Advertisement

ಮಕ್ಕಳ ಭಾವನೆ ಅರ್ಥಮಾಡಿಕೊಳ್ಳಲು ಶಿಬಿರ ಅತ್ಯಗತ್ಯ: ಸುರೇಂದ್ರ ಅಡಿಗ

09:55 PM Apr 12, 2019 | Team Udayavani |

ಬ್ರಹ್ಮಾವರ: ಮಕ್ಕಳ ಮನಸ್ಸು ಮುಗªವಾಗಿದ್ದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಶಿಬಿರಗಳು ಅತ್ಯಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.ಅವರು ಪೇತ್ರಿಯಲ್ಲಿ ನಡೆದ ಬೇಸಗೆ ವಿಶೇಷ ಶಿಬಿರ ಪ್ರತಿಭಾ ವಿಕಸನವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಇಂದಿನ ಮಕ್ಕಳು ಬರೆಯುವುದು ಮತ್ತು ಓದುವುದನ್ನು ಹೆಚ್ಚು ರೂಢಿಸಿಕೊಳ್ಳಬೇಕು ಎಂದರು. ಕಾರ್ಯ ಕ್ರಮದಲ್ಲಿ ಸ್ವತಃ ಅಡಿಗರು ಮಕ್ಕಳಿಗೆ ಕವನ ರಚನೆಯನ್ನು ಮಾಡುವುದು ಹೇಗೆ ಎನ್ನುವುದರ ಕುರಿತು ಮಾಹಿತಿ ನೀಡಿ ಪುಸ್ತಕ ಉಚಿತವಾಗಿ ನೀಡಿದರು.

ಪ್ರಸನ್ನ ಪ್ರಸಾದ್‌ ಭಟ್‌, ವೀಣಾ ಕೆ. ಪಾಟೀಲ್‌, ವೀಣಾ ಶ್ಯಾನುಭೋಗ, ರಾಜೇಶ್ವರಿ ಶ್ಯಾನುಭೋಗ, ಮಲ್ಲಿಕಾ, ಲತಾ, ಆಶಾ ಪಾಟೀಲ್‌ ಉಪಸ್ಥಿತರಿ ದ್ದರು. ವಿದ್ಯಾ ಸಂಸ್ಥೆಯ ಕನ್ನಾರು ಕಮಲಾಕ್ಷ ಹೆಬ್ಟಾರ್‌ ಪ್ರಸ್ತಾವನೆಗೈದು, ಸಹನಾ ಹೆಬ್ಟಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next