ಬೆಂಗಳೂರು: ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಮಾಸಿಕ ಪಾಸಿನ ಚಾಲ್ತಿ ಅವಧಿ ಮುಗಿದ ನಂತರವೂ 4 ದಿನ ಆ ಪಾಸನ್ನು ಹೆಚ್ಚುವರಿಯಾಗಿ ಮಾನ್ಯ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತಿಳಿಸಿದೆ.
ಡಿ.11ರಿಂದ 14ರ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಂತವಾರು ವಿತರಣೆಯಾದ ಮಾಸಿಕ ಪಾಸುಗಳನ್ನು ಅದರ ಚಾಲ್ತಿ ಅವಧಿ ಮುಗಿದ ನಂತರವೂ ನಾಲ್ಕು ದಿನ ಆ ಪಾಸನ್ನು ಪರಿಗಣಿಸಲಾ ಗುವುದು. ಆದರೆ, ಪಾಸುದಾರರು ಆಯಾ ಕೌಂಟರ್ ಗಳಲ್ಲಿ4 ದಿನಗಳಿಗೆ ವಿಸ್ತರಣೆಯಾಗುವ ದಿನಾಂಕ, ಸಹಿ ಮತ್ತು ಮೊಹರು ಹಾಕಿಸಿಕೊಳ್ಳಬೇಕು. ಚಾಲನಾ ಸಿಬ್ಬಂದಿಗೂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಒದಗಿಸಿ, ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕ್ರಮ ವಹಿಸಬೇಕು ಎಂದು ನಿಗಮ ಪ್ರಕಟಣೆಯಲ್ಲಿ ಸೂಚಿಸಿದೆ.
ವಿದ್ಯಾರ್ಥಿ ಸ್ಮಾರ್ಟ್‌ಕಾರ್ಡ್ ಪಾಸಿಗೆ ಅರ್ಜಿಆಹ್ವಾನ :
ಬೆಂಗಳೂರು: ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), 2020-21ನೇ ಸಾಲಿನ ಸ್ಮಾರ್ಟ್‌ಕಾರ್ಡ್ ಮಾದರಿಯ ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸು ವಿತರಣೆಗೆ ಸಂಬಂಧಿಸಿದಂತೆಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಮೊದಲ ಹಂತದಲ್ಲಿ ಪದವಿ,ವೃತ್ತಿಪರ, ತಾಂತ್ರಿಕ, ವೈದ್ಯಕೀಯ, ಸಂಜೆಕಾಲೇಜು, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗುವುದು. ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ಹಾಗೂ ಬಿಎಂಟಿಸಿ ವೆಬ್‌ಸೈಟ್ (www.mybmtc.com ) ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು. ಡಿ. 21ರಿಂದ “ಬೆಂಗಳೂರು ಒನ್ ಕೇಂದ್ರ’ಗಳಲ್ಲಿ ಪಾಸ್ ವಿತರಿಸಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6.30ರವರೆಗೂ ಬೆಂಗಳೂರು ಒನ್‌ಕೇಂದ್ರಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿ ಪಾಸ್ ವಿತರಿಸಲಾಗುವುದು.
ವಿದ್ಯಾರ್ಥಿಗಳ ಆನ್‌ಲೈನ್ ಅರ್ಜಿ ಅನುಮೋದಿಸಲು ಶಿಕ್ಷಣ ಸಂಸ್ಥಬಿಎಂಟಿಸಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. 2ನೇ ಹಂತದಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗುವುದು. ಈ ಸಂಬಂಧ ಪ್ರತ್ಯೇಕ ಪ್ರಕಟಣೆ ಹೊರಡಿಸುವುದಾಗಿ ಬಿಎಂಟಿಸಿ ತಿಳಿಸಿದೆ.