ನರಿಮೊಗರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿಂದೀಗಲೇ ಕಾರ್ಯಪ್ರವೃತ್ತರಾಗಬೇಕು. ಕಾರ್ಯಕರ್ತರು ಬೂತ್ ಮಟ್ಟದ ಪ್ರತೀ ಮನೆಮನೆಗೂ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯ ನಡೆಸಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ರೀನಾ ಪ್ರಕಾಶ್ ಹೇಳಿದರು.
ಅವರು ಮುಂಡೂರಿನಲ್ಲಿ ನಡೆದ ಬಿಜೆಪಿ ಗ್ರಾಮ ಮಟ್ಟದ ವಿಸ್ತಾರಕರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಎಲ್ಲ ಕಡೆ ವಿಸ್ತಾರಕರನ್ನು ನೇಮಿಸಲಾಗಿದ್ದು, ಮನೆ ಬಿಟ್ಟು ಹಲವು ದಿನಗಳ ಕಾಲ ಅವರು ಪಕ್ಷಕ್ಕಾಗಿ ಎಲ್ಲೆಲ್ಲೋ ಹೋಗಿ ದುಡಿಯುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾವೂ ಶ್ರಮಿಸಬೇಕು. ಅಸಮಾಧಾನ ಇರುವ ಕಾರ್ಯಕರ್ತರನ್ನು ಕುಳಿತು ಮಾತನಾಡಿಸಿ ಅಸಮಾಧಾನ ಹೋಗಲಾಡಿಸಬೇಕು, ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಹೇಳಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಪಿಎಂಸಿ ಸದಸ್ಯೆ ತ್ರಿವೇಣಿ ಪೆರೊÌàಡಿ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಸುಧೀರ್ ಶೆಟ್ಟಿ ನೇಸರಕಂಪ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂಡೂರು ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಪೂಜಾರಿ, ಶೀನಪ್ಪ ನಾಯ್ಕ, ಪ್ರೇಮಲತಾ, ಸ್ವಾತಿ, ಮುಂಡೂರು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಶ್ರೀಕಾಂತ್ ಆಚಾರ್, ರಮೇಶ್ ಗೌಡ ಪಜಿಮಣ್ಣು, ಪ್ರವೀಣ್ ಹಿಂದಾರು, ವಾಸುದೇವ ಸಾಲ್ಯಾನ್ ಉಪಸ್ಥಿತರಿದ್ದರು.
ಮುಂಡೂರು ಬಿಜೆಪಿ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಅಂಬಟ ಸ್ವಾಗತಿಸಿ ವಂದಿಸಿದರು.