ಮುಂಬಯಿ: ನಲಸೊಪರ ಶ್ರೀ ಧರ್ಮಮಾರಿಯಮ್ಮ ಹಾಗೂ ಪರಿವಾರ ದೇವತೆಗಳ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಫೆ. 13ರಂದು ಪ್ರಾರಂಭಗೊಂಡು ಫೆ. 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
ಗಳೊಂದಿಗೆ ಜರಗಲಿದೆ.
ಫೆ. 13ರಂದು ಸಂಜೆ 6ರಿಂದ ಗೇಹ ಪ್ರತಿಗ್ರಹ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪ್ರಸಾದಶುದ್ಧಿ, ರಾಕ್ಷೊàಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ ನಡೆಯಲಿದೆ. ಫೆ. 14ರಂದು ಬೆಳಗ್ಗೆ 8ರಿಂದ ಬಿಂಬಶುದ್ಧಿ, ಶಾಂತಿ, ಪ್ರಾಯಶ್ಚಿತ್ತ ಹೋಮಗಳು, ಶಯ್ನಾ ಪೂಜೆ, ಸಂಜೆ 5ರಿಂದ ರತ್ನ ಪೀಠ, ನಪುಂಸಕ ಶಿಲಾ, ಅಷ್ಟಬಂದ ಶಕ್ತಿಹೋಮಗಳು, ಶಿರತತ್ವ ಹೋಮ, ಶಯ್ಯಧಿವಾಸ, ಕಲಶಾಧಿವಾಸ, ಅಧಿವಾಸ ಹೋಮ ಇನ್ನಿತರ ಪೂಜಾಧಿ ಕಾರ್ಯಕ್ರಮಗಳು ನಡೆಯಲಿವೆ.
ಫೆ. 15ರಂದು ಬೆಳಗ್ಗೆ 7.50ರಿಂದ ಕುಂಭ ಲಗ್ನ ಸುಮೂರ್ತದಲ್ಲಿ ಶ್ರೀ ಧರ್ಮಮಾರಿಯಮ್ಮ, ಸದಾಶಿವ ರುದ್ರ ದೇವರು, ಮಹಗಣಪತಿ, ಶನೀಶ್ವರ ದೇವರು, ಮಹಾಕಾಳಿ ದೇವರ ಪ್ರತಿಷ್ಠೆ ಹಾಗೂ ಅಷ್ಟಬಂಧ ಲೇಪನ, ಜೀವಕಲಶಾಭಿಷೇಕ, ಜೀವನ್ಯಾಸ, ಬ್ರಹ್ಮಕಲಶಾಭಿಷೇಕ, ನಾಗ ದೇವರ ಸನ್ನಿಧಾನದಲ್ಲಿ ಆಶ್ಲೇಷಾ ಬಲಿ, ಪ್ರಸನ್ನ ಪೂಜೆ, ಬ್ರಾಹ್ಮಣ ಆರಾಧನೆ, ಅನ್ನಸಂತರ್ಪಣೆ, ರಾñರಿ 7ರಿಂದ ರಂಗಪೂಜೆ ಜರಗಲಿದೆ.
ನಲಸೊಪರ ಪರಿಸರದಲ್ಲಿ ಆಧ್ಯಾತ್ಮಿಕ ಚಿಂತನೆಯ ಭಕ್ತರಿಂದ ಶನಿಮಂದಿರವಾಗಿ ಸ್ಥಾಪನೆಗೊಂಡ ಮಂದಿರವು ಕಾಲಕ್ರಮೇಣ ಪರಿವಾರ ದೇವತೆಗಳ ಸ್ಥಾಪನೆಯ ಸಂಕಲ್ಪದೊಂದಿಗೆ ಶ್ರೀ ಧರ್ಮಮಾರಿಯಮ್ಮ ದೇವಸ್ಥಾನವಾಗಿ, ಇದೀಗ ಸಂಪೂರ್ಣ ಜೀರ್ಣೋದ್ಧಾರದಿಂದ ಪುನರ್‌ಸ್ಥಾಪಿಸಲ್ಪಟ್ಟ ದೇವಸ್ಥಾನ ನಲಸೊಪರ ಪರಿಸರದಲ್ಲಿ ಭಕ್ತಿಯ ತಾಣವಾಗಿ ರಾರಾಜಿಸುತ್ತಿದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಮಂದಿರದ ಪ್ರಕಟನೆ ತಿಳಿಸಿದೆ.