ಕೋಟ: ಬಸ್ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುವ ಯುವಕನೋರ್ವ ತನ್ನ ಬಸ್ಸಿನಲ್ಲಿ ಪ್ರಯಾಣಿಸುವ ಯುವತಿಯರಿಗೆ ಕಿರುಕುಳ ನೀಡುತ್ತಿ ದ್ದಾನೆ ಎನ್ನುವ ಸಂದೇಶವನ್ನು ಕಿಡಿಗೇಡಿಗಳು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದು, ಇದರಿಂದಾಗಿ ಕಂಡಕ್ಟರ್‌ಗೆ ಹಲವು ಬೆದರಿಕೆ ಕರೆಗಳು ಬಂದಿದ್ದು, ಆತ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ಘಟನೆ ಕೋಟದಲ್ಲಿ ರವಿವಾರ ಸಂಭವಿಸಿದೆ.
ಕೋಟದ ನಿವಾಸಿ ಸಚಿನ್ ದೇವಾಡಿಗ ಅವರು ಯುವಕ ಖಾಸಗಿ ಬಸ್‌ವೊಂದರಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತ ಬಸ್ಸಿನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಾರೆ ಹಾಗೂ ತನ್ನ ಸ್ನೇಹಿತರೊಡನೆ ಸೇರಿ ಅಪಹಾಸ್ಯ ಮಾಡುತ್ತಾರೆ ಎನ್ನುವ ರೀತಿಯಲ್ಲಿ ತೀರ ಕೆಳಮಟ್ಟದ ಭಾಷೆಯಲ್ಲಿ ಆರೋಪ ಮಾಡಿ ಫೇಸ್‌ಬುಕ್ ಹಾಗೂ ವಾಟ್ಸ್ ಅÂಪ್‌ನ ನೂರಾರು ಗ್ರೂಪ್‌ಗ್ಳಿಗೆ ಅವರ ಫೋಟೋ ಹಾಗೂ ಬಸ್‌ನ ಫೋಟೋ ಸಮೇತ ಪೋಸ್ಟ್ ಮಾಡಲಾಗಿದೆ.
ವಿದೇಶಗಳಿಂದ ಬೆದರಿಕೆ ಕರೆ: ಪೇಸ್‌ಬುಕ್‌ನ ಅನ್ಯಕೋಮಿಗೆ ಸೇರಿದ ಗ್ರೂಫ್‌ವೊಂದರಲ್ಲಿ, ಆತ ನಮ್ಮ ಸಮುದಾಯದ ಹುಡುಗಿಯರಿಗೆ ಕಿರುಕುಳ ನೀಡುತ್ತಾನೆ. ಆದ್ದರಿಂದ ಆತನಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ಸಚಿನ್ ಅವರ ಮೊಬೈಲ್ ಸಂಖ್ಯೆಯೊಂದಿಗೆ ಪೋಸ್ಟ್ ಮಾಡಲಾಗಿತ್ತು.ಅದರಿಂದ ದುಬೈ ಸಹಿತ ಹಲವು ಕಡೆಗಳಿಂದ ಬೆದರಿಕೆ ಕರೆಗಳು ಬಂದಿದ್ದು ಯುವಕ ಹಾಗೂ ಆತನ ಕುಟುಂಬದವರು ಕಳವಳಕ್ಕೀಡಾಗಿದದ್ದಾರೆ
ವೈಯಕ್ತಿಕ ಧೆÌàಷದಿಂದ ಕೃತ್ಯ : ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಹಾಗೂ ಯಾರಿಗೂ ಕಿರುಕುಳ ನೀಡಿಲ್ಲ. ನನ್ನ ಮೇಲಿನ ಧೆÌàಷ ಹಾಗೂ ಮಾನ ಹಾನಿ ಮಾಡುವ ಉದ್ದೇಶದಿಂದ ಯಾರೋ ವಕ್ತಿಗಳು ಈ ರೀತಿ ಮಾಡಿದ್ದಾರೆ ಎಂದು ಸಚಿನ್ ಅವರು ಪೊಲೀಸರಲ್ಲಿ ತಿಳಿಸಿದ್ದಾರೆ.
ರಕ್ಷಣೆಗಾಗಿ ಪೊಲೀಸರ ಮೊರೆ: ವಿದೇಶದಿಂದ ಮೇಲಿಂದ ಮೇಲೆ ಬೆದರಿಕೆ ಕರೆಗಳು ಬರುತ್ತಿರುವು ದರಿಂದ ಹೆದರಿದ ಯುವಕ ಕೋಟ ಠಾಣೆಗೆ ಬಂದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದು ಹಾಗೂ ಈ ರೀತಿ ಸಂದೇಶ ರವಾನೆ ಮಾಡಿದವರನ್ನು ಪತ್ತೆ ಹಚ್ಚುವಂತೆ ವಿನಂತಿಸಿದ್ದಾರೆ ಈ ಕುರಿತು ತನಿಖೆ ನಡೆಸಿ ಆರೋಪಿಗಳನ್ನು ಹಚ್ಚುವುದಾಗಿ ಕೋಟ ಪೊಲೀಸರು ಭರವಸೆ ನೀಡಿದ್ದಾರೆ.