Advertisement

ಸ್ಮಶಾನ ಜಾಗ ಅಧಿಕೃತ ಖಾತೆಗೆ ಒತ್ತಾಯ

04:25 PM May 25, 2018 | Team Udayavani |

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆ ಕನಕವೃತ್ತದ ಸಮೀಪವಿರುವ ಮೂರು ಎಕರೆ ಇಪ್ಪತ್ತು ಗುಂಟೆ ಸ್ಮಶಾನದ ಜಾಗವನ್ನು ಅಧಿಕೃತವಾಗಿ ಖಾತೆ ಮಾಡಿಕೊಡುವಂತೆ ಚಿರಶಾಂತಿ ಧಾಮದ ಟ್ರಸ್ಟ್‌ ಮತ್ತು ಬುರುಜನಹಟ್ಟಿಯ ನಿವಾಸಿಗಳು ಗುರುವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಬುರುಜನಹಟ್ಟಿ, ನೆಹರು ನಗರ, ಚೇಳುಗುಡ್ಡ, ಜೆ.ಸಿ.ಆರ್‌. ಬಡಾವಣೆ, ಕುಂಬಾರಬೀದಿ, ಸಾವಂತರಹಟ್ಟಿ, ಸೊಪ್ಪಿನವರಹಟ್ಟಿ, ಕೋಣನಹಟ್ಟಿ, ಕೆಂಚನಕಟ್ಟೆ, ಮಾಳಪ್ಪನಹಟ್ಟಿ ಹಾಗೂ ಸಿಹಿನೀರು ಹೊಂಡದ ವಾಸಿಗಳು ಪೂರ್ವಜರು ಮರಣ ಹೊಂದಿದಾಗ ಅನಾದಿ ಕಾಲದಿಂದಲೂ ಇಲ್ಲಿ ಶವಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಶವಸಂಸ್ಕಾರದ ನಂತರ ಸಮಾಕಟ್ಟಿ ಹಬ್ಬ ಹರಿದಿನಗಳಲ್ಲಿ ಈಗಲೂ ಹಿರಿಯರ ಪೂಜೆ ಮಾಡಲಾಗುತ್ತದೆ. ಸ್ಮಶಾನದ ಜಾಗವನ್ನು ಅಧಿಕೃತವಾಗಿ ಖಾತೆಗೆ ದಾಖಲಿಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಚಿರಶಾಂತಿಧಾಮ ಅಭಿವೃದ್ದಿ ಟ್ರಸ್ಟ್‌ ರಚಿಸಿ ಸ್ವತ್ಛತೆ ಮತ್ತು ನೀರಿನ ವ್ಯವಸ್ಥೆ ಮಾಡಿ ಶವಸಂಸ್ಕಾರಕ್ಕೆ ಬರುವವರಿಗೆ ಅನುಕೂಲ ಮಾಡಲಾಗಿದೆ. ನಗರಸಭೆ ಮತ್ತು ತಾಲೂಕು ಕಚೇರಿಯಲ್ಲಿ ಸ್ಮಶಾನದ ಜಾಗದ ಬಗ್ಗೆ ಪರಿಶೀಲಿಸಿದಾಗ ಯಾವುದೇ ಅಧಿಕೃತ ದಾಖಲೆಗಳು ಇಲ್ಲವೆಂಬುದು ತಿಳಿದು ಬಂದಿದೆ. ಹಾಗಾಗಿ ಸ್ಮಶಾನದ ಜಾಗ ಅಳತೆ ಮಾಡಲು ತಹಶೀಲ್ದಾರ್‌ಗೆ ಟ್ರಸ್ಟಿನಿಂದ ಮನವಿ ನೀಡಿದಾಗ ಸರ್ವೇಯರ್‌ ಅಳೆತೆ ಮಾಡಿದಾಗ ಮೂರು ಎಕರೆ ಇಪ್ಪತ್ತು ಗುಂಟೆ ಸ್ಮಶಾನದ ಜಾಗ ಎಂದು ಸ್ಕೆಚ್‌ ನೀಡಿರುತ್ತಾರೆ. ಆದ್ದರಿಂದ ಖಾತೆ ಮಾಡಲು ನಗರಸಭೆಗೂ ಅರ್ಜಿ ನೀಡಲಾಗಿದೆ. ಇದನ್ನು ಪರಿಗಣಿಸಿ ಸ್ಮಶಾನದ ಜಾಗವು ನಗರಸಭೆಗೆ ಸೇರಿದ್ದೆಂದು ದೃಢೀಕರಣ ಪತ್ರ ನೀಡಿರುತ್ತಾರೆ. ಆದ್ದರಿಂದ ಈ ಜಾಗವನ್ನು ಅಧೀಕೃತವಾಗಿ ಖಾತೆ ಮಾಡಿಕೊಡಲು ನಗರಸಭೆಗೆ ಸೂಚನೆ ನೀಡುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಮಂಜಪ್ಪ, ಎಂ.ವಿ.ಮಾಲತೇಶ್‌, ಎನ್‌. ಲಕ್ಷ್ಮೀಶ್‌, ಎಸ್‌.ಪ್ರಕಾಶ್‌, ನಗರಸಭೆ ಮಾಜಿ ಸದಸ್ಯ ಎಲ್‌. ತಿಪ್ಪೇಸ್ವಾಮಿ, ಕೆ.ಆರ್‌. ಕೃಷ್ಣಮೂರ್ತಿ, ಎಸ್‌.ಪುಟ್ಟಸ್ವಾಮಿ, ಆಯ್ತಾರಪ್ಪ, ಎಸ್‌.ಬಿ. ರವಿಕುಮಾರ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next