Advertisement

Special Session; ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆದ ಕೇಂದ್ರ; ಕಾರಣ ಇನ್ನೂ ನಿಗೂಢ

06:25 PM Aug 31, 2023 | Team Udayavani |

ಹೊಸದಿಲ್ಲಿ: ಕೇಂದ್ರ ಸರ್ಕಾರವು ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಮಾಹಿತಿ ನೀಡಿದ್ದಾರೆ. ಐದು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಅಮೃತ್ ಕಾಲದ ಮಧ್ಯೆ, ಸಂಸತ್ತಿನಲ್ಲಿ ಫಲಪ್ರದ ಚರ್ಚೆಯನ್ನು ನಡೆಸಲು ಎದುರು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು.

Advertisement

ಯಾವ ಉದ್ದೇಶಕ್ಕೆ ಈ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಇದುವರೆಗೂ ಸರ್ಕಾರ ಮಾಹಿತಿ ನೀಡಿಲ್ಲ.

ಹಳೆಯ ಕಟ್ಟಡದಿಂದ ಹೊಸ ಸಂಸತ್ ಭವನಕ್ಕೆ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲು ವಿಶೇಷ ಅಧಿವೇಶನ ಕರೆಯಲಾಗುತ್ತಿದೆ ಎಂಬ ಊಹಾಪೋಹವಿದೆ. ಆದ್ದರಿಂದ, ಈ ಅಧಿವೇಶನವು ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಿ ಹೊಸ ಕಟ್ಟಡದಲ್ಲಿ ಕೊನೆಗೊಳ್ಳಬಹುದು.

ಇದನ್ನೂ ಓದಿ:CPL 2023: ವೈಯಕ್ತಿಕ ಕಾರಣ ನೀಡಿ ಸಿಪಿಎಲ್ ನಿಂದಲೂ ಹೊರಬಂದ ಅಂಬಾಟಿ ರಾಯುಡು

ಪ್ರತಿಪಕ್ಷಗಳ ಟೀಕೆ: ವಿಶೇಷ ಅಧಿವೇಶನದ ಕರೆಯನ್ನು ಹಲವಾರು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಸೆ.19ರಂದು ಗಣೇಶ ಚತುರ್ಥಿ ಇರುವ ಕಾರಣ ಮಹಾರಾಷ್ಟ್ರದಿಂದ ಬರುವ ಸಂಸದರಿಗೆ ಇಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ ಎಂದಿದ್ದಾರೆ.

Advertisement

“ಭಾರತದ ಅತ್ಯಂತ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯ ಸಮಯದಲ್ಲೇ ಈ ವಿಶೇಷ ಅಧಿವೇಶನ ಕರೆದಿರುವುದು ವಿಪರ್ಯಾಸ. ಇವರು ಹಿಂದೂಗಳ ಭಾವನೆಗೆ ವಿರುದ್ದವಾಗಿದ್ದಾರೆ. ಅಧಿವೇಶನದ ದಿನಾಂಕದ ಆಯ್ಕೆ ಅಚ್ಚರಿ ತಂದಿದೆ” ಎಂದು ಠಾಕ್ರೆ ಬಣದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

“ನಾವೆಲ್ಲರೂ ಅರ್ಥಪೂರ್ಣ ಚರ್ಚೆಗಳು ಮತ್ತು ಸಂವಾದದ ಕಡೆಗೆ ಎದುರು ನೋಡುತ್ತಿರುವಾಗ, ದಿನಾಂಕಗಳು ಮಹಾರಾಷ್ಟ್ರದ ಪ್ರಮುಖ ಹಬ್ಬವಾದ ಗಣಪತಿ ಉತ್ಸವದೊಂದಿಗೆ ಹೊಂದಿಕೆಯಾಗುತ್ತವೆ. ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರನ್ನು ಒತ್ತಾಯಿಸುತ್ತಿದ್ದೇವೆ” ಎಂದು ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ಎಕ್ಸ್ ನಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next