Advertisement
ಚಿನ್ನದಗುಡಿ ಹುಂಡಿ ಕಳೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಬಹುಮತ ನೀಡಿದ್ದ ಗ್ರಾಮ. ಬಹುತೇಕ ಕುರುಬ ಸಮುದಾಯದವರೇ ಹೆಚ್ಚಿರುವ ಈ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಸಂಪೂರ್ಣ ಹಿಡಿತವಿದೆ. ಜತೆಗೆ ಸಂಸದ ಆರ್.ಧ್ರುವನಾರಾಯಣ ಕೆಲಸಗಾರ ಎಂಬ ವಿಶ್ವಾಸವಿದೆ. ಈ ಗ್ರಾಮದ ಬಹುತೇಕ ಜನರು ಮೈಸೂರಿಗೆ ಕೂಲಿ ಕೆಲಸಕ್ಕೆ ಬರುತ್ತಾರೆ.
Related Articles
Advertisement
ಲಿಂಗಾಯಿತರ ಪ್ರಾಬಲ್ಯವಿರುವ ದೇವನೂರು ಗ್ರಾಮದಲ್ಲಿ ಒಗ್ಗಟ್ಟು ಒಡೆಯಲು ಕಾಂಗ್ರೆಸ್‌ನವರು ಹೆಚ್ಚು ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರದು. ಬಿಜೆಪಿ ರಾಜಾÂಧ್ಯಕ್ಷ ಯಡಿಯೂರಪ್ಪರ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ಗ್ರಾಮದಲ್ಲೇ ಇದ್ದು ಕಡೇ ಕ್ಷಣದ ಕಸರತ್ತು ನಡೆಸಿದ್ದರು. ಗ್ರಾಮದ ಹಿರಿಯರೊಬ್ಬರು ಮಾತನಾಡಿ, ಬಿಜೆಪಿಯವರೂ ವೊಸಿ ದುಡ್ಡು ಕೊಟ್ಟು ಹೋಗಿದ್ರು, ಜಾಸ್ತಿ ಕೊಡಕೆ ಅವ್ರುದ್ದೇನು ಸರ್ಕಾರ ಇಲ್ವಂತಲ್ಲ ಇಲ್ಲಿ.
ಅದನ್ ತಿಳ್ಕೊಂಡು ಕಾಂಗ್ರೆಸ್‌ನವರು ರಾತ್ರಿ ಲಾರಿಲಿ ದುಡ್ಡು ತಂದು ಸುರ್ಧು ಬುಟ್ಟು ಹೋದ್ರು, ಹೊಸ ನೋಟು ಬಂದವಲ್ಲ ಅದಾ ಒಂದೊಂದು ನೋಟು ಕೊಟ್ಟವ್ರೆ ಎಂದು ಯಾವುದೇ ಮುಚ್ಚುಮರೆ ಇಲ್ಲದೇ ಹೇಳಿದರು. ಮತದಾನ ಕೇಂದ್ರದ ಹೊರಗೆ ಮತಗಟ್ಟೆಗೆ ಬಂದು ಹೋಗುವವರಿಗೆ ರೈಸ್ ಬಾತ್, ಐಸ್‌ಕ್ಯಾಂಡಿ ಸೇವಾರ್ಥ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿತ್ತು.
ಮತದಾನ ಬಹಿಷ್ಕಾರ ವಾಪಸ್: ಇನ್ನು ಮಹದೇವ ನಗರದ ಜನತೆ ಗ್ರಾಮದಲ್ಲಿ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ ಜತೆಗೆ ಗ್ರಾಮದಲ್ಲಿ 600 ಮತಗಳಿದ್ದರೂ ಇಲ್ಲಿ ಮತಗಟ್ಟೆ ಸ್ಥಾಪಿಸಿಲ್ಲ. 3 ಕಿ.ಮೀ ದೂರದ ವೀರದೇವನಪುರದ ಮತಗಟ್ಟೆಗೆ ಹೋಗಬೇಕು ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು.
ಆದರೆ, ಗ್ರಾಮಸ್ಥರನ್ನು ಒಬ್ಬೊಬ್ಬರನ್ನೇ ಮಾತಿಗೆಳೆ ದಾಗ ಮತದಾನ ಬಹಿಷ್ಕಾರಕ್ಕೆ ಕಾರಣವಾದ ಅಂಶವೇ ಬೇರೆಯಾಗಿತ್ತು. ರಂಗದಾಸ್ ಎಂಬ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಮುಖಂಡರಿಂದ ಹಣ ಪಡೆದುಕೊಂಡಿದ್ದರೂ ನಮಗೆ ಹಣ ಹಂಚಿಲ್ಲ. ಮಂಡ್ಯ, ಬೆಂಗಳೂರು, ಕೇರಳ, ಕೊಡಗಿಗೆ ದುಡಿಯಲು ಹೋಗಿದ್ದವರೆಲ್ಲಾ ವೋಟ್ ಹಾಕಲು ಬಂದಿದ್ದೇವೆ, ಆದರೆ ರಂಗದಾಸ್ ನಮಗೆಲ್ಲಾ ಬೈದು ಅವಮಾನ ಮಾಡಿರೋದ್ರಿಂದ ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಮಧ್ಯಾಹ್ನದ ನಂತರ ವಿಷಯ ತಿಳಿದು ಕೆಲ ಸ್ಥಳೀಯ ಮುಖಂಡರು ಆಗಮಿಸಿ ಮನವೊಲಿಸಿ ಆಟೋಗಳಲ್ಲಿ ಜನರನ್ನು ಮತಗಟ್ಟೆಗೆ ಕಳುಹಿಸಿದರು.
ನನ್ ವೋಟ್ ಯಾರೋ ಹಾಕುºಟ್ಟವ್ರೆ ಸ್ವಾಮಿಕಳಲೆ ಗ್ರಾಮದ ಮಹದೇವಮ್ಮ ಪೆಚ್ಚು ಮೋರೆ ಹಾಕಿಕೊಂಡು ಮನೆಯತ್ತ ನಡೆದರು. ಮತದಾನ ಮಾಡಲು ಉತ್ಸಾಹದಿಂದ ಪತಿ ಮಹದೇವಯ್ಯ ಜತೆಗೆ ಮಧ್ಯಾಹ್ನ 1 ಗಂಟೆಗೆ ಮತಗಟ್ಟೆಗೆ ಬಂದಿದ್ದ ಮಹದೇವಮ್ಮ ಅವರಿಗೆ ನಿರಾಶೆ ಕಾದಿತ್ತು. ಅದಾಗಲೇ ಮಹದೇವ ಮ್ಮರ ಮತವನ್ನು ಬೇರ್ಯಾರೋ ಚಲಾಯಿಸಿ ಹೋಗಿದ್ದರು, ಹೀಗಾಗಿ ಮತಗಟ್ಟೆ ಅಧಿಕಾರಿ ಗುರುತಿನ ಚೀಟಿ ತೋರಿಸಿದರೂ ಮತದಾನಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಪತಿ ಮತಚಲಾಯಿಸಿದ ನಂತರ ಅವರೊಂದಿಗೆ ಮಹದೇವಮ್ಮ ಮನೆಗೆ ನಡೆದರು. * ಗಿರೀಶ್ ಹುಣಸೂರು