರೈತಪರ ಸಂಘಟನೆಗಳಿಂದ ಪಟ್ಟಣದ ಬಸ್‌ ನಿಲ್ದಾಣದ ಎದುರು ಶುಕ್ರವಾರ ಸಂಭ್ರಮಿಸಿದರು.

Advertisement

ಕೃಷಿ ಸಬಲೀಕರಣ ಮತ್ತು ರಕ್ಷಣೆ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತು-ಸರಕುಗಳ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಕರ್ನಾಟಕ ಸೇರಿದಂತೆ ದೇಶದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಶರಣಾಗಿ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಪ್ರಮುಖವಾಗಿ ದೆಹಲಿ, ಪಂಜಾಬ, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ರೈತರು ಮಳೆ, ಬಿಸಿಲು, ಗಾಳಿ, ಕೋವಿಡ್‌ ಸೋಂಕು ಹರಡುವಿಕೆ ಲೆಕ್ಕಿಸದೇ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಮುಖಂಡರು ಹೇಳಿದರು.

ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ರವೀಂದ್ರ ಕೊರಳ್ಳಿ, ಬಾಬು ಗೊಬ್ಬರ ಭೂಸನೂರ, ಮಹಾಂತೇಶ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಸಿದ್ಧು ವೇದಶೆಟ್ಟಿ, ವೀರಭದ್ರಪ್ಪ ಕೋರೆ, ಪುರಸಭೆ ಸದಸ್ಯ ದೋಂಡಿಬಾ ಸಾಳುಂಕೆ, ಮುಖಂಡ ಸಂಜಯ ನಾಯಕ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕೃಷಿ ಕಾನೂನು ಹಿಂದಕ್ಕೆ ಪಡೆಯುವಂತೆ ಕಿಸಾನ ಮೋರ್ಚಾದಿಂದ ರೈತ ಮುಖಂಡ ಮೌಲಾ ಮುಲ್ಲಾ, ಪ್ರಾಂತ ರೈತ ಸಂಘದ ಮುಖಂಡ ಪ್ರಕಾಶ ಜಾನಿ, ಸುಧಾಮ ಧನ್ನಿ, ಪಾಂಡುರಂಗ ಮಾವೀನಕರ್‌, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಭೆ ಇನ್ನಿತರ ಸಂಘಟನೆಗಳು ಈ ಭಾಗದಲ್ಲಿ ಹೋರಾಟ ನಡೆಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next