ಪಣಜಿ: ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಉತ್ತರ ಗೋವಾದ ಕಲಾಂಗುಟ್‌ನಲ್ಲಿರುವ ತನ್ನ ಮನೆಯಲ್ಲಿ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಫ್ರೆಂಚ್ ನಟಿ ಮೇರಿಯನ್ನೆ ಬೊರ್ಗೊ(75) ಆರೋಪಿಸಿದ್ದಾರೆ.
ಗುರುವಾರ ವಿಡಿಯೋ ಬಿಡುಗಡೆ ಮಾಡಿರುವ ಅವರು, “ಕಲಾಂಗುಟ್‌ನ ನನ್ನ ಮನೆಯಲ್ಲಿ ನಾನು ಆತಂಕದ ಮತ್ತು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದೇನೆ.
ನನ್ನ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿರುವ ಕೆಲವರು ಕಳೆದ ಮೂರು ದಿನಗಳಿಂದ ನನ್ನ ಮನೆಯ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ, ಇದು ಸಿವಿಲ್ ಪ್ರಕರಣವೆಂದು, ಕೋರ್ಟಿಗೆ ಹೋಗುವಂತೆ ಕೈಚೆಲ್ಲಿದ್ದಾರೆ. ನಿವೃತ್ತಿಯ ಜೀವನ ಕಳೆಯಲೆಂದು ನಾನು ಇಲ್ಲಿ ಮನೆ ಖರೀದಿಸಿದ್ದೆ,’ ಎಂದು ಅವಲತ್ತುಕೊಂಡಿದ್ದಾರೆ.