Advertisement

ಮೌನ -ಧ್ಯಾನದಿಂದ ಜಗತ್ತನ್ನೇ ಗೆದ್ದ ಬುದ್ಧ

03:57 PM May 15, 2017 | |

ಶಹಾಬಾದ: ಮೌನ ಹಾಗೂ ಧ್ಯಾನದ ಗುಣದಿಂದ ಜಗತ್ತನ್ನು ಗೆದ್ದ ದಾರ್ಶನಿಕ ಗೌತಮ ಬುದ್ಧ ಎಂದು ಮಾಜಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಹೇಳಿದರು. ನಗರದ ಮಡ್ಡಿಯ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಬುದ್ಧ ಪೂರ್ಣಿಮೆ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬುದ್ಧನ ಮೂರ್ತಿ ಪ್ರತಿಷ್ಠಾಪಿಸಿ ಅವರು ಮಾತನಾಡಿದರು. 

Advertisement

ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ, ಪ್ರೀತಿ, ಕರುಣೆ, ಶಾಂತಿ  ಮೂಲಕ ಬದುಕಿನ ಅರ್ಥ ಹಾಗೂ ಜ್ಞಾನದ ಹಾದಿ ತೋರಿಸಿಕೊಟ್ಟ ಮಹಾಪುರುಷ.  ಬುದ್ಧನ ಚಿಂತನೆಗಳಲ್ಲಿರುವ ತಾಯಿ ಗುಣ ಬದುಕಿಗೆ ಆತ್ಮೀಯತೆ ತಂದು ಕೊಡುವ ಶಕ್ತಿ ಹೊಂದಿದೆ. ಬುದ್ಧ ಸುತ್ತಲಿನ ಜನರು, ಶಿಷ್ಯರನ್ನು ನೋಡುತ್ತಲೇ ತನ್ನ ಚಿಂತನೆ ರೂಪಿಸಿಕೊಂಡ.

ನಗು ಮತ್ತು ಮೌನದಿಂದ ಎಲ್ಲ ವಿರೋಧಗಳನ್ನು ಗೆದ್ದ ಎಂದರು. ಬುದ್ಧನ ಚಿಂತನೆಗಳಲ್ಲಿ ಪರಸ್ಪರ ಪ್ರೀತಿಸುವ, ಗೌರವಿಸುವ ಗುಣ ಇದೆ.ಈ ಚಿಂತನೆಗಳ  ಬೆಳಕಲ್ಲಿ ವೈಚಾರಿಕ ಶಕ್ತಿ ಬೆಳೆಸಿಕೊಂಡು ಮೂಢನಂಬಿಕೆಗಳನ್ನು ತೊರೆಯಬೇಕು. ನಮ್ಮ ಆಲೋಚನೆ ಪರಾಮರ್ಶಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಪ್ರವೀಣ ರಾಜನ್‌ ಮಾತನಾಡಿ, ಬುದ್ಧನ ಸಂದೇಶಗಳು ನಮ್ಮ ನಡೆ, ನುಡಿ ವ್ಯಕ್ತಿತ್ವದಲ್ಲಿವೆ.  ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ನಮ್ಮ ಶಕ್ತಿ, ಸಾಮರ್ಥ್ಯ, ಗುಣಗಳನ್ನು  ಕಂಡುಕೊಳ್ಳುವ ಅಗತ್ಯ ಬಹಳ ಇದೆ ಎಂದರು. ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಅಶೋಕ ತುತಾರೆ ಬುದ್ಧ ವಂದನೆ ಮಾಡಿದರು. ಭೀಮಸೇನೆ ಅಧ್ಯಕ್ಷ ಸತೀಶ ಕಂಬಾನೂರ, ನರಸಿಂಹಲು ರಾಯಚೂರಕರ್‌, ಕಾಶಿನಾಥ ಜೋಗಿ, ಶಿವಯೋಗಿ ಕಟ್ಟಿ, ಸಂಘರ್ಷ ಕಟ್ಟಿ, ಶಾಮ ನಂದುರಕರ್‌, ಗೌತಮ ಬಿದನಕರ್‌,ಅನಿಲ ಮೈನಾಳಕರ್‌, ವಿದ್ಯಾಸಾಗರ ಗಾಯಕ್‌ವಾಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next