ಪಣಜಿ: ಕಳೆದ ವಾರ ಗೋವಾದ ಕುಂಬಾರ್ಜುವೆಯಲ್ಲಿ ನದಿಯಲ್ಲಿ ಮುಳುಗುತ್ತಿದ್ದ ಮೂವರು ಮಕ್ಕಳನ್ನು ರಕ್ಷಿಸಿದ 10 ವರ್ಷದ ನಾಲ್ಕನೇ ತರಗತಿ ವಿದ್ಯಾರ್ಥಿ ಅಂಕುರ್ ಕುಮಾರ್ ಪ್ರಸಾದ್ ಅವರನ್ನು ಭೇಟಿ ಮಾಡಿದರು. ಅಂಕುರ್ ಕುಮಾರ್ ಅವರ ಶೌರ್ಯಕ್ಕೆ ಮುಖ್ಯಮಂತ್ರಿ 1 ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಿದರು. ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿ ಅಂಕುರ್ ಕುಮಾರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್- ಈ ಧೈರ್ಯಶಾಲಿ ಹುಡುಗನನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗುತ್ತಿದೆ. ಅಂಕುರ್‍ಕುಮಾರ್ ಸಂಜಯ್ ಪ್ರಸಾದ್ ಈ ವಿದ್ಯಾರ್ಥಿಯು ನದಿಯಲ್ಲಿ ಮುಳುಗುತ್ತಿದ್ದ ಮೂವರು ಮಕ್ಕಳ ಪ್ರಾಣ ಉಳಿಸಿದ್ದಾನೆ. ಈತನಿಗೆ 1 ಲಕ್ಷ ರೂ.ಗಳ ಚೆಕ್ ವಿತರಿಸಲಾಗಿದೆ. ಅಂಕುರ್ ಕುಮಾರ್ ಶೌರ್ಯ ಹಾಗೂ ಸಾಹಸದ ಬಗ್ಗೆ ಗೋವಾ ರಾಜ್ಯವೇ ಹೆಮ್ಮೆಪಡುತ್ತದೆ. ಅವನು ತೋರಿಸಿದ ಉತ್ತಮ ನಡತೆ ಮತ್ತು ಧೈರ್ಯ ನಿಜಕ್ಕೂ ಶ್ಲಾಘನೀಯ. ಈತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಚಿವ ಬಾಬೂಶ್ ಮೊನ್ಸೆರಾತ್ ಉಪಸ್ಥಿತರಿದ್ದರು.