Advertisement
ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಪ್ರಸಕ್ತ ವಿದ್ಯಮಾನಗಳನ್ನು ಸೂಕ್ಷ್ಮ ವಾಗಿ ಗಮನಿಸುತ್ತ ಹೋದರೆ ರಾಜಕಾರಣ ಯಾರ ಹಿಡಿತಕ್ಕೂ ಸಿಗದಂತೆ ಹೋಗುತ್ತಿದೆ ಎಂಬ ಭಾವನೆ ಮೂಡುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ನೇರವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿ, ಸರಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆ ನಡೆದುಕೊಂಡಿ ದ್ದರೂ, ಪಕ್ಷದ ಹೈಕಮಾಂಡ್ ಪಂಚ ರಾಜ್ಯಗಳ ಚುನಾ ವಣೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪ ಚುನಾವಣೆ ಮುಗಿಯುವ ವರೆಗೂ ಯಾವುದೇ ಚರ್ಚೆ ಮಾಡದಿರಲು ನಿರ್ಧರಿಸಿರು ವುದು ಜಾತಿ ರಾಜಕಾರಣದ ಲೆಕ್ಕಾಚಾರ ಇದ್ದಂತಿದೆ. ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆನ್ನಿಗಿರುವ ಕುರುಬ ಸಮುದಾಯವನ್ನು ಬಿಜೆಪಿ ಕಡೆಗೆ ಮುಖಮಾಡುವಂತೆ ಮಾಡಲು ಈಶ್ವರಪ್ಪ ಅವರನ್ನು ಮುಂದಿಟ್ಟುಕೊಂಡು ಬಿಜೆಪಿಯೇ ಎಸ್ಟಿ ಹೋರಾಟಕ್ಕೆ ತೆರೆ ಮರೆಯಲ್ಲಿ ನೀರೆರೆದು ಪೋಷಿ ಸುತ್ತಿದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ನೇರವಾಗಿಯೇ ಮಾಡಿದ್ದಾರೆ. ಅದನ್ನು ಬಿಜೆಪಿ ನಾಯ ಕರು ಬಹಿರಂಗವಾಗಿ ಅಲ್ಲಗಳೆಯುವ ಯತ್ನವನ್ನೇನು ಮಾಡಿಲ್ಲ.
Related Articles
Advertisement
ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಪ್ರಕರಣದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಭವಿಷ್ಯದಲ್ಲಿ ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ ಎನ್ನುವ ಸೂಕ್ಷ್ಮ ಅರಿವಿಲ್ಲದೇನಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ, ಕುಟುಂಬ ರಾಜಕಾರಣ, ಆಪರೇಷನ್ ಕಮಲಕ್ಕೆ ಹಣದ ಆಮಿಷ ಒಡ್ಡಿರುವ ಪ್ರಕರಣದಲ್ಲಿ ಕೋರ್ಟ್ ತನಿಖೆಗೆ ಆದೇಶ ನೀಡಿ ರುವುದು. ಎಲ್ಲವೂ ಬಹಿರಂಗವಾಗಿದ್ದರೂ ಹೈಕ ಮಾಂಡ್ ಯಾವುದನ್ನೂ ನಿಯಂತ್ರಿಸಲಾಗದ ಪರಿಸ್ಥಿತಿಗೆ ಸಿಲುಕಿರುವುದರ ಹಿಂದೆಯೂ ಜಾತಿಯ ಭಯವಿದ್ದಂತೆ ಕಾಣಿಸುತ್ತದೆ.
ಇದೇ ರೀತಿ, ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿರಂತರ ವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನೇರವಾಗಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ಬಗ್ಗೆ ನಿರಂತರ ಆರೋಪ ಮಾಡು ತ್ತಲೇ ಇದ್ದಾರೆ. ಇಷ್ಟಾದರೂ ಬಿಜೆಪಿ ಹೈಕ ಮಾಂಡ್ ಮಾತ್ರ ಜಾಣ ಮೌನ ವಹಿಸಿರುವುದಕ್ಕೂ ಪಂಚಮಸಾಲಿ ಸಮಾಜದ ಮಹಾ ಸಮಾವೇಶ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಸಮಾವೇಶವನ್ನು ಅರ್ಧಕ್ಕೆ ಮೊಟಕುಗೊಳಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಗಣಿ ಸಚಿವ ನಿರಾಣಿ ಅವರಿಗೆ ವಹಿಸಿದ್ದರೂ, ಸ್ವಾಮೀಜಿಗಳು ಮಾತ್ರ ನಿರಾಣಿ ಅವರ ಮಾತಿಗೆ ಬೆಲೆಕೊಡದೇ ಬಸನಗೌಡ ಪಾಟೀಲ್ ಯತ್ನಾಳ ಮಾತಿಗೆ ಬೆಲೆಕೊಟ್ಟು ಪಾದಯಾತ್ರೆ ಕೊನೆ ಗೊಳಿಸಿ ಬೃಹತ್ ಸಮಾವೇಶ ನಡೆಸಿ, ಸರಕಾರದ ವಿರುದ್ಧ ಧರಣಿಯನ್ನೂ ಮಾಡಿದ್ದು, ಬಿಜೆಪಿ ಹೈಕ ಮಾಂಡ್ ಯತ್ನಾಳ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಯ ನ್ನಿಡುವಂತೆ ಮಾಡಿತು. ಒಂದು ವೇಳೆ ಮುರುಗೇಶ್ ನಿರಾಣಿ ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ಸಮಾ ವೇಶ ನಡೆಯದಂತೆ ನೋಡಿಕೊಂಡಿದ್ದರೆ, ಬಿಜೆಪಿ ಶಾಸಕರ
ಪಟ್ಟಿಯಿಂದ ಯತ್ನಾಳ್ ಹೆಸರು ಆಗಲೇ ತೆಗೆದು ಹಾಕುವುದರಲ್ಲಿ ಅನುಮಾನವೇ ಇರಲಿಲ್ಲ.ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ನಡುವೆ ನಡೆದಿರುವ ಆಂತರಿಕ ಸಂಘರ್ಷ ಕೇವಲ ಪಂಚಮಸಾಲಿ ಸಮುದಾಯದ ನಾಯಕತ್ವ ವಹಿಸಿಕೊಳ್ಳುವುದಕ್ಕಷ್ಟೇ ಸೀಮಿತವಾದಂ ತಿಲ್ಲ. ಬಿಜೆಪಿಯಲ್ಲಿ ಉಂಟಾದ ನಾಯಕತ್ವದ ಪ್ರಶ್ನೆಗೆ ತಾವು ಪರ್ಯಾಯ ಎನ್ನುವುದನ್ನು ಬಿಂಬಿಸುವ ಯತ್ನವೂ ನಡೆದಿದೆ. ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ನಾಯಕತ್ವದ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕಾರಣ ಮಾಡಿಕೊಂಡು ಬಂದಿದ್ದು, ಅದೇ ಅಸ್ತ್ರ ಬಳಸಿಕೊಂಡೇ ಪಕ್ಷದ ಹೈಕಮಾಂಡನ್ನು ನಿಯಂತ್ರಿಸಿಕೊಂಡು ಬಿಜೆಪಿಯ 75 ವರ್ಷ ಮೀರಿದವರ ಸಕ್ರೀಯ ರಾಜಕಾರಣದ ನಿಯಮ ಮೀರಿದರೂ ಅಧಿಕಾರದಲ್ಲಿ ಮುಂದುವ ರೆದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ಮರುಗೇಶ್ ನಿರಾಣಿ ಹಾಗೂ ಈಶ್ವರಪ್ಪ ಅವರ ನಡೆಯ ಹಿಂದೆ ಪರ್ಯಾಯದ ಕನಸಿರುವುದನ್ನು ಅಲ್ಲಗಳೆಯು ವಂತಿಲ್ಲ. ಅದಕ್ಕಾಗಿ ಸಮುದಾಯದ ಅಸ್ತ್ರವನ್ನು ಮುಂದಿಟ್ಟುಕೊಂಡಿರುವುದನ್ನೂ ತಳ್ಳಿ ಹಾಕುವಂತಿಲ್ಲ. ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲರೂ ಅಧಿಕಾರದ ಗದ್ದುಗೆ ಏರಲು ಹಾಗೂ ಆರೋಪದಿಂದ ಪಾರಾಗಲು ಜಾತಿ ಬಲವನ್ನೇ ನೆಚ್ಚಿಕೊಳ್ಳುತ್ತಿರುವುದು ರಾಜಕೀಯ ಪಕ್ಷಗಳೂ ಅದೇ ಕಾರಣಕ್ಕೆ ಪಕ್ಷಕ್ಕೆ ಮುಜುಗರ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳದೇ ಇರುವುದು ಪ್ರಜಾಪ್ರಭುತ್ವಕ್ಕೆ ಮಾಡು ತ್ತಿರುವ ಅವಮಾನದಂತಾಗುತ್ತದೆ. – ಶಂಕರ ಪಾಗೋಜಿ