Advertisement
ಮುಂದುವರಿದ ದೇಶ ಮತ್ತು ದೇಶದ ಮೆಟ್ರೋ ಸಿಟಿಗಳಲ್ಲಿ ಮಾತ್ರ ಕಾಣುವ ಈ ಬೊಲಾರ್ಡ್ ವ್ಯವಸ್ಥೆ ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಅಳವಡಿಸಲಾಗುತ್ತಿದ್ದು, ನಗರದ ವಾಣಿಜ್ಯ ವ್ಯವಹಾರಗಳ ಹೃದಯ ಭಾಗ ಎನಿಸಿರುವ ಗಾಂಧಿ ಬಜಾರ್‌ನಲ್ಲಿ “ಬೊಲಾರ್ಡ್’ ಬಳಕೆಗೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಆ. 21ರಂದು ಇದರ ಉದ್ಘಾಟನೆ ನೆರವೇರಲಿದೆ. ಈ ಬೊಲಾರ್ಡ್ ವ್ಯವಸ್ಥೆ ಅಳವಡಿಸಿದರೆ ದ್ವಿಚಕ್ರ ವಾಹನದ ಹೊರತಾಗಿ ಬೇರಾವುದೇ ವಾಹನ ಸಂಚಾರ ಆ ಸ್ಥಳದಲ್ಲಿ ಸಾಧ್ಯವಿಲ್ಲ. ಪದೇಪದೆ ಸರಿಸಬೇಕಾದ ಬ್ಯಾರಿಕೇಡ್‌ನ ಬದಲಿಗೆ ಶಾಶ್ವತವಾಗಿರಸ್ತೆಯಲ್ಲಿ ಅಳವಡಿಸುವ ವ್ಯವಸ್ಥೆಯೇ ಈ ಬೊಲಾರ್ಡ್. ನೆಲದೊಳಗೆ ಅಳವಡಿಸುವ ಬೊಲಾರ್ಡ್ ಕಂಬಗಳನ್ನು ಬೇಕೆನಿಸಿದಾಗ ಮೇಲಕ್ಕೆತ್ತಿ ಬೀಗ ಹಾಕಿದರೆ ಬ್ಯಾರಿಕೇಡ್ ರೀತಿಯಲ್ಲಿ ಕೆಲಸ ಮಾಡುತ್ತದೆ.
ಹುಗಿಯಲಾಗುತ್ತದೆ. ಅಗತ್ಯಕ್ಕನುಗುಣವಾಗಿ ಬೊಲಾರ್ಡ್‌ನ್ನು ಮೇಲೆತ್ತಿ ಅದಕ್ಕೆ ಬೀಗ ಹಾಕಿದರೆ ಮುಗಿಯಿತು. ಪದೇಪದೆ ಕಬ್ಬಿಣದ ಬ್ಯಾರಿಕೇಡ್ ಇಡುವುದು ತಪ್ಪುತ್ತದೆ. ಪ್ರಸ್ತುತ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಅಳವಡಿಸಲಾಗಿರುವ ಬೊಲಾರ್ಡ್ ನೆಲಮಟ್ಟದಿಂದ 3 ಅಡಿ ಎತ್ತರದಲ್ಲಿದ್ದು ಪ್ರತಿ ಎರಡು ಕಂಬದ ನಡುವಿನ ಅಂತರ 3.75 ಅಡಿ ಇದೆ. ಇದರಿಂದಾಗಿ ದ್ವಿಚಕ್ರ ಹೊರತುಪಡಿಸಿ ಆಟೋ ಸೇರಿ ಯಾವುದೇ ವಾಹನ ಗಾಂಧಿ ಬಜಾರ್‌ನ ಮುಖ್ಯ ರಸ್ತೆಯಿಂದ ಪ್ರವೇಶಿಸುವುದು ಸಾಧ್ಯವಾಗದು. ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಬೊಲಾರ್ಡ್‌ಗೆ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗಿದೆ.
Related Articles
23 ಸಾವಿರ ರೂ.ಗೆ ಉತ್ತಮ ಗುಣಮಟ್ಟದ ಬೊಲಾರ್ಡ್ ತಯಾರಿಸಿಕೊಟ್ಟಿದ್ದಾರೆ.
Advertisement
ಗೋಪಾಲ್ ಯಡಗೆರೆ